ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 04, 2017
ಒಖಿ ಚಂಡಮಾರುತ: ರಾಷ್ಟ್ರೀಯ ವಿಪತ್ತು ಘೋಷಣೆ ಸಾಧ್ಯವಿಲ್ಲ
ತಿರುವನಂತಪುರ: ಕೇರಳ, ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ರುದ್ರಪ್ರತಾಪ ತೋರಿದ ಒಖಿ ಚಂಡಮಾರುತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಾಧ್ಯವಿಲ್ಲ; ಆದರೆ, ಪರಿಸ್ಥಿತಿ ನಿಭಾಯಿಸಲು ಎಲ್ಲ ನೆರವು ನೀಡಲಾಗುವುದು ಎಂದು ಕೇಂದ್ರ ಸಕರ್ಾರ ಭಾನುವಾರ ಹೇಳಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ, ರಾಜ್ಯ ಸಕರ್ಾರಕ್ಕೆ ಅಗತ್ಯವಾದ ಹಣಕಾಸು ನೆರವನ್ನು ಕೇಂದ್ರ ಸಕರ್ಾರ ಈಗಾಗಲೇ ನೀಡಿದೆ ಎಂದು ಹೇಳಿದರು.
`ಒಖಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇರಳ ಸಕರ್ಾರದಿಂದ ಮನವಿ ಬಂದಿದೆ. ಆದರೆ, ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಯಾವುದೇ ಯೋಜನೆ ಕೇಂದ್ರದ ಮುಂದಿಲ್ಲ' ಎಂದು ಅವರು ಹೇಳಿದರು.
ಚಂಡ ಮಾರುತ ಅಪ್ಪಳಿಸುವ ಬಗ್ಗೆ ರಾಜ್ಯ ಸಕರ್ಾರಕ್ಕೆ ಮುನ್ನೆಚ್ಚರಿಕೆ ನೀಡಲಾಗಿಲ್ಲ ಎಂಬ ಕೇರಳ ಸಕರ್ಾರದ ನಿಲುವನ್ನು ಅಲ್ಫೋನ್ಸ್ ಈ ಹಿಂದೆ ಬೆಂಬಲಿಸಿದ್ದರು. ಆದರೆ ತಮ್ಮ ನಿಲುವು ಬದಲಾಯಿಸಿರುವ ಅವರು, ಕೇಂದ್ರದ ಸಂಸ್ಥೆಗಳು ನವೆಂಬರ್ 28 ಮತ್ತು 29ರಂದೇ ಎಚ್ಚರಿಕೆ ನೀಡಿದ್ದವು ಎಂದರು.
17 ಮೀನುಗಾರರ ರಕ್ಷಣೆ
ಪ್ರಕ್ಷುಬ್ಧಗೊಂಡಿರುವ ಸಮುದ್ರದಲ್ಲಿ ಐದು ದಿನಗಳಿಂದ ಸಿಕ್ಕಿಹಾಕಿಕೊಂಡಿದ್ದ ಕೇರಳದ 17 ಮೀನುಗಾರರನ್ನು ಭಾನುವಾರ ರಕ್ಷಿಸಲಾಗಿದೆ.ಭಾರತೀಯ ನೌಕಾಪಡೆಯ ಕಲ್ಪೆನಿ ನೌಕೆಯು 13 ಜನರನ್ನು ದಡಕ್ಕೆ ಕರೆ ತಂದಿದೆ.ಕಾಯಂಕುಳಂನ ಪಶ್ಚಿಮ ಕರಾವಳಿಯಿಂದ 48 ಕಿ.ಮೀ ದೂರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಾಲ್ವರು ಮೀನುಗಾರರನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ರಕ್ಷಿಸಿದೆ.





