ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಕಳಿಯಾಟ ಮಹೋತ್ಸವ ಪೂರ್ವಭಾವಿ ಸಭೆ
ಮುಳ್ಳೇರಿಯ: 2018 ಎ.29ರಿಂದ ಪ್ರಾರಂಭಗೊಂಡು ಮೇ 1ರ ತನಕ ನಡೆಯಲಿರುವ ಮೊಟ್ಟಕುಂಜ ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈವದ ಕಳಿಯಾಟ ಮಹೋತ್ಸವ ಸಮಿತಿಯ ಸಭೆಯು ಮೊಟ್ಟಕುಂಜ ಶ್ರೀ ವಿಷ್ಣುಮೂತರ್ಿ ದೈವಸ್ಥಾನದ ವಠಾರದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವೋಕರ್ೂಡ್ಲು ಬಾಲಕೃಷ್ಣ ಮಾಸ್ಟರ್ ವಹಿಸಿದ್ದರು. ಬಳಿಕ ಅವರು ಮಾತನಾಡಿ ಜನರ ಒಗ್ಗಟ್ಟು, ಶ್ರದ್ಧೆ ಭಕ್ತಿಗಳ ಪ್ರತೀಕವಾಗಿ ಕಳಿಯಾಟ ಮಹೋತ್ಸವವನ್ನು ಯಶಸ್ವಿಗೊಳಿಸಬೇಕಾದ ಹೊಣೆ ಇದೆ. ಭಕ್ತಿ ಮತ್ತು ಶ್ರದ್ಧೆ ಯೋಜಿತ ಕಾರ್ಯವನ್ನು ಯಶಸ್ವಿಗೊಳಿಸಿ ದೈವದ ಕೃಪೆಗೆ ಕಾರಣವಾಗುವುದು ಎಂದು ತಿಳಿಸಿದರು.
ತರವಾಡು ಮೊಕ್ತೇಸರ ಸಂಜೀವ ಶೆಟ್ಟಿ ಮಾತನಾಡಿ ಪಾರಂಪರಿಕ ವಿಧಿವಿಧಾನಗಳೊಂದಿಗೆ ನಡೆಯಲಿರುವ ಕಳಿಯಾಟ ಮಹೋತ್ಸವವು ಭಕ್ತರ ಸಂಕಷ್ಟಗಳನ್ನು ನಿವಾರಿಸಿ ನೆಮ್ಮದಿ ನೀಡುವುದು. ಹಿರಿಯರ ಮಾರ್ಗದರ್ಶನದೊಂದಿಗೆ ಯುವ ಸಮೂಹ ಸಮಾರಂಭದ ಯಶಸ್ವಿಗೆ ಶ್ರದ್ಧಾ ಭಕ್ತಿಯಿಂದ ಕೈ ಜೋಡಿಸಿ ಯಶಸ್ವಿಗೆ ಸಹಕರಿಸುವ ಅಗತ್ಯವಿದೆ ಎಂದು ತಿಳಿಸಿದರು. ಕಾಯರ್ಾಧ್ಯಕ್ಷ ಸದಾನಂದ ಅಡ್ಕ ಮಿಂಚಿಪದವು, ಸಮಿತಿ ಪ್ರಧಾನ ಕಾರ್ಯದಶರ್ಿ ಕನಕತ್ತೋಡಿ ರಾಘವನ್ ಉಪಸ್ಥಿತರಿದ್ದು ಮಾತನಾಡಿದರು.
ಕಳಿಯಾಟ ಮಹೋತ್ಸವದ ಯಶಸ್ವಿಗೆ ವಿವಿಧ ಕ್ಷೇತ್ರಗಳ ಧುರೀಣರು ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಊರ-ಪರವೂರ ಮಹನೀಯರು, ಕುಟುಂಬಶ್ರೀ ಪ್ರತಿನಿಧಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಮೊಟ್ಟಕುಂಜ ತರವಾಡು ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಳಿಯಾಟ ಮಹೋತ್ಸವ ಸಮಿತಿಯ ಕಾರ್ಯದಶರ್ಿ ಕನಕತ್ತೋಡಿ ರಾಘವನ್ ಸ್ವಾಗತಿಸಿ, ಹರೀಶ್ ನಾರಂಪಾಡಿ ವಂದಿಸಿದರು. ಮುಂದಿನ ಸಭೆಯು ಡಿ.24 ರಂದು ಸಂಜೆ 4ಕ್ಕೆ ಮೊಟ್ಟಕುಂಜ ಶ್ರೀ ವಿಷ್ಣುಮೂತರ್ಿ ಕ್ಷೇತ್ರದಲ್ಲಿ ನಡೆಯಲಿರುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.





