HEALTH TIPS

No title

                 ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಿ ರೂಪುಗೊಂಡ ಬನಾರಿ ಯಕ್ಷಗಾನ ಕಲಾ ಸಂಘ
   ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವು ಯಕ್ಷಗಾನ ಕಲಾರಂಗದಲ್ಲಿ ನಿರಂತರತೆಯನ್ನು ಕಾಪಾಡಿಕೊಂಡು ಅತ್ಯಂತ ಕ್ರೀಯಾಶೀಲವಾಗಿ ಮುನ್ನಡೆಯುತ್ತಾ ಪ್ರಸ್ತುತ ಒಂದು ಯಕ್ಷಗಾನದ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಿ ರೂಪುಗೊಂಡಿದೆ. ಯಕ್ಷಗಾನ ಕಲೋಪಾಸಕರಾದ ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ ಅವರು ಗೋಪಾಲಕೃಷ್ಣ ದೇವರ ಸಾನ್ನಿದ್ಯದೊಂದಿಗೆ ಹುಟ್ಟು ಹಾಕಿ ಬೆಳೆಸಿದ ಪವಿತ್ರವಾದ ಕಲಾ ಸಂಘವು ಕಲಾಕ್ಷೇತ್ರದಲ್ಲಿ ನೆಲೆಗೊಳ್ಳಲಿದೆ ಎಂದು ಹಿರಿಯ ಸಮಾಜ ಸೇವಕ ಹೇಮನಾಥ ಶೆಟ್ಟಿ ಹೇಳಿದರು.
 ಅವರು ಇತ್ತೀಚೆಗೆ ದೇಲಂಪಾಡಿಯ ಬನಾರಿ ಕೀರಿಕ್ಕಾಡು ಅಧ್ಯಯನ ಕೇಂದ್ರದ ಬಯಲು ರಂಗ ವೇದಿಕೆಯಲ್ಲಿ ಕಲಾ ಸಂಘಕ್ಕೆ ಸಾರ್ವಜನಿಕ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
  ಧಾಮರ್ಿಕ ಮುಂದಾಳು ಊಜಂಪಾಡಿ ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಚಂದ್ರಶೇಖರ ಮಂಗಳೂರು ಮತ್ತು ಕಲ್ಲಡ್ಕಗುತ್ತು ಸೀತಾರಾಮ ರೈ ನೇತೃತ್ವ ನೀಡಿದರು. ಕಡೆಂಜ ಸತ್ಯಪಾಲ್ ರೈ, ಕೀರಿಕ್ಕಾಡು ವನಮಾಲ ಕೇಶವ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
  ದಿ.ಬೆಳ್ಳಿಪ್ಪಾಡಿ ತಿಮ್ಮಪ್ಪ ರೈ ಮತ್ತು ಕಾವೇರಿ.ಟಿ.ರೈ ಕಲ್ಲಡ್ಕ ಅವರ ಸ್ಮರಣಾರ್ಥ ಮಕ್ಕಳು ಮತ್ತು ಕುಟುಂಬದವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಿವೃತ್ತ ಆರಕ್ಷಕ ಅಧಿಕಾರಿ ಕಲ್ಲಡ್ಕಗುತ್ತು ವಿಶ್ವನಾಥ ರೈ ಅವರ ವ್ಯವಸ್ಥಾಪಕತ್ವದಲ್ಲಿ ಕಾರ್ಯಕ್ರಮ ಪ್ರಸ್ತುತಗೊಂಡಿತು.  ಡಾ.ರಮಾನಂದ ಬನಾರಿ ಪ್ರಾಸ್ತಾವಿಕ ಮಾತನಾಡಿದರು. ವೆಂಕಟ್ರಮಣ ಭಟ್ ದೇಲಂಪಾಡಿ ಉಪಸ್ಥಿತರಿದ್ದರು. ಹಿರಿಯ ಕಲಾವಿದರನ್ನು ಈ ಸಂದರ್ಭ ಗೌರವಿಸಲಾಯಿತು.
    ಉಷಾಕಿರಣ ಮಂಗಳೂರು ಸ್ವಾಗತಿಸಿ, ಸುದರ್ಶನ ರೈ ಅಸೈಗೋಳಿ ವಂದಿಸಿದರು. ನಾರಾಯಣ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.
  ಬಳಿಕ ಶ್ರೀ ವನದುಗರ್ಾ ಪ್ರಸಾದಿತದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ ಇವರಿಂದ ವನದುಗರ್ಾ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.

               

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries