HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಮರುಕಳಿಸುವ ಡಿ.6 ಭೀತಿ-ಬಸ್ ಗೆ ಕಲ್ಲೆಸೆತ
    ಮಂಜೇಶ್ವರ:  ಡಿ. 6ರ ಘಟನೆಯನ್ನು ಆಧರಿಸಿ ರಾಷ್ಟ್ರದೆಲ್ಲೆಡೆ ವರ್ಷಗಳು  ಸರಿದಂತೆ ಘಟನೆಯ ಬಗೆಗಿನ ಆಸಕ್ತಿ ಕುಮದುತ್ತಿದ್ದರೂ ಕಾಸರಗೊಡಿನಲ್ಲಿ ಈವರೆಗೆ ಹೆಚ್ಚಿನ ಬದಲಾವಣೆಗಳಾಗಿಲ್ಲ. ಪ್ರತಿವರ್ಷ ಆ ಹೆಸರಲ್ಲಿನ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ.
   ಮಂಗಳವಾರ ರಾತ್ರಿ ತಲಪ್ಪಡಿಯಿಂದ ಹೊಸಂಗಡಿಯ ಮೂಲಕ ಆನೆಕಲ್ಲಿಗೆ ಸಾಗುವ ಖಾಸಗೀ ಬಸ್ ವಿಷ್ಣುವಿಗೆ ಮೊರತ್ತಣೆಯಲ್ಲಿ ಅಪರಿಚಿತರು ಕಲಲೆಸೆದಿದ್ದು, ಕೆಲವು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡಿರುವರು. ಜೊತೆಗೆ ರಾ.ಹೆದ್ದಾರಿ ಉಪ್ಪಳ ನಯಾಬಝಾರಿನಲ್ಲೂ ವಾಹನಗಳ ಮೇಲೆ ಕಲ್ಲೆಸೆಯುವ ಯತ್ನಗಳು ಕಂಡುಬಮದಿದ್ದು, ಹೈವೇ ಪೋಲೀಸರ ಸಕಾಲಿಕ ಕಾಯರ್ಾಚರಣೆಯಿಂದ ತಹಬಂದಿಗೆ ಬಮದಿದೆ ಎಂದು ತಿಳಿದುಬಂದಿದೆ.
   ಘಟನೆಗಳ ಬಳಿಕ ಮಂಜೇಶ್ವರ ಠಾಣಾ ವ್ಯಾಪ್ತಿ ಮತ್ತು ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಬಿಗು ಪೋಲೀಸ್ ಪಹರೆ ಒದಗಿಸಲಾಗಿದ್ದು, ಪೋಲೀಸ್ ನೆರವಿನೊಮದಿಗೆ ವಾಹನ ಸಂಚಾರ ಸಾಗಲು ಅನುವುಮಾಡಲಾಗಿದೆ. ಬುಧವಾರದ ಮುಂಜಾನೆಯ ಪರಿಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದೆಂದು ಪೋಲೀಸ್ ಮೂಲಗಳು  ತಿಳಿಸಿವೆ. ಬಹಿರಂಗವಾಗಿ ಯಾವ ಸಂಘಟನೆಗಳೂ ಹರತಾಳಕ್ಕೆ ಕರೆ ನೀಡದಿದ್ದರೂ ತೆರೆಮರೆಯಲ್ಲಿ ವಿದ್ವಂಸಕ ಕೃತ್ಯ ನಡೆಸುವ ಸಾಧ್ಯತೆಯಿದೆಯೆಂದು ಪೋಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries