ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 08, 2017
ನವೋತ್ಸಾಹ, ಭರವಸೆಗಳ ಮೂಲಕ ವಿವೇಕಾನಂದರು ಪ್ರೇರಕರಾದರು-ಪ್ರೊ.ಪಟ್ಟಾಭಿರಾಮ ಸೋಮಯಾಜಿ.
ಮಂಜೇಶ್ವರ: ರಾಷ್ಟ್ರದ ಸಾರ್ವಭೌಮತೆ, ಏಕತೆ ಮತ್ತು ಆಧ್ಯಾತ್ಮಿಕತೆಯನ್ನು ಎತ್ತಿಹಿಡಿದು ಯುವ ಸಮೂಹದಲ್ಲಿ ಭರವಸೆಯ ಉದ್ದೀಪನವನ್ನು ನೀಡಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರ ಕೊಡುಗೆ ಭಾರತದ ಹೆಮ್ಮೆ. ವಿವೇಕಾನಂದರ ಆದರ್ಶಗಳನ್ನು ಮತ್ತೆಮತ್ತೆ ನೆನಪಿಸಿ ಇಂದಿನ ಸಮಾಜಕ್ಕೆ ಅನ್ವಯಿಸುವ ಕಾರ್ಯಚಟುವಟಿಕೆಗಳು ಸ್ತುತ್ಯರ್ಹ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ಸರಕಾರದ ಸಂಸ್ಕೃತಿ ಇಲಾಖೆಯು ಸ್ವಾಮಿ ವಿವೇಕಾನಂದರು ಕೇರಳ ಸಂದರ್ಶನ ನಡೆಸಿ 125ನೇ ವಷರ್ಾಚರಣೆಯ ರಾಜ್ಯಾದ್ಯಂತ ಆಚರಿಸುತ್ತಿರುವ "ಉತ್ತಿಷ್ಠತ ಜಾಗ್ರತಃ...ನವೋತ್ಥಾನ ಸಂಧ್ಯಾ ದೃಶ್ಯ" ಕಾರ್ಯಕ್ರಮದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕೇರಳ ತುಳು ಅಕಾಡೆಮಿಯ ಸಹಯೋಗದೊಂದಿಗೆ ಗುರುವಾರ ಸಂಜೆ ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಮಗ್ರ ಜ್ಞಾನ ಸಂಪತ್ತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಪ್ರೇರಕರಾಗಿದ್ದ ವಿವೇಕಾನಂದರು, ಮಲಗಿದ್ದ ಭಾರತವನ್ನು ಮತ್ತೆ ಎಚ್ಚರಿಸುವಲ್ಲಿ ಆಂದೋಲನವನ್ನು ಸೃಷ್ಟಿಸಿದ್ದರು. ಅತ್ಯಂತ ಹಿಂದುಳಿದಿದ್ದ ಕೇರಳದ ಅಂದಿನ ಜನಜೀವನ, ಸಂಸ್ಕೃತಿಯ ಬಗ್ಗೆ ಮರುಗಿ ನವೋತ್ಥಾನಕ್ಕೆ ಚಾಲನೆ ನೀಡಿದ ವಿವೇಕಾನಂದರು ನವ ಕೇರಳದ ಶಿಲ್ಪಿ ಎಂದು ತಿಳಿಸಿದರು. ಇಂದಿನ ಯುವ ಸಮೂಹಕ್ಕೆ ವಿವೇಕಾನಂದರ ತತ್ವಗಳನ್ನು ತಿಳಿಯಪಡಿಸುವ ತುತರ್ು ಪ್ರಯತ್ನಗಳು ಆಗಬೇಕು. ನಮ್ಮೊಳಗಿನ ಶಕ್ತಿ ಸಂಚಯನಗೊಂಡು ಬೆಳಗುವಲ್ಲಿ ವಿವೇಕಾನಂದ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಬ್ಲಾಕ್ ಪಂಚಾಯತು ಸದಸ್ಯ, ಕಾರ್ಯಕ್ರಮ ಸಂಚಾಲಕ ಕೆ.ಆರ್.ಜಯಾನಂದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಗಳೂರು ಯುನಿವಸರ್ಿಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಪಟ್ಟಾಭಿರಾಮ ಸೋಮಯಾಜಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮನಿಗಿಂತ ಮೊದಲು ರಾಷ್ಟ್ರವ್ಯಾಪಿ ಸಂಚಾರ ನಡೆಸಿ ಇಲ್ಲಿಯ ಮಣ್ಣಿನ ಶಕ್ತಿಯನ್ನು ಆವಾಹಿಸಿಕೊಂಡ ಮೊದಲ ಮಹಾನ್ ಪುರುಷ ವಿವೇಕಾನಂದರು ಹೊಸ ಚೈತನ್ಯ, ಆತ್ಮವಿಶ್ವಾಸ ಮೂಡಿಸಿದವರು ಎಂದು ತಿಳಿಸಿದರು. ಭಾರತದ ಚರಿತ್ರೆ, ಶಕ್ತಿಯನ್ನು ರಾಷ್ಟ್ರದ ಹೊರಗೆ, ಅನ್ಯ ರಾಷ್ಟ್ರಗಳಲ್ಲಿ ತತ್ವಶಾಸ್ತ್ರದ ನೆಲೆಗಟ್ಟಲ್ಲಿ ಪ್ರಚುರಪಡಿಸಿದ ಸ್ವಾಮಿ ವಿವೇಕಾನಂದರು ರಾಷ್ಟ್ರದೊಳಗಿನ ಹಲವು ಅಸಹ್ಯಗಳನ್ನು ಕಟುವಾಗಿ ಟೀಕಿಸಿದವರು ಎಂದು ಅಭಿಪ್ರಾಯಪಟ್ಟರು. ಪ್ರತಿಯೊಂದು ಧರ್ಮದ ಆಧ್ಯಾತ್ಮಿಕ ಶಕ್ತಿ, ತತ್ವಾದರ್ಶ, ಘನತೆಯನ್ನು ಸಮೀಕರಿಸಿ ಮಾನವನಾಗಿ ಬದುಕುಕಟ್ಟುವುದನ್ನು ಕನಸುಕಂಡ ವಿವೇಕಾನಂದರು ಎಲ್ಲಾ ಕಾಲಕ್ಕೂ ಪ್ರಸ್ತುತರೆನಿಸುವ ಧೀಶಕ್ತಿಯ ಪ್ರತೀಕ ಎಂದು ತಿಳಿಸಿದರು.
ಡಾ.ಸಿ.ಬಾಲನ್, ಜಿಲ್ಲಾ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಅಝೀಸ್ ಹಾಜಿ, ಶಶಿಕಲಾ, ಉಮರ್ ಬೋರ್ಕಳ, ಶಂಸೀನಾ, ಬಾಬು ಮಾಸ್ತರ್, ಬಶೀರ್ ಕನಿಲ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಜ್ಯೋತಿ, ಹಮೀದ್ ಹೊಸಂಗಡಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ತುಳು ಅಕಾಡೆಮಿ ಪ್ರಧಾನ ಕಾರ್ಯದಶರ್ಿ ಬಾಲಕೃಷ್ಣ ಶೆಟ್ಟಿಗಾರ್ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ರಸಪ್ರಶ್ನೆ ಸ್ಪಧರ್ೆಯ ವಿಜೇತ ವಿದ್ಯಾಥರ್ಿಗಳಿಗೆ ಹುಮಾನ ವಿತರಿಸಲಾಯಿತು. ಬಳಿಕ ರಾಜ್ಯದ ಸಂಸ್ಕೃತಿ ಇಲಾಖೆಯ ವಿವಿಧ ಕಲಾತಂಡಗಳಿಂದ ಸ್ವಾಮಿ ವಿವೇಕಾನಂದರ ಸಿದ್ದಾಂತಗಳನ್ನು ಆದರಿಸಿದ ಸಾಂಸ್ಕೃತಿಕ ವೈವಿಧ್ಯಗಳು ಪ್ರದರ್ಶನಗೊಂಡವು.
(ಚಿತ್ರಗಳ ಜೊತೆಗೆ ಸಾಂಸ್ಕೃತಿಕ ವೈವಿಧ್ಯದ ವಿಡಿಯೋ ತುಣುಕು ವೀಕ್ಷಿಸಿ...





