ರ್ಯಾಂಕ್ ಪಟ್ಟಿಯಲ್ಲಿರುವ ಕನ್ನಡವರಿಯದ ಉದ್ಯೋಗಾಥರ್ಿಗಳನ್ನು ಹೊರತುಪಡಿಸಲು ಆಗ್ರಹಿಸಿ ಯೂತ್ ಕಾಂಗ್ರೆಸ್ನಿಂದ ಮನವಿ
ಕುಂಬಳೆ: ಲೋಕಸೇವಾ ಆಯೋಗ 2014ರಲ್ಲಿ ನಡೆಸಿದ ಕೆಟಗರಿ ನಂಬ್ರ 345/2014 ಕನ್ನಡ ಮಾಧ್ಯಮ ಎಚ್ಎಸ್ಎ ಸಮಾಜ ವಿಜ್ಞಾನ ಪರೀಕ್ಷೆಯ ಸಂಕ್ಷಿಪ್ತ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು, ಇದರಲ್ಲಿ ಕನ್ನಡ ಅರಿಯದ ಉದ್ಯೋಗಾಥರ್ಿಗಳು ಸೇರ್ಪಡೆಗೊಂಡಿದ್ದಾರೆ. ಸಂಕ್ಷಿಪ್ತ ಪಟ್ಟಿಯಲ್ಲಿರುವವರ ಪ್ರಮಾಣಪತ್ರ ಪರಿಶೀಲನೆಯೂ ಪೂತರ್ಿಗೊಂಡಿದೆ. ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳಿ ಶಿಕ್ಷಕರು ಅಧ್ಯಾಪನ ನಡೆಸುತ್ತಿದ್ದು, ಇದು ಕನ್ನಡ ವಿದ್ಯಾಥರ್ಿಗಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗದಿರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯೂತ್ ಕಾಂಗ್ರೆಸ್ಸ್ ಆಗ್ರಹಿಸಿದೆ.
ಕನಿಷ್ಠ ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಯದವರು ಕೂಡಾ ಕನ್ನಡ ಬಲ್ಲವರು ಎಂಬ ಪ್ರಮಾಣಪತ್ರ ಹಾಜರುಪಡಿಸಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅಧ್ಯಾಪಕ ಹುದ್ದೆಗೆ ಪ್ರವೇಶಿಸುತ್ತಾರೆ. ಆದರೆ ಸಾಕಷ್ಟು ಕನ್ನಡ ಅಕ್ಷರ ಜ್ಞಾನವೂ ಇಲ್ಲದ ಇವರಿಂದ ಕನ್ನಡ ವಿದ್ಯಾಥರ್ಿಗಳು ಏನು ಕಲಿಯಬಹುದು ಎಂಬುದನ್ನು ಸಂಬಂಧಪಟ್ಟವರು ಅರ್ಥ ಮಾಡಿಕೊಳ್ಳಬೇಕು. ಕೇವಲ ಸರಕಾರಿ ಹುದ್ದೆಯ ದೃಷ್ಟಿಯಿಂದ, ರಾಜಕೀಯ ಒತ್ತಡದಿಂದ ಇಂತಹವರನ್ನು ಕನ್ನಡ ಶಾಲೆಗಳಲ್ಲಿ ನೇಮಿಸಿ ಕನ್ನಡ ವಿದ್ಯಾಥರ್ಿಗಳ ಭವಿಷ್ಯವನ್ನು ನಾಶಕ್ಕೊಡ್ಡದಂತೆ ಎಚ್ಚರಿಕೆ ವಹಿಸಬೇಕು. ಪ್ರಸ್ತುತ ಎಚ್ಎಸ್ಎ ಸಮಾಜ ವಿಜ್ಞಾನ ಸಂಕ್ಷಿಪ್ತ ರ್ಯಾಂಕ್ ಪಟ್ಟಿಯಲ್ಲಿರುವ ಕನ್ನಡವರಿಯದ ಉದ್ಯೋಗಾಥರ್ಿಗಳನ್ನು ಹೊರತುಪಡಿಸಿ ಕನ್ನಡಬಲ್ಲ ಉದ್ಯೋಗಿಗಳನ್ನು ನೇಮಿಸಿ ಕನ್ನಡ ಉದ್ಯೋಗಾಥರ್ಿಗಳಿಗೆ ಹಾಗೂ ಕನ್ನಡ ವಿದ್ಯಾಥರ್ಿಗಳಿಗೆ ನ್ಯಾಯವೊದಗಿಸಿ ಕೊಡಬೇಕು ಎಂದು ಯೂತ್ ಕಾಂಗ್ರಸ್ಸ್ ರಾಜ್ಯ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಲಾಯಿತು.
ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿರುವ ಕೆಲವು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡವರಿಯದ ಶಿಕ್ಷಕರು ಅಧ್ಯಾಪನ ನಡೆಸುತ್ತಿದ್ದು, ಅಲ್ಲಿನ ವಿದ್ಯಾಥರ್ಿಗಳು ಅನುಭವಿಸುವ ಸಮಸ್ಯೆ ಇನ್ನಷ್ಟು ಶಾಲೆಗಳಿಗೆ ವಿಸ್ತರಿಸದಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕನ್ನಡ ಅರಿಯದ ಅಧ್ಯಾಪಕರನ್ನು ಸರಕಾರಿ ಶಾಲೆಗಳಲ್ಲಿ ನೇಮಿಸಿರುವುದರ ವಿರುದ್ಧ ಪ್ರತಿಭಟನೆ ಮೂಡಿದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ದುಸ್ಥಿತಿ ಮುಂದುವರಿಯಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು. ಕನ್ನಡಬಲ್ಲ ಶಿಕ್ಷಕರನ್ನು ನೇಮಿಸಿ ಈ ಹುದ್ದೆಗಳನ್ನು ಸಂರಕ್ಷಿಸಬೇಕು. ಅನರ್ಹರನ್ನು ನೇಮಿಸಿ ಕನ್ನಡ ಹುದ್ದೆಗಳನ್ನು ನಷ್ಟಗೊಳಿಸುವ ಯತ್ನಗಳು ನಡೆಯುತ್ತಿದೆ. ಕನ್ನಡಿಗರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು, ಹಲವು ಸವಲತ್ತುಗಳು ನಷ್ಟವಾಗುತ್ತಿವೆ. ಇಂತಹುಗಳಿಗೆ ಮುಂದೆ ಅವಕಾಶ ಕೊಡದಿರಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಸಂಕ್ಷಿಪ್ತ ರ್ಯಾಂಕ್ ಪಟ್ಟಿಯಲ್ಲಿರುವ ಮಲೆಯಾಳಿಗರನ್ನು ಹೊರತುಪಡಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ಅವರಿಗೆ ಶನಿವಾರ ಕಾಸರಗೋಡು ಅತಿಥಿ ಗೃಹದಲ್ಲಿ ಯುವಕಾಂಗ್ರೆಸ್ ಕಾಸರಗೋಡು ಪಾಲರ್ಿಮೆಂಟ್ ಕಾರ್ಯದಶರ್ಿ ಎಂ.ಎಚ್.ಆರಿಸ್ ಶೇಣಿ ಮನವಿ ಸಲ್ಲಿಸಿದ್ದರು. ಅನ್ವರ್ ಬಜಕೂಡ್ಲು, ಮನಾಫ್ ನುಳ್ಳಿಪ್ಪಾಡಿ, ನೌಶಾದ್ ಕನ್ಯಪ್ಪಾಡಿ, ಶ್ರೀಜಿತ್ ಮಾಡೆಕಲ್ಲ್ ಜೊತೆಯಲ್ಲಿದ್ದರು.