HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಜಲ ಸಂರಕ್ಷಣೆಯಲ್ಲಿ ಪಾರಂಪರಿಕ ಪಾವಿತ್ರ್ಯತೆಯ ಪರಿಕಲ್ಪನೆ ಎಂದಿಗೂ ಪ್ರಸ್ತುತ- ನಿರ್ಮಲ್ ಕುಮಾರ್ ಮಾಸ್ತರ್   
    ಮುಳ್ಳೇರಿಯ: ಪ್ರಾಕೃತಿಕ ಸಂಪನ್ಮೂಲಗಳ ಬಳಕೆಯ ಬಗ್ಗೆ ಸ್ಪಷ್ಟ ಜಾಗೃತಿ ಅಗತ್ಯವಿದೆ. ಜಲ ಸಂಪನ್ಮೂಲವನ್ನು ನಿಧಿಯಂತೆ ಸೂಕ್ಮ ಮನೋಭಾವದಿಂದ ಕಾಪಿಡುವ ನಿಟ್ಟಿನಲ್ಲಿ ವಿದ್ಯಾಥರ್ಿಗಳು, ಯುವ ಸಮೂಹ ಕಾರ್ಯಪ್ರವೃತ್ತರಾಗಬೇಕು ಎಂದು ಬೆಳ್ಳೂರು ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ. ಅಭಿಪ್ರಾಯ ವ್ಯಕ್ತಪಡಿಸಿದರು.
   ಬೆಳ್ಳೂರು ಗ್ರಾಮ ಪಂಚಾಯತು ಜಾರಿಗೊಳಿಸುತ್ತಿರುವ ಜಲಧಾರಾ ಯೋಜನೆಯ ಭಾಗವಾಗಿ ಎರಡನೇ ಹಂತದಲ್ಲಿ ವಿದ್ಯಾಥರ್ಿಗಳನ್ನು ಗುರಿಯಾಗಿರಿಸಿ ಅನುಷ್ಠಾನಗೊಳಿಸಲಿರುವ ಜಲಶ್ರೀ ಯೋಜನೆಯ ವಿಶೇಷ ಮಾಹಿತಿ ತರಗತಿಯನ್ನು ಗುರುವಾರ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
   ಕುಸಿಯುತ್ತಿರುವ ಮಳೆಯ ಪ್ರಮಾಣ ಮತ್ತು ವನ ಸಂಪತ್ತಿನ ಕೊರತೆಯ ಮಧ್ಯೆ ನೀರಿನ ಬಳಕೆ ಮತ್ತು ಮರಪೂರಣಗಳ ಬಗ್ಗೆ ಇನ್ನಷ್ಟು ಜಾಗೃತಿ ಬೇಕಿದೆ ಎಂದು ತಿಳಿಸಿದ ಅವರು, ಶಾಲಾ ಶಿಕ್ಷಣದೊಂದಿಗೆ ವರ್ತಮಾನದ ವಿದ್ಯಮಾನಗಳ ಬಗೆಗೆ ಅರಿವು ಮತ್ತು ಅವುಗಳೊಂದಿಗೆ ಸ್ಪಂಧಿಸುವ ಮನೋಭಾವ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
   ಶಾಲಾ ಮುಖ್ಯೋಪಾಧ್ಯಾಯಿನಿ ವಾರಿಜಾ ನೇರೋಳು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಥರ್ಿಗಳ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳುವ ಯೋಜನೆಗಳು ಯಶಸ್ವಿಯಾಗುವುದು. ಆಧುನಿಕ ಯುವ ಸಮೂಹ ಗ್ರಹಿಸುವಿಕೆಯಲ್ಲಿ ಮುಂದಿದ್ದು, ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.
   ಪಿಲಾಂಕಟ್ಟೆಯ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ, ಪರಿಸರ ಪ್ರೇಮಿ ನಿರ್ಮಲ್ಕುಮಾರ್ ಜಲಸಂರಕ್ಷಣೆ, ವಿನಿಯೋಗ ಮತ್ತು  ಜಲಗುಣಮಟ್ಟ ಕಾಯ್ದುಕೊಳ್ಳುವಿಕೆಯ ಬಗ್ಗೆ ವಿದ್ಯಾಥರ್ಿಗಳಿಗೆ ಮತ್ತು ವಿದ್ಯಾಥರ್ಿಗಳ ರಕ್ಷಕರಿಗೆ ವಿಸ್ಕೃತ ಮಾಹಿತಿ ತರಗತಿ ನೀಡಿದರು. ನೀರಿನ ಬಳಕೆಯಲ್ಲಿ ಅನುಸರಿಸಬೇಕಾದ ಅಗತ್ಯ ಮಾರ್ಗದಶರ್ಿ ಸೂಕ್ಷ್ಮತೆ ಮತ್ತು ಮರುಬಳಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನೀರಿನ ಬಗ್ಗೆ ಈ ಮಣ್ಣಿನ ಪಾರಂಪರಿಕ ನಂಬಿಕೆಯಾದ ಪಾವಿತ್ರ್ಯತೆಯ ಕಲ್ಪನೆ ಸೂಕ್ತವಾಗಿದ್ದು, ಮತ್ತೆ ಅಂತಹ ಮನೋಭಾವದತ್ತ ಹೊರಳಬೇಕು ಎಂದು ಅವರು ತಿಳಿಸಿದರು.
  ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಚ್.ಮೊಹಮ್ಮದ್, ಜಲನಿಧಿಯ ಪ್ರತಿನಿಧಿಗಳಾದ ಅಫ್ಸಲ್, ಗಣೇಶ್ ಉಪಸ್ಥಿತರಿದ್ದರು. ಜಲಶ್ರೀ ಯೋಜನೆಯ ಶಾಲಾ ಅನುಷ್ಠಾನ ಜವಾಬ್ದಾರಿಯ ನೆಝುಮುನ್ನೀಸಾ ಟೀಚರ್ ಹಾಗೂ ಶೋಭಾ ಟೀಚರ್, ಶಾಲಾ ನೌಕರ ಸಂಘದ ಕಾರ್ಯದಶರ್ಿ ಪದ್ಮನಾಭ ಮಾಸ್ತರ್, ಹಿರಿಯ ಶಿಕ್ಷಕ ಕುಂಞಿರಾಮ ಮಾಸ್ತರ್ ಉಪಸ್ಥಿತರಿದ್ದು ಮಾತನಾಡಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries