ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಭಜನಾ ಮಂದಿರದ 25ನೇ ವಷರ್ಾಚರಣೆ- ಅಖಂಡ ಭಜನಾ ಕಾರ್ಯಕ್ರಮ
ಬದಿಯಡ್ಕ: ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರವು ಉದ್ಘಾಟನೆಗೊಂಡು 25 ಸಂವತ್ಸರಗಳನ್ನು ಪೂರೈಸಿದ ಶುಭಸಮಾರಂಭದ ಪ್ರಯುಕ್ತ ಬುಧವಾರ ಬೆಳಗ್ಗೆ ಸೂಯರ್ೋದಯದಿಂದ ಸೂಯರ್ಾಸ್ಥಮಾನದ ತನಕದ ಅಖಂಡ ಭಜನಾ ಕಾರ್ಯಕ್ರಮ ನಡೆಯಿತು.
25 ವರ್ಷಗಳ ಹಿಂದೆ ಮಂದಿರ ನಿಮರ್ಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಹಿರಿಯರಾದ ಶ್ಯಾಮ ಭಟ್ ಸರಳಿ ಸೂಯರ್ೋದಯ ಕಾಲದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಶ್ರೀ ದೈವಗಳ ಸೇವಾಸಮಿತಿ ಹಾಗೂ ಶ್ರೀ ಹರಿಹರ ಭಜನಾ ಮಂದಿರದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಮೂತರ್ಿ ವಿಷ್ಣುಶರ್ಮ ಅಣಬೈಲುರವರು ಗಣಪತಿ ಹೋಮವನ್ನು ನಡೆಸಿ ಪ್ರಾರ್ಥನೆಗೈದರು. ಶ್ರೀ ಹರಿಹರ ಭಜನಾ ಸಂಘ ಮಾಡತ್ತಡ್ಕ, ವಿಶ್ವಕರ್ಮ ಭುವನೇಶ್ವರಿ ಭಜನಾ ಸಂಘ ವಾಂತಿಚ್ಚಾಲು, ಕುಮಾರಸ್ವಾಮಿ ಭಜನಾ ಸಂಘ ನೀಚರ್ಾಲು, ಶ್ರೀಮಾತಾ ಹವ್ಯಕ ಭಜನಾ ಸಂಘ ಬದಿಯಡ್ಕ, ಆಟರ್್ ಆಫ್ ಲಿವಿಂಗ್ ಕಾಸರಗೋಡು, ಶ್ರೀ ಧರ್ಮಶಾಸ್ತಾ ಭಜನಾ ಸಂಘ ನೀಚರ್ಾಲು, ಶ್ರೀ ಕುದ್ರೆಕ್ಕಾಳಿ ಅಮ್ಮ ಭಜನಾ ಸಂಘ ರತ್ನಗಿರಿ ಬೇಳ, ಶ್ರೀ ಮಹಾವಿಷ್ಣು ಭಜನಾ ಸಂಘ ವಿಷ್ಣುನಗರ ಮುಂಡಿತ್ತಡ್ಕ ಇವರಿಂದ ಭಜನಾ ಸೇವೆ ನಡೆಯಿತು. ಹಿರಿಯರಾದ ಗೋವಿಂದ ಭಟ್ ಮಿಂಚಿನಡ್ಕ, ಶಿವರಾಮ ಅಣಬೈಲು, ಕೃಷ್ಣ ಗುರುಸ್ವಾಮಿ, ರಾಮಪ್ಪ ಮಂಜೇಶ್ವರ, ಚಂದ್ರಶೇಖರ ಅಣಬೈಲು, ರಾಮಚಂದ್ರ ಕೇರ ಮೊದಲಾದವರು ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾಪೂಜೆ, ಅನ್ನದಾನ ನಡೆಯಿತು. ನೂರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.






