ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಡಿ.11 : ಆನೆಕಲ್ಲು, ಪಾತೂರು ಶಾಲೆಯಲ್ಲಿ `ಕನ್ನಡ ಸ್ವರ'
ಮಂಜೇಶ್ವರ: ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಕಾರದೊಂದಿಗೆ ಗಡಿ ಪ್ರದೇಶವಾದ ಕಾಸರಗೋಡಿನ ಇಪ್ಪತ್ತು ಕನ್ನಡ ಶಾಲೆಗಳ ಎರಡು ಸಾವಿರ ವಿದ್ಯಾಥರ್ಿಗಳಿಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಕಲಿಸುವ ಕಾಯರ್ಾಗಾರ `ಕನ್ನಡ ಸ್ವರ' ಕಾರ್ಯಕ್ರಮ ಡಿ.11 ರಂದು ಆನೆಕಲ್ಲು ಮತ್ತು ಪಾತೂರು ಶಾಲೆಗಳಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9.45 ಕ್ಕೆ ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್ ಕೆ. ಅಧ್ಯಕ್ಷತೆಯಲ್ಲಿ ಆಡಳಿತ ಸಮಿತಿ ಪ್ರತಿನಿಧಿ ಮುರಳಿ ಶಾಮ್ ಉದ್ಘಾಟಿಸುವರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಎನ್.ಎಂ. ಅತಿಥಿಯಾಗಿ್ಯುಪಸ್ಥಿತರಿರುವರು.
ಮಧ್ಯಾಹ್ನ 1.30 ಕ್ಕೆ ಪಾತೂರು ಬಾಕ್ರಬೈಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಪಿ.ಬಿ. ಅಧ್ಯಕ್ಷತೆ ವಹಿಸುವರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಬಿ.ಖಾದರ್ ಉದ್ಘಾಟಿಸುವರು. ಶಂಕರ್ ನಾರಾಯಣ ಭಟ್ ಅವರು ಉಪಸ್ಥಿತರಿರುವರು ಎಂದು ರಂಗಚಿನ್ನಾರಿಯ ನಿದರ್ೇಶಕ ಕಾಸರಗೋಡು ಚಿನ್ನಾ, ಸತ್ಯನಾರಾಯಣ ಕೆ. ಅವರು ತಿಳಿಸಿದ್ದಾರೆ.





