ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಉಪ್ಪಳ ಅಧಿಕದಲ್ಲಿ ಕಡಲ್ಕೊರೆತ: ಮನೆ ನೀರು ಪಾಲು
ಉಪ್ಪಳ: ಮೂಸೋಡಿ ಅದಿಕದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ನಾಲ್ಕು ಮನೆಗಳು ಪೂರ್ಣವಾಗಿ ಸಮುದ್ರಪಾಲಾಗಿದೆ.
ಶುಕ್ರವಾರ ಸಂಜೆಯಿಂದ ತೀವ್ರಗೊಂಡ ಕಡಲ್ಕೊರೆತ ರಾತ್ರಿ 10 ಗಂಟೆ ವೇಳೆ ಮತ್ತಷ್ಟು ತೀವ್ರಗೊಂಡಿದೆ. ಈ ವೇಳೆ ಅಬ್ದುಲ್ ಖಾದರ್ ಎಂಬವರ ಮನೆ ಪೂರ್ಣವಾಗಿ ಸಮುದ್ರ ಪಾಲಾಯಿತು. ಈ ವೇಳೆ ಮನೆಯಿಂದ ಹೊರಗೋಡಿದ ಕುಟುಂಬ ಅಪಾಯದಿಂದ ಪಾರಾಗಿದೆ. ಕೂಡಲೇ ತಲುಪಿದ ಪೊಲೀಸ್, ಅಗ್ನಿಶಾಮಕದಳ, ಹಾಗೂ ಕಂದಾಯ ಅಧಿಕಾರಿಗಳು ಅಬ್ದುಲ್ ಖಾದರ್ರ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಿದರು. ಇದೇ ವೇಳೆ ಈ ಹಿಂದೆ ಉಂಟಾದ ಕಡಲ್ಕೊರೆತಕ್ಕೆ ಸಿಲುಕಿ ಭಾಗಶಃ ನಾಶಗೊಂಡಿದ್ದ ಮೂರು ಮನೆಗಳೂ ಶುಕ್ರವಾರ ಪೂರ್ಣವಾಗಿ ನಾಶಗೊಂಡು ಸಮುದ್ರ ಪಾಲಾಯಿತು. ಖದೀಜಮ್ಮ, ಇಬ್ರಾಹಿಂ, ಅಶ್ರಫ್ ಎಂಬವರ ಮನೆಗಳು ನಾಶಗೊಂಡಿದೆ. ಈ ಹಿಂದೆ ಮನೆಗಳು ಭಾಗಶಃ ನಾಶಗೊಂಡಾಗ ಈ ಮೂರು ಕುಟುಂಬಗಳನ್ನು ಅಂದೇ ಸ್ಥಳಾಂತರಿ ಲಾಗಿತ್ತು. ಕಡಲ್ಕೊರೆತ ಮುಂದುವರಿಯುತ್ತಿದ್ದು ಸುಮಾರು 200 ಮೀಟರ್ ಪ್ರದೇಶ ಸಮುದ್ರ ಪಾಲಾಗಿದೆ.
ಓಖ್ಖಿ ಭೀತಿ:
ಕೇರಳದ ಸಮುದ್ರ ಕರಾವಳಿ ಸಹಿತ ವಿವಿಧೆಡೆ ಗುರುವಾರದಿಂದ ಪ್ರಕ್ಷುಬ್ದಗೊಂಡು ವ್ಯಾಪಕ ಹಾನಿಗೆ ಕಾರಣವಾಗಿರುವ ಓಖ್ಖಿ ಚಂಡಮಾರುತದ ಪ್ರಭಾವ ಕುಂಬಳೆ, ಮೊಗ್ರಾಲ್, ಉಪ್ಪಳ ಕಡಲ ಕಿನಾರೆಯಲ್ಲೂ ಪ್ರಭಾವ ಬೀರಿದೆ. ಉಪ್ಪಳದಲ್ಲಿ ಜನರು ಸಂಜೆವೇಳೆ ಮನೆಯಿಂದ ಹೊರಬಂದು ಮಧ್ಯರಾತ್ರಿಯ ತನಕ ಹೊರಗುಳಿದರು.






