HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕನಿಲ ಶ್ರೀ ಭಗವತಿ ಕ್ಷೇತ್ರ ಭಂಡಾರ ನಿಲಯ ವಿಶೇಷ ದೀಪಾರಾಧನೆ ಮತ್ತು ಸ್ವಾಗತ ಗೋಪುರ ಉದ್ಘಾಟನೆ
     ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ದೇವಿಗೆ ವಿಶೇಷ ದೀಪಾರಾಧನೆಯು ವಿವಿಧ ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಜರುಗಿತು. ಕ್ಷೇತ್ರ ಭಂಡಾರ ನಿಲಯ ಪುನರ್ ನಿಮರ್ಾಣ ಸಮಿತಿ, ಕನಿಲ ಶ್ರೀ ಭಗವತಿ ಆಡಳಿತ ಸಮಿತಿ ಮತ್ತು ಮಹಿಳಾ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಕ್ಷೇತ್ರದ ಗುರಿಕ್ಕಾರ ಮಂಜಪ್ಪ ಕಾರ್ನವ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
  ಈ ಸಂದರ್ಭ ಪಡಿಪಿರೆ ಬಾಬು ಮತ್ತು ಜಾನಕಿ ಸ್ಮರಾಣಾರ್ಥ ಮಕ್ಕಳು ನೂತನವಾಗಿ ನಿಮರ್ಿಸಿದ ಸ್ವಾಗತ ಗೋಪುರವನ್ನು ಜನಾರ್ಧನ ಮಲ್ಪೆಯವರು ಉದ್ಘಾಟಿಸಿ ಕ್ಷೇತ್ರಕ್ಕೆ ಸಮಪರ್ಿಸಿದರು. ಪೊಯ್ಯಕಂಡ ನಾಗಪ್ಪರವರ ಸ್ಮರಣಾರ್ಥ ನೂತನವಾಗಿ ನಿಮರ್ಿಸಲಾದ ಕಾಣಿಕೆಹುಂಡಿಯನ್ನು ಕಮಲಾಕ್ಷ ಪೊಯ್ಯಕಂಡ ಕ್ಷೇತ್ರಕ್ಕೆ ಸಮಪರ್ಿಸಿದರು.
  ಸಭೆಯಲ್ಲಿ ಮಂಜೇಶ್ವರ ಕೋ-ಅಪರೇಟಿವ್ ಬ್ಯಾಂಕಿನ ಅಧ್ಯಕ್ಷ ಬಿ.ಎಂ ಅನಂತ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಪುನರ್ ನಿಮರ್ಾಣ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪ್ಪುರ ವಹಿಸಿದ್ದರು. ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಲಕ್ಷ್ಮಣ. ಟಿ ಸಾಲ್ಯಾನ್, ಶ್ರೀ ಭಗವತಿ ಮಹಿಳಾ ಸಂಘದ ಅಧ್ಯಕ್ಷೆ ವಿಮಲಾ ನಾರಾಯಣ್, ಸಮಿತಿ ಕೋಶಾಧಿಕಾರಿ ಬಿ.ಎಂ ಉಮೇಶ್ ಉಪಸ್ಥಿತರಿದ್ದರು.ಮುಖ್ಯ ಅತಿಥಿಯಾಗಿ ಉದ್ಯಮಿ ಗಣೇಶ್ ಬಜಾಲ್, ಭಾಸ್ಕರ.ಪಿ, ಯಶೋಧಾ ಗಂಗಾಧರ್, ಲತಾ ಸುರೇಶ್ ಅಮೀನ್, ಚಂದ್ರಿಕಾ ಕೃಷ್ಣ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries