HEALTH TIPS

No title

                 ಗಡಿನಾಡ ನಾಟಕೋತ್ಸವದಲ್ಲಿ ಮಿಂಚಲಿರುವ ಡ್ರಾಮಾ ಜೂನಿಯರ್ ಅನೂಪ್ ರಮಣ್ ಶರ್ಮ
    ಬದಿಯಡ್ಕ: ಕನರ್ಾಟಕದಾದ್ಯಂತ ತನ್ನ ಹಾಸ್ಯ ಅಭಿನಯದ ಮೂಲಕ ಮನೆ ಮಾತಾಗಿರುವ ಸ್ವಸಾಮಥ್ರ್ಯದಿಂದಲೇ ಝೀ ವಾಹಿನಿಯ ಡ್ರಾಮಾ ಜೂನಿಯರ್ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದ ಗ್ರಾಮೀಣ ಪ್ರದೇಶ ಮುಳ್ಳೇರಿಯಾದ ಅನೂಪ್ ರಮಣ್ ಶರ್ಮ ಗಡಿನಾಡು  ಕಾಸರಗೋಡಿನಲ್ಲಿ ನಡೆಯಲಿರುವ ನಾಟಕೋತ್ಸವದಲ್ಲಿ ಅಭಿನಯಿಸುವ ಸಿದ್ಧತೆ ನಡೆಸುತ್ತಿದ್ದಾನೆ.
  ಗುರುವಾರದಿಂದ ಡಿ. 30 ರವರೆಗೆ  ಸಂಜೆ 7ರಿಂದ ಕನರ್ಾಟಕ ನಾಟಕ ಅಕಾಡೆಮಿ ಬೆಂಗಳೂರು ವತಿಯಿಂದ ಅಪೂರ್ವ ಕಲಾವಿದರು ಕಾಸರಗೋಡು ಇದರ ಸಹಯೋಗದಲ್ಲಿ  ಕಾಸರಗೋಡಿನ ಕೊರಕ್ಕೋಡು ನಾಗರಕಟ್ಟೆಯ ಭಿಕ್ಷು ಲಕ್ಷ್ಮಣಾನಂದ  ಸ್ವಾಮೀಜಿ ಸ್ಮಾರಕ ಸಭಾಂಗಣದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕೋತ್ಸವದ ಎರಡನೇ  ದಿನವಾದ ಡಿ.29ರಂದು(ಇಂದು) ಸಂಜೆ 7ರಿಂದ ಮಂಟೇಸ್ವಾಮಿ ಕಥಾ ಪ್ರಸಂಗ ಎಂಬ ನಾಟಕ ಕಾಸರಗೋಡಿನ ಹಿರಿಯ ಕಿರಿಯ  ಪ್ರತಿಭಾವಂತ ಕಲಾವಿದರ ಕಲಾ ಸಂಗಮ ಪ್ರತಿಷ್ಠಾನದ ಕಲಾವಿದರಿಂದ ಚೊಚ್ಚಲ  ಪ್ರದರ್ಶನವನ್ನು ಕಾಣಲಿರುವುದು.  ಇದರಲ್ಲಿ  ಡ್ರಾಮಾ ಜೂನಿಯರ್ ಖ್ಯಾತಿಯ ಅನೂಪ್  ಪ್ರಧಾನ ಹಾಸ್ಯ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿರುವನು. ಚಲನಚಿತ್ರ ನಟರಾದ ಬಾಲಕೃಷ್ಣ ಮಾಸ್ತರ್ ಅಡೂರು, ಸುಂದರ ಮವ್ವಾರ ಇನ್ನಿತರ ಪ್ರಧಾನ ಪಾತ್ರಗಳಿಗೆ ಜೀವ ತುಂಬಲಿರುವರು.  ಹಿರಿಯ ಅನುಭವಿ ಕಲಾವಿದರುಗಳಾದ  ಭಾರತಿ ಬಾಬು ಕಾಸರಗೋಡು, ಯತೀಶ್ ರೈ ಮುಳ್ಳೇರಿಯಾ,  ವಿಜಯಕುಮಾರ್ ಪಾವಳ, ಗಿರಿಜಾ ತಾರನಾಥ ಕುಂಬಳೆ ಗಮನ ಸೆಳೆಯುವ ಪಾತ್ರ ನಿರ್ವಹಿಸಲಿದ್ದಾರೆ. ಬಾಲಮಿತ್ರ ಸದಾಶಿವ ಮಾಸ್ತರ್ ಪೊಯ್ಯೆ, ಅಶೋಕ ಮಾಸ್ತರ್ ಕೊಡ್ಲಮೊಗರು, ಸುಜೀತ್ ಚೇವಾರು, ಉಪನ್ಯಾಸಕ ನಿತ್ಯಾನಂದ ಕುಲಾಲ್ ಬೇಕೂರು, ರಾಜ್ ಬಾಯಾರು, ಶಶಿಕುಮಾರ್ ಕುಳೂರು, ಪ್ರಸಾದ್ ರೈ ಮುಗು, ಬಾಲನಟ ಪೂಣರ್ೇಶ್ ರೈ ಮುಳ್ಳೇರಿಯಾ, ಜಯಶ್ರೀ ಮಲ್ಲ, ಮಾಲಿನಿ ಕನ್ನಟಿಪಾರೆ, ಮಮತಾ ಬಂದ್ಯೋಡು ಮುಂತಾದ ಯುವ ಕಲಾವಿದರ ನಟನೆಗೆ ಈ ನಾಟಕ ಸಾಕ್ಷಿಯಾಗಲಿದೆ.
   ಉತ್ತರ ಕನರ್ಾಟಕದಲ್ಲಿ ಆರಾಧಿಸಲ್ಪಡುವ ಸಿದ್ದಾಪ್ಪಾಜಿ ಮಂಟೇಸ್ವಾಮಿ ಎಂಬ ಪವಾಡ ಪುರುಷನ ಸುತ್ತ ಹೆಣೆದಿರುವ  ರೋಚಕ ಕಥೆಯಿರುವ ಈ ನಾಟಕವನ್ನು ಪ್ರೊ.ಜಿ.ಶಿವಪ್ರಕಾಶ್ ರಚಿಸಿದ್ದಾರೆ.  ಜಿಲ್ಲೆಯ ಯುವ ನಾಟಕ ನಿದರ್ೇಶಕ  ಉದಯ ಸಾರಂಗ ನಾಟಕವನ್ನು ನಿದರ್ೇಶಿಸಿದ್ದಾರೆ.  ದೀಕ್ಷಿತ್ ಕಾಸರಗೋಡು  ಸಂಗೀತ ನೀಡಲಿರುವರು.
 







Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries