ಹೊಸಂಗಡಿ: ಅಯ್ಯಪ್ಪ ದೀಪೋತ್ಸವ
ಮಂಜೇಶ್ವರ: ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಡಿ.15ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಿಗ್ಗೆ 6ಗಂಟೆಗೆ ಗಣಪತಿ ಹೋಮ, ಹರಿನಾಮ ಸಂಕೀರ್ತನೆ, 9.30ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ, 11.30ಕ್ಕೆ ತುಪ್ಪಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1ಗಂಟೆಗೆ ಅನ್ನ ಸಂತರ್ಪಣೆ, ಅಪರಾಹ್ನ 2ರಿಂದ ಭಜನೆ, ರಾತ್ರಿ 9ಕ್ಕೆ ವಾಮಂಜೂರು ಶ್ರೀ ಶಾಸ್ತಾವೇಶ್ವರ ದೇವಸ್ಥಾನದಿಂದ ಶ್ರೀ ಅಯ್ಯಪ್ಪ ಶೋಭಾಯಾತ್ರೆ ಬಳಿಕ ಮೆಟ್ಟಿಲು ಪೂಜೆ, 9.30ಕ್ಕೆ ಶಾರದಾ ಆಟ್ಸರ್್ ತಂಡದ ಐಸಿರಿ ಕಲಾವಿದರಿಂದ `ಅಂಚಗೆ ಇಂಚಗೆ' ತುಳು ನಾಟಕ ಪ್ರದರ್ಶನಗೊಳ್ಳಲಿದೆ.




