HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಶೇಣಿ ಶಾಲೆ ಹೊಸ ಕಟ್ಟಡ ಉದ್ಘಾಟನೆ
        ಅಕ್ಷರ ಜ್ಞಾನದಿಂದ ಶೋಷಣೆ ಮುಕ್ತ ಸಮಾಜ ನಿಮರ್ಾಣ: ಸಚಿವ ರಮಾನಾಥ ರೈ
     ಪೆರ್ಲ: ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ವಿಕಾಸಕ್ಕೆ ಪೂರಕವಾದ ಶಿಕ್ಷಣವು ಸಮಾಜದ ಸವರ್ಾಂಗೀಣ ಅಭಿವೃದ್ಧಿಯ ತಳಹದಿ. ಸ್ವಾತಂತ್ರ್ಯ, ಹಕ್ಕು ಮತ್ತು ಕರ್ತವ್ಯ, ಸ್ವಾಭಿಮಾನಿ ಬದುಕು ಮೊದಲಾದ ಪೌರ ಪ್ರಜ್ಞೆಗಳ ಚಿಂತನೆ ಮೂಡುವಲ್ಲಿ ಶೈಕ್ಷಣಿಕ ತಿಳುವಳಿಕೆ ಅನಿವಾರ್ಯ. ಜ್ಞಾನ ಸಂಪತ್ತು ಪ್ರತಿಯೊಬ್ಬನ ಬದುಕಿಗೂ ಸ್ಪೂತರ್ಿಯ ಸೆಲೆ. ಅದ್ದರಿಂದ  ಅಕ್ಷರ ಜ್ಞಾನವಿರುವ ಹೊಸ  ತಲೆಮಾರುಗಳಿಂದ ಶೋಷಣೆ ಮುಕ್ತ ನವ ಸಮಾಜ ನಿಮರ್ಾಣ ಸಾಧ್ಯವೆಂದು ಕನರ್ಾಟಕ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ರಮಾನಾಥ ರೈ ಹೇಳಿದರು.
    ಕನರ್ಾಟಕ ಸಕರ್ಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಶೇಣಿ ಶ್ರೀ ಶಾರದಾಂಬ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ನಿಮರ್ಿಸಿದ ಶಾಲಾ ಕಟ್ಟಡ ಮತ್ತು ಮಲ್ಟಿಮೀಡಿಯಾ ಸೌಲಭ್ಯವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
   ಗಡಿನಾಡು ಕಾಸರಗೋಡಿನ ಕನ್ನಡಿಗರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಕನರ್ಾಟಕ ಸರಕಾರ, ಗಡಿಪ್ರದೇಶಾಭಿವೃದ್ದಿ ಯೋಜನೆಯಡಿ ಇಲ್ಲಿಯ ಕನ್ನಡ ಶಾಲೆಗಳ ನೆರವಿಗೆ ಬದ್ದವಾಗಿದೆ ಎಂದು ತಿಳಿಸಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳ ಕಲಿಕಾ ಸೌಲಭ್ಯದ ಉನ್ನತಿಗೆ ಪ್ರಾಶಸ್ತ್ಯ ನೀಡಬೇಕು ಎಂದು ತಿಳಿಸಿದರು. ವೈಜ್ಞಾನಿಕ ಅಭಿವೃದ್ದಿಗಳು ಸಾಕಷ್ಟು ಬೆಳೆದಿದ್ದರೂ, ಗ್ರಾಮೀಣ ಪ್ರದೇಶಗಳಿಗೆ ಅವಿನ್ನೂ ನಿಧಾನಗತಿಯಲ್ಲಿ ಲಭ್ಯವಾಗುತ್ತಿರುವುದು ವೇಗದ ಮಿತಿಯನ್ನು ನಿಯಂತ್ರಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕ್ರಿಯಾಶೀಲರಾಗಿ ಕಾರ್ಯಚಟುವಟಿಕೆ ಜಾರಿಗೊಳಿಸಬೇಕೆಂದು ಅವರು ತಿಳಿಸಿದರು.
  ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕನರ್ಾಟಕ ಸಕರ್ಾರದ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದಶರ್ಿ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕಿ ಶಕುಂತಲಾ ಶೆಟ್ಟಿ ಯವರು ಮಾತನಾಡಿ,  ಪ್ರತಿಯೊಂದು ಮಗುವಿಗೂ ಗುಣಮಟ್ಟದ ಹಾಗೂ ಶಿಸ್ತುಬದ್ಧ ಜಾತ್ಯತೀತ ತಳಹದಿಯ ಸಂಸ್ಕಾರಯುತ  ಶಿಕ್ಷಣ ಲಭ್ಯವಾದರೆ ಮಾತ್ರ ಮಕ್ಕಳ ಮತ್ತು ರಾಷ್ಟ್ರದ ಭವಿಷ್ಯ ಉಜ್ವಲವಾಗುವುದು ಎಂದು ನುಡಿದರು. ನಗರ ಪ್ರದೇಶಕ್ಕೆ ಹೋಲಿಸಿದರೆ ಕನಿಷ್ಠ ಸೌಕರ್ಯಗಳಲ್ಲಿ ಜ್ಞಾನಾರ್ಜನೆಗೈಯ್ಯುವ ವಿದ್ಯಾಥರ್ಿಗಳು ತಮ್ಮ ಪ್ರತಿಭೆಯ ವಿಕಾಸದಲ್ಲಿ ಸದಾ ಮುಂದಿರುವುದು ಕೂಡಾ ಗಮನಾರ್ಹ. ಆದರೆ ಅವರಿಗೆ ಅಗತ್ಯ ಅನುಕೂಲತೆಗಳನ್ನು ಮಡಿಕೊಡುವುದು ನಾಗರಿಕ ಸಮಾಜದ ಕರ್ತವ್ಯ ಎಂದು ತಿಳಿಸಿದರು.
   ಕಾಸರಗೋಡು ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪಿ ಬಿ ಮೊಹಮ್ಮದ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಸಪ್ರೀನ, ಎಣ್ಮಕಜೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆಯರಾದ ಆಯಿಶಾ ಎಎ ಪೆರ್ಲ, ಜಯಶ್ರೀ ಕುಲಾಲ್  ಪಂಚಾಯತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಹಾಜಿ ಖಂಡಿಗೆ, ಐತ್ತಪ್ಪ ಕುಲಾಲ್, ಸಿದ್ದೀಕ್ ವಳಮೊಗರು,  ಪುಷ್ಪಾ ಎಮ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂತರ್ಿ, ಉಪಜಿಲ್ಲಾ ಬ್ಲಾಕ್ ಯೋಜನಾಧಿಕಾರಿ ಕುಂಞಕೃಷ್ಣನ್ ,  ಹಿರಿಯ ಪ್ರಾಥಮಿಕ  ಶಾಲಾ ವ್ಯವಸ್ಥಾಪಕಿ ಶಾರದಾ ವೈ, ಸೋಮಶೇಖರ ಜೆ. ಎಸ್, ಪ್ರಭಾರ ಪ್ರಾಂಶುಪಾಲ ಗಣಪತಿ ರಮಣ ಪಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸಿ. ಸಂಜೀವ ರೈ,  ಎ ಎಸ್ ಬಿ ಎಸ್  ಇಚ್ಲಂಪಾಡಿ ಶಾಲೆ ಮುಖ್ಯೋಪಾಧ್ಯಾಯ ನರಹರಿ ಪಿ, ಹಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಝಬೈರ್ ಸಿ ಎ, ಹೈಸ್ಕೂಲ್ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಪೆರ್ದನೆ, ಮಾತೃ ಸಂಘದ ಅಧ್ಯಕ್ಷೆ ಶಾರದ, ನಿವೃತ್ತ ಪ್ರಭಾರ ಪ್ರಾಂಶುಪಾಲ ರವೀಂದ್ರನಾಥ ನಾಯಕ್ ಮೊದಲಾದವರು ಮಾತನಾಡಿದರು.
  ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ ಸ್ವಾಗತಿಸಿ, ಶಿಕ್ಷಕ ಸುಬ್ರಮಣ್ಯ ಕಾಮತ್ ವಂದಿಸಿದರು. ಅಧ್ಯಾಪಕ ಶ್ರೀಧರ ನಾಯಕ್ ಅಲಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಕಟ್ಟಡದ ನಿಮರ್ಾಣ ಕಾರ್ಯವನ್ನು ಕ್ಲಪ್ತ ಸಮಯದಲ್ಲಿ ಮುಗಿಸಿದ ಗುತ್ತಿಗೆದಾರ ಅಬೂಬಕ್ಕರ್ ಪೆರ್ದನೆ ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries