ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಡಿ.8-10 : ರಾಜ್ಯ ಮಟ್ಟದ ಕಬಡ್ಡಿ ಚಾಂಪ್ಯನ್ಶಿಪ್
ಮಂಜೇಶ್ವರ: 62 ನೇ ಕೇರಳ ರಾಜ್ಯ ಮಟ್ಟದ ಸೀನಿಯರ್ ಪುರುಷ ಮತ್ತು ಮಹಿಳಾ ಕಬಡ್ಡಿ ಚಾಂಪ್ಯನ್ಶಿಪ್ ಡಿ.8, 9 ಮತ್ತು 10 ರಂದು ಮಂಜೇಶ್ವರ ಪಂಚಾಯತ್ ಸ್ಟೇಡಿಯಂನಲ್ಲಿ ನಡೆಯಲಿದೆಯೆಂದು ಕಬಡ್ಡಿ ಜಿಲ್ಲಾ ಅಸೋಸಿಯೇಶನ್ ಪದಾಧಿಕಾರಿಗಳು ಮಂಜೇಶ್ವರ ಪ್ರೆಸ್ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
8 ರಂದು ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿ ಜೀವನ್ ಬಾಬು ಪಂದ್ಯಾಟಕ್ಕೆ ಚಾಲನೆ ನೀಡುವರು. ಸುಧೀರ್ ಕುಮಾರ್ ಧ್ವಜಾರೋಹಣಗೈಯ್ಯುವರು. ಈ ಸಂದರ್ಭದಲ್ಲಿ ಉದ್ಯಮಿ ಅಬ್ದುಲ್ ಲತೀಫ್ ಉಪ್ಪಳ ಗೇಟ್, ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಪಂಚಾಯತು ಸದಸ್ಯೆ ಸುಪ್ರಿಯಾ ಶೆಣೈ, ಕೇರಳ ಕಬಡ್ಡಿ ಅಸೋಸಿಯೇಶನ್ ರಾಜ್ಯ ಕಾರ್ಯದಶರ್ಿ ವಿಜಯ ಕುಮಾರ್, ಬಿ.ವಿ.ರಾಜನ್, ಎಂ.ಹರಿಶ್ಚಂದ್ರ, ದಿನೇಶ್, ಝಡ್ ಎ.ಕಯ್ಯಾರ್, ಬಾಬು, ಸುರೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿರುವರು. ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. 3 ದಿನಗಳಲ್ಲಾಗಿ ನಡೆಯುವ ಪಂದ್ಯಾಟದಲ್ಲಿ 14 ಜಿಲ್ಲೆಯ ಪುರುಷ, ಮಹಿಳಾ ತಂಡಗಳು ಭಾಗವಹಿಸಲಿದೆ. 8 ರಂದು ಸಂಜೆ ಮಂಜೇಶ್ವರ ಒಳಗಿನ ಪೇಟೆಯಿಂದ ಪಂದ್ಯಾಟ ನಡೆಯುವ ಕ್ರೀಡಾಂಗಣಕ್ಕೆ ಕ್ರೀಡಾಪಟುಗಳನ್ನು ಒಳಗೊಂಡ ಬೃಹತ್ ಮೆರವಣಿಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎ.ಕೆ.ಎಂ.ಅಶ್ರಫ್, ಪ್ರೊ.ಕಬಡ್ಡಿ ಕೋಚ್ ಜಗದೀಶ್ ಕುಂಬಳೆ, ಸುರೇಶ್ ಕುಮಾರ್ ಶೆಟ್ಟಿ, ಮುನೀರ್ ಕುಂಜತ್ತೂರು, ಮಹ್ಮೂದ್ ಬಾಯಿಕಟ್ಟೆ ಉಪಸ್ಥಿತರಿದ್ದರು. ಪ್ರೊ.ಕಬಡ್ಡಿ ಕೋಚ್ ಜಗದೀಶ್ ಕುಂಬಳೆ ಕಾಸರಗೋಡು ಜಿಲ್ಲಾ ತಂಡದ ತರಬೇತುದಾರರಾಗಿದ್ದಾರೆ. ಪ್ರೊ.ಕಬಡ್ಡಿಯಲ್ಲಿ ಆಡಿರುವ ಸಾಗರ್ ಅವರು ಕಾಸರಗೋಡು ಜಿಲ್ಲಾ ತಂಡದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.





