HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಐಡೆಡ್ ಶಾಲಾ ವಿದ್ಯಾಥರ್ಿಗಳಿಗೂ ಉಚಿತ ಸಮವಸ್ತ್ರ  ಯೋಜನೆ
   ಕುಂಬಳೆ: ಸರಕಾರಿ ಶಾಲೆಗಳಂತೆಯೇ ಐಡೆಡ್ (ಅನುದಾನಿತ) ಶಾಲೆಗಳ ವಿದ್ಯಾಥರ್ಿಗಳಿಗೂ ಉಚಿತ ಸಮವಸ್ತ್ರ  ವಿತರಿಸಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಇದಕ್ಕಾಗಿ ಕೇರಳ ಸಾರ್ವತ್ರಿಕ ಶಿಕ್ಷಣ ನಿದರ್ೇಶಕರು 64.84 ಕೋಟಿ ರೂಪಾಯಿ ಬಿಡುಗಡೆಗೊಳಿಸಿದ್ದಾರೆ.
    ಈ ಯೋಜನೆಯಂತೆ ಐಡೆಡ್ ಶಾಲೆಗಳ ಒಂದನೇ ತರಗತಿಯಿಂದ ಆರಂಭಗೊಂಡು ಎಂಟನೇ ತರಗತಿ ತನಕದ ವಿದ್ಯಾಥರ್ಿಗಳಿಗೆ ಉಚಿತವಾಗಿ ಸಮವಸ್ತ್ರ  ನೀಡಲಾಗುವುದು. ಸರಕಾರಿ ಶಾಲೆಗಳಲ್ಲಿ  ಕಲಿಯುತ್ತಿರುವ ವಿದ್ಯಾಥರ್ಿಗಳಿಗೆ ಉಚಿತ ಸಮವಸ್ತ್ರ  ವಿತರಿಸಲು ಎಸ್ಎಸ್ಎ ಈ ಹಿಂದೆಯೇ 30 ಕೋಟಿ ರೂ. ಒದಗಿಸಿತ್ತು.
   ಐಡೆಡ್ ಶಾಲೆಗಳಲ್ಲಿ  ಈ ಯೋಜನೆಯನ್ನು  ಕಾರ್ಯರೂಪಕ್ಕೆ ತರಲಾಗುವುದು ಎಂದು ರಾಜ್ಯ ಬಜೆಟ್ನಲ್ಲಿ  ತಿಳಿಸಲಾಗಿದ್ದರೂ, ಅದಕ್ಕೆ ಹಣ ಮಂಜೂರು ಮಾಡುವಲ್ಲಿ  ವಿಳಂಬ ಉಂಟಾಗಿತ್ತು.  ಅಕ್ಟೋಬರ್ 21ರಂದು ಈ ಯೋಜನೆಗಾಗಿ ಸರಕಾರವು 71.71 ಕೋಟಿ ರೂ. ನೀಡಿತ್ತು. ಆ ಮೊತ್ತದಿಂದ 64.84 ಕೋಟಿ ರೂ. ಗಳನ್ನು  ಶಿಕ್ಷಣ ಇಲಾಖೆ ಇದೀಗ ಒದಗಿಸಿದೆ.
   ಈ ಹಣವನ್ನು  ಐಡೆಡ್ ಶಾಲೆಗಳ ಮುಖ್ಯೋಪಾಧ್ಯಾಯರು ಪಡೆದುಕೊಂಡು ಆಯಾ ಶಾಲೆಗಳಲ್ಲಿ  ಕಲಿಯುತ್ತಿರುವ ವಿದ್ಯಾಥರ್ಿಗಳ ಸಂಖ್ಯೆಗೆ ಅನುಸಾರ ಪ್ರತಿ ವಿದ್ಯಾಥರ್ಿಗೆ ತಲಾ ಎರಡು ಜೋಡಿ ಸಮವಸ್ತ್ರ  ಬಟ್ಟೆ  ವಿತರಿಸಬೇಕಾಗಿದೆ. ಆಯಾ ಶಾಲೆಗಳ ರಕ್ಷಕ ಶಿಕ್ಷಕ ಸಮಿತಿ ಮೂಲಕ ಬಟ್ಟೆ  ಖರೀದಿಸಿ ವಿದ್ಯಾಥರ್ಿಗಳಿಗೆ ವಿತರಿಸುವಂತೆ ಶಿಕ್ಷಣ ಇಲಾಖೆ ನಿದರ್ೇಶಿಸಿದೆ. ಪ್ರತಿ ಒಂದು ಜೋಡಿ ಸಮವಸ್ತ್ರಕ್ಕೆ ತಲಾ 200ರೂ. ನಂತೆ ಪ್ರತಿ ವಿದ್ಯಾಥರ್ಿಗೆ ಎರಡು ಜೋಡಿ ಸಮವಸ್ತ್ರಕ್ಕಾಗಿ ತಲಾ 400 ರೂ. ವನ್ನು ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries