HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಎಂಡೋಸಲ್ಫಾನ್ ಸಂತ್ರಸ್ತರ ಕಡೆಗಣನೆ
    ಜಿಲ್ಲಾಧಿಕಾರಿ ಕಚೇರಿ ಮುಂದೆ ಸಾಮೂಹಿಕ ನಿರಾಹಾರ ಸತ್ಯಾಗ್ರಹ
  ಕಾಸರಗೋಡು: ಸುಪ್ರೀಂಕೋಟರ್್ ತೀರ್ಪನ್ನು ಕೂಡಾ ಜಾರಿಗೊಳಿಸದೆ ಕೇರಳ ಸರಕಾರ ಎಂಡೋ ಸಂತ್ರಸ್ತರನ್ನು ಅವಗಣಿಸುತ್ತಿದೆ ಎಂದು ಆರೋಪಿಸಿ ಎಂಡೋಸಲ್ಫಾನ್ ಸಂತ್ರಸ್ತ ಜನಪರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸೋಮವಾರ ಸಾಮೂಹಿಕ ನಿರಾಹಾರ ಸತ್ಯಾಗ್ರಹ ನಡೆಯಿತು.
    ಎಂಡೋ ಸಂತ್ರಸ್ತ ತಾಯಂದಿರು ಪಂಜು ಬೆಳಗಿಸಿ ನಿರಾಹಾರ ಸತ್ಯಾಗ್ರಹವನ್ನು ಉದ್ಘಾಟಿಸಿ ಸರಕಾರದ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
   ಎಂಡೋಸಲ್ಫಾನ್ ಯಾದಿಯಲ್ಲಿ ಅರ್ಹ ಸಂತ್ರಸ್ತರನ್ನು ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿಗುತ್ತಿರುವ ಸವಲತ್ತುಗಳು ಕೂಡಾ ಸಿಗದಿರುವ ಸ್ಥಿತಿಯುಂಟಾಗಿದೆ ಎಂದು ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ. ಎಂಡೋಸಲಾನ್ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ವಿಧಾನಸಭಾ ಅಶಧಿವೇಶನ ಸಂದರ್ಭದಲ್ಲಿ ಸೆಕ್ರಟರಿಯೇಟ್ನ ಮುಂಭಾಗದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ತಾಯಿಯಂದಿರು ಆಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
   ಸಂತ್ರಸ್ತರಾದ ಎಲ್ಲರಿಗೂ ಐದು ಲಕ್ಷ ರೂ. ಧನಸಹಾಯ, ಜೀವನ ಪರ್ಯಂತ ಎಲ್ಲ ಚಿಕಿತ್ಸೆ ನೀಡಬೇಕು ಎಂದು ಸುಪ್ರೀಂ ಕೋಟರ್್ ತೀಪರ್ು ನೀಡಿದ್ದರೂ ಈ ತೀರ್ಪನ್ನು ಪಾಲಿಸುತ್ತಿಲ್ಲ. ಮೂರು ತಿಂಗಳೊಳಗೆ ಧನಸಹಾಯ ವಿತರಿಸುವಂತೆ ತೀಪರ್ಿನಲ್ಲಿ ತಿಳಿಸಿತ್ತು. ಇದರಂತೆ 2017 ಎ.10 ರಂದು `ನಸಹಾಯ ವಿತರಣೆ ಪೂರ್ಣಗೊಳಿಸಬೇಕಿತ್ತು. ಪ್ರಸ್ತುತ 5848 ಮಂದಿ ಸಂತ್ರಸ್ತರ ಯಾದಿಯಲ್ಲಿದ್ದಾರೆ. ಇದರಲ್ಲಿ 2665 ಮಂದಿಗೆ ನ್ಯಾಯಾಲಯದ ನಿದರ್ೇಶದಂತೆ ಸಹಾಯ ಲಭಿಸಿತ್ತು. ಪಟ್ಟಿಯಲ್ಲಿರುವ 3183 ಮಂದಿಗೆ ಸಹಾಯ ಲಭಿಸಿಲ್ಲ. ಸುಪ್ರೀಂ ಕೋಟರ್್ನ ತೀಪರ್ಿನಂತೆ ಎಲ್ಲರಿಗೂ ಐದು ಲಕ್ಷ ರೂ. ಲಭಿಸಬೇಕಿದೆ. 2013 ರ ಸರಕಾರದ ಆದೇಶದ ಪ್ರಕಾರ ಎಲ್ಲ ಸಂತ್ರಸ್ತರು ಬಿಪಿಎಲ್ ಪಟ್ಟಿಯಲ್ಲಿ ಒಳಗೊಂಡಿದ್ದರು. ಹೊಸ ಯಾದಿ ಬಂದಾಗ ಅರ್`ಕ್ಕೂ ಮಿಕ್ಕು ಸಂತ್ರಸ್ತರು ಬಿಪಿಎಲ್ ಯಾದಿಯಿಂದ ಹೊರ ಹೋದರು. ಸಂತ್ರಸ್ತರ ಪಟ್ಟಿಯಲ್ಲೊಳಗೊಂಡ 610 ಮಂದಿಗೆ ಇದುವರೆಗೆ ಯಾವುದೇ ಸಹಾಯಗಳು ಲಭಿಸಲಿಲ್ಲ.
   ಎಂಡೋ ಸಂತ್ರಸ್ತರ ನಿರಾಹಾರ ಸತ್ಯಾಗ್ರಹದಲ್ಲಿ ನಾರಾಯಣನ್ ಪೆರಿಯ ಅಧ್ಯಕ್ಷತೆ ವಹಿಸಿದರು. ಅಂಬಿಕಾಸುತನ್, ಶಾಸಕ ಎನ್.ಎ.ನೆಲ್ಲಿಕುನ್ನು, ಪಿಪಿಕೆ ಪೊದುವಾಳ್, ರಾಧಾಕೃಷ್ಣನ್ ಪೆರುಂಬಳ, ಕೆ.ಕೊಟ್ಟನ್, ಪ್ರೇಮಚಂದ್ರನ್. ಖಾಲೀದ್ ಕೊಳವಯಲ್, ಮಧು ಎಸ್.ನಾಯರ್, ಮೋಹನನ್ ಮಾಂಗಾಡ್, ಜಮೀಲ ಎಂ.ಪಿ, ಅನಿತ ಕೆ. ಮೊದಲಾದವರು ಮಾತನಾಡಿದರು. ಅಂಬಲತ್ತರ ಕುಂಞಿಕೃಷ್ಣನ್ ಸ್ವಾಗತಿಸಿ, ವಂದಿಸಿದರು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries