ಸವಾಕ್ ಜಿಲ್ಲಾ ಸಮಾವೇಶ ನ್ಯಾಯ ದೊರಕಿಸಲಿದೆ-ಎಂ.ಉಮೇಶ್ ಸಾಲ್ಯಾನ್
ಉಪ್ಪಳ: ಕಲಾವಿದರು, ಕಲೆ ಸಂಬಂಧಿ ಕಾರ್ಯನಿರ್ವಹಿಸುವವರು ಸಂಘಟಿತರಾಗದ ಹೊರತು ಹಕ್ಕುಗಳ ಸಂರಕ್ಷಣೆ ಸಾಧ್ಯವಿಲ್ಲ. ಸಮಾಜದ ಇತರ ವಿಭಾಗಗಳು ಏಕೀಕರಣಗೊಂಡು ಮುನ್ನಡೆಯುತ್ತಿರುವಾಗ ಸಾಂಸ್ಕೃತಿಕ ರಂಗ ಹೊರಗುಳಿದಲ್ಲಿ ಅಸಮಾನತೆಗೆ ಕಾರಣವಾಗಿ ವ್ಯಾಪಕ ಸಮಸ್ಯೆಗಳಿಗೆ ಎಡೆಯಾಗುವುದು ಎಂದು ಸ್ಟೇಜ್ ಆಟರ್ಿಸ್ಟ್ ಆಂಡ್ ವಕ್ಸರ್್ ಅಸೋಸಿಯೇಶನ್ ಕೇರಳ(ಸವಾಕ್) ಜಿಲ್ಲಾ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.
ಸವಾಕ್ ಮಂಜೇಶ್ವರ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಪೈವಳಿಕೆ ಸಮೀಪದ ಜೋಡುಕಲ್ಲಿನಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜನವರಿಯನಲ್ಲಿ ನಡೆಯಲಿರುವ ಜಿಲ್ಲಾ ಸಮಾವೇಶ ಮತ್ತು ಸಾಂಸ್ಕೃತಿಕ ಶಕ್ತಿ ಪ್ರದರ್ಶನವು ಜಿಲ್ಲೆಯಲ್ಲಿ ಹೊಸ ಅಲೆ ಸೃಷ್ಟಿಸಲಿದ್ದು, ಕಲಾವಿದರ ನ್ಯಾಯಯುತ ಬೇಡಿಕೆಗಳಿಗೆ ಮನ್ನಣೆ ದೊರಕುವಲ್ಲಿ ಬಲ ನೀಡಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಸವಾಕ್ ಪೈವಳಿಕೆ ಘಟಕಾಧ್ಯಕ್ಷ ಪ್ರಮೋದ್ ಪಣಿಕ್ಕರ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಜಿಲ್ಲಾ ಕಾರ್ಯದಶರ್ಿ ತುಳಸೀಧರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸಂಘಟನಾತ್ಮಕ ವಿವರಗಳನ್ನು ನೀಡಿದರು.
ಜಿಲ್ಲಾ ಮುಖಂಡರಾದ ಉಮೇಶ್ ಮಾಸ್ತರ್ ಪ್ಯೂಶನ್, ದಿವಾಣ ಶಿವಶಂಕರ ಭಟ್, ಹಾಗೂ ಕೆ.ರವೀಂದ್ರ, ಸುಭಾನಂದ ಶೆಟ್ಟಿ ಕುಳೂರು, ರಾಜಾರಾಮ ಬಲ್ಲಾಳ್ ಚಿಪ್ಪಾರು, ಯಶೋಧ, ಜಯಂತಿ, ಅರುಣಾವತಿ, ಸೌಮ್ಯ, ಶಶಿ ಕೂಳೂರು, ಗೋಪಾಲಕೃಷ್ಣ ಕೆ, ಸಂಜೀವ ಶೆಟ್ಟಿ ಚಟ್ಲ, ಅಜಿತ್ ರಾಜ್ ಕೆ, ಕಮಲಾಕ್ಷ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ರಾಜಾರಾಮ ಬಲ್ಲಾಳ್ ಸ್ವಾಗತಿಸಿ, ವಂದಿಸಿದರು.