ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಚಾಹುಡಿ ಮಾರಾಟದ ಮೂಲಕ ಎಂಡೋ ಸಂತ್ರಸ್ತರಿಗೆ ಎನ್ಎಸ್ಎಸ್ ಸಹಾಯಹಸ್ತ
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕಂಡರಿ ಶಾಲೆಯ ರಾಷ್ಟ್ಸೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಜೈವಿಕ ಚಾಹುಡಿ ವಿತರಿಸಿ ಅದರಿಂದ ಲಭಿಸಿದ ಲಾಭಾಂಶವನ್ನು ಎಂಡೋಸಲ್ಫಾನ್ ಸಂತ್ರಸ್ತರಿಗೆ ನೀಡುವ ವಿನೂತನ ಯೋಜನೆಯೊಂದಕ್ಕೆ ಚಾಲನೆಯಾಗಿದೆ. ಈ ವಿಶೇಷ ಯೋಜನೆಗೆ ಕಾಟುಕುಕ್ಕೆ ಸಾಂತ್ವನ ಎಂದು ಹೆಸರಿಡಲಾಗಿದೆ.
ಯಾವುದೇ ಕಲಬೆರಕೆ ಇಲ್ಲದೆ ವಯನಾಡಿನಲ್ಲಿ ಈ ಚಾಹುಡಿ ತಯಾರಿಸಲಾಗುತ್ತಿದೆ. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಹುಡಿ ಖರೀದಿಸುವ ಮೂಲಕ ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆ ಪರಿಸರದಲ್ಲಿ ಪುಟ್ಟ ಮಳಿಗೆ ನಿಮರ್ಿಸಿ ಅಧ್ಯಾಪಕರಿಗೆ, ವಿದ್ಯಾಥರ್ಿಗಳಿಗೆ ಹಾಗೂ ಸಾರ್ವಜನಿಕರಿಗೆ ಎನ್ಎಸ್ಎಸ್ ವಿದ್ಯಾಥರ್ಿಗಳು ಚಾಹುಡಿ ವಿತರಿಸಿದರು. ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದ ಕಾಟುಕುಕ್ಕೆ ಶಾಲೆಯ ಎನ್ಎಸ್ಎಸ್ ಘಟಕ ಈ ಬಾರಿ ಕಾಟುಕುಕ್ಕೆ ಸಾಂತ್ವನ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಇನ್ನಷ್ಟು ಎಂಡೋಸಲ್ಫಾನ್ ಸಂತ್ರಸ್ತ ಮನೆಗಳಿಗೆ ಸಹಾಯ ಮಾಡುವ ಉದ್ದೇಶ ಇಟ್ಟುಕೊಂಡಿದೆ ಎಂದು ಎನ್ಎಸ್ಎಸ್ ಯೋಜನಾಧಿಕಾರಿ ಸಂದೀಪ್ ಕುಮಾರ್ ಎನ್.ವಿ. ಹೇಳಿದರು. ಈಗಾಗಲೇ ಎನ್ಎಸ್ಎಸ್ ಘಟಕದ ವತಿಯಿಂದ ಕಾಟುಕುಕ್ಕೆ ಪರಿಸರದ ರಮೇಶ್ ಅವರಿಗೆ ಧನಸಹಾಯ ವಿತರಣೆ, ಓಣಂ ಕಿಟ್ ವಿತರಣೆ ಮೊದಲಾದ ಸೇವಾ ಚಟುವಟಿಕೆಗಳನ್ನು ಮಾಡಿ ಮಾದರಿಯಾಗಿದೆ.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ರೈ, ಆಡಳಿತ ಮಂಡಳಿ ಸದಸ್ಯರಾದ ಗಾಂಭೀರ್, ಸಂದೇಶ್ ರೈ, ನಿವೃತ್ತ ಕಚೇರಿ ಸಹಾಯಕ ಭಾಸ್ಕರ ಮಣಿಯಾಣಿ, ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಮುಖ್ಯೋಪಾಧ್ಯಾಯ ಸುಧೀರ್ ಕುಮಾರ್, ಅಧ್ಯಾಪಕ ವೃಂದದವರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಶಿಕ್ಷಕಿ ವಾಣಿ ಕಾರ್ಯಕ್ರಮ ನಿರೂಪಿಸಿದರು.





