HEALTH TIPS

ಯಾವುದೇ ಶೀರ್ಷಿಕೆಯಿಲ್ಲ

       ದಾರಿಯೇ ಇಲ್ಲದವರು=ಪರಿಶಿಷ್ಟ ಜಾತಿ ಕಾಲನಿಯಲ್ಲಿರುವ ಸಾರ್ವಜನಿಕ ರಸ್ತೆ ಮುಚ್ಚುವ ಭೀತಿಯಲ್ಲಿ ನಾಗರಿಕರು: ಸ್ಥಳೀಯರು ಪ್ರತಿಭಟನೆಯತ್ತ
   ಮಂಜೇಶ್ವರ:  ಮಂಜೇಶ್ವರ ಗ್ರಾ. ಪಂ.  ಹೊಸಬೆಟ್ಟು ಗ್ರಾಮದ  ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ಕಾಲನಿಯಿಂದ ಆದರ್ಶ ನಗರವನ್ನು ಸಂಪಕರ್ಿಸುವ ಸುಮಾರು ಒಂದೂವರೆ ಕಿಲೋ ಮೀಟರ್ ಅಂತರದ ಸಾರ್ವಜನಿಕ ರಸ್ತೆಯನ್ನು ಮುಚ್ಚುವ ಭೀತಿಯನ್ನು ಈ ಪ್ರದೇಶದ ನಾಗರಿಕರು ಎದುರಿಸುತಿದ್ದಾರೆ.
  ಭೂ ದಾಖಲೆ ಸವರ್ೇ ಪ್ರಕಾರ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಜಮೀನಿಗೆ ಒಳಪಟ್ಟ ಸ್ಥಳದಲ್ಲಿ ಈ ರಸ್ತೆ ಹಾದುಹೋಗುತ್ತಿರುವ ಕಾರಣ ಸರಕಾರಿ ಸೊತ್ತನ್ನು  ಸಂರಕ್ಷಿಸಬೇಕಾದ ಅನಿವಾರ್ಯದಿಂದ ಈ ಜಮೀನಿನಲ್ಲಿ ರಸ್ತೆ ಹಾದು ಹೋಗಲು ಅನುಮತಿ ಇಲ್ಲದೇ ಇದ್ದು, ಈ ರಸ್ತೆಗೆ ಶಾಶ್ವತ ಗೋಡೆ ಕಟ್ಟಿ ಮುಚ್ಚುವ ತಯಾರಿಗೆ ಅಧಿಕೃತರು ತಯಾರಿ ನಡೆಸುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸುತಿದ್ದಾರೆ.
   ಈ ಪ್ರದೇಶದ ನಾಗರಿಕರ ಪ್ರಕಾರ ಸುಮಾರು 100 ವರ್ಷಗಳ ಹಿಂದೆಯೇ ಈ ರಸ್ತೆಯಿದ್ದು, ಜಿಲ್ಲಾ ಪಂ., ಬ್ಲಾಕ್ ಪಂ. ಹಾಗೂ ಗ್ರಾ. ಪಂ. ಈ ರಸ್ತೆಯ ಡಾಮರೀಕರಣಕ್ಕೆ ಹಾಗೂ ರಸ್ತೆಯ  ಅಭಿವೃದ್ದಿಗಾಗಿ ವಿವಿಧ ಇಲಾಖಾ ನಿಧಿಯನ್ನು ಬಳಸಲಾಗಿದೆ. ಇದಲ್ಲದೆ ಈ ರಸ್ತೆ ಹಾದು ಹೋಗುವ ಬದಿಯಲ್ಲಿ ಮಳೆ ನೀರು ಸಂಗ್ರಹಕ್ಕೆ ಶಾಶ್ವತ ತಡೆಗೋಡೆ ಕಟ್ಟಿ ಬಂಡ್ ನಿಮರ್ಿಸಲಾಗಿರುತ್ತದೆ.
   ಈ ರಸ್ತೆಯನ್ನು ಮುಚ್ಚುಗಡೆಗೊಳಿಸಿದರೆ ಈ ಪ್ರದೇಶದ ನಾಗರಿಕರಿಗೆ ತಮ್ಮ ವಾಸ ಸ್ಥಳಕ್ಕೆ ಹೋಗಲು ಹಾಗೂ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು, ಸತ್ತ ಹೆಣವನ್ನು ಕೂಡಾ ಸಾಗಿಸಲು ದಾರಿ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಉಳಿಸಲು ಇಲ್ಲಿಯ ನಾಗರಿಕರು ಒಕ್ಕೊರಲಿನಿಂದ ಹೋರಾಟಕ್ಕಿಳಿದಿದ್ದಾರೆ.
   ಸಂಬಂಧಪಟ್ಟವರು ರಸ್ತೆ ಮುಚ್ಚುಗಡೆ ಯೋಜನೆಯಿಂದ ಹಿಂದೆ ಸರಿಯದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ತೀವೃತೆಯನ್ನು ಹೆಚ್ಚಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗ್ರಾಮಸ್ಥರು ಸೋಮವಾರದಂದು ಮುಚ್ಚುಗಡೆಯಾಗುವ ರಸ್ತೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
   ಏನಂತಾರೆ ಸಂಬಂಧಪಟ್ಟವರು.:
   ರಸ್ತೆಯನ್ನು ಮುಚ್ಚದಂತೆ ಕಾಲನಿ ನಿವಾಸಿಗಳು ಪ್ರತಿಭಟನೆ ನಡೆಸುತ್ತಿರುವುದು ಹೌದಾದರೂ, ಸರಕಾರಿ ಆಸ್ತಿಯನ್ನು ಬೇಕಾದಾಗ ಉಪಯೋಗಿಸುವ ಹಕ್ಕೆ ಸರಕಾರಕ್ಕಿದೆ. ಈ ರಸ್ತೆ ಕಾಲೇಜು ನಿವೇಶನದ ಭಾಗವಾಗಿದ್ದರೆ ಅವರನ್ನು ಕೈವಶವಿರಿಸುವರು. ಈ ಬಗ್ಗೆ ಕಡತಗಳನ್ನು, ಅಧಿಕಾರಿಗಳನ್ನು ವಿಚಾರಿಸಿ ಅಗತ್ಯ ಕ್ರಮ, ಪಯರ್ಾಯ ವ್ಯವಸ್ಥೆಗೆ ಗ್ರಾ.ಪಂ.ಬದ್ದವಾಗಿದೆ.
          ಅಬ್ದುಲ್ ಅಸೀಝ್ ಹಾಜಿ
        ಅಧ್ಯಕ್ಷರು ಮಂಜೇಶ್ವರ ಗ್ರಾಮ ಪಂಚಾಯತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries