ದೇಲಂಪಾಡಿಯಲ್ಲಿ ಸಹಸ್ರಚಂದ್ರ ದರ್ಶನ
ಮುಳ್ಳೇರಿಯ : ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ, ಬನಾರಿ ಇದರ ಅಧ್ಯಕ್ಷ, ದೇಲಂಪಾಡಿ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ, ರಬ್ಬರ್ ಸೊಸೈಟಿಯ ಸ್ಥಾಪಕ ಕವಿ, ಸಾಹಿತಿ ಮತ್ತು ಸಾಂಸ್ಕೃತಿಕ ಸಂಘಟಕ ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ದೇಲಂಪಾಡಿ ಬನಾರಿ ಇವರ ಸಹಸ್ರ ಚಂದ್ರ ದರ್ಶನ ಕಾರ್ಯಕ್ರಮವು `ಕೃಷ್ಣಾನುಗ್ರಹ' ನಿವಾಸದಲ್ಲಿ ಊರಪರವೂರ ಅಭಿಮಾನಿ ಬಳಗದವರಿಂದ ನೆರವೇರಿತು.
ವೇ.ಮೂ. ಮಿತ್ತೂರು ತಿರುಮಲೇಶ್ವರ ಭಟ್ಟರ ನೇತೃತ್ವದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿಹೋಮ, ಮಂಗಳದ್ರವ್ಯ ದರ್ಶನ ಮುಂತಾದ ವೈದಿಕ ಕಾರ್ಯಕ್ರಮಗಳು ನೆರವೇರಿದವು. ಆ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಸಹಕಾರೀ ಧುರೀಣ ಊಜಂಪಾಡಿ ನಾರಾಯಣ ನಾಯಕ್, ಕವಿ ಸಾಹಿತಿ ಡಾ| ರಮಾನಂದ ಬನಾರಿ, ನಿವೃತ್ತ ನ್ಯಾಯಾಧೀಶ ಮನಮೋಹನ ಬನಾರಿ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿದ ಮಿತ್ತೂರು ಈಶ್ವರಚಂದ್ರ ಜೋಯಿಸರು `ಧೀಘರ್ಾಯುಷ್ಯವು ಉತ್ತಮ ಆರೋಗ್ಯ ಮತ್ತು ಸತ್ಚಿಂತನೆಯಿಂದ ಮಾತ್ರ ಸಾಧ್ಯ. ಭಾರತೀಯ ದರ್ಶನಗಳು ಆಯುಷ್ಯದ ಪ್ರತಿ ಕಾಲಘಟ್ಟದಲ್ಲಿ ನಡೆಸಬೇಕಾದ ಕರ್ಮಕ್ರಿಯೆಗಳ ಬಗ್ಗೆ ಹೇಳಿದೆ. ಭಗವಂತನ ಕಡೆಗೆ ಚಿಂತನೆ ಹರಸಿ ಕ್ರೀಯಾಶೀಲ ಬದುಕನ್ನು ನಡೆಸುವಂತಾಗಬೇಕು ಎಂಬುದಾಗಿ ಅವರು ನುಡಿದರು. ಈ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿಯನ್ನು ಶ್ರೀರಾಮಚಂದ್ರಾಪುರ ಮಠದ ಗುರು ಪ್ರತಿನಿಧಿ ಶ್ರೀರಾಮ ದೇರ್ಕಜೆ ಬಿಡುಗಡೆಗೊಳಿಸಿದರು. ಡಾ| ರಮಾನಂದ ಬನಾರಿಯವರು ರಚಿಸಿದ ವಾತ್ಸಲ್ಯ ಗೀತೆಯನ್ನು ಡಾ| ಅನ್ನಪೂಣರ್ೆಶ್ವರಿ ಏತಡ್ಕ, ಶ್ರೀಮತಿ ರೇಖಾ ಹೊನ್ನಾಡಿ, ಯಶೋದಾ, ಶಶಿಧರ ಭಟ್, ಕು| ಪ್ರಕೃತಿ ಬನಾರಿ, ಕು| ಸ್ತುತಿ ಏತಡ್ಕ ಹಾಡಿದರು. 80ರ ಹರೆಯ ದಾಟಿದ ಶ್ರೀ ವನಮಾಲ ಕೇಶವ ಭಟ್ಟರಿಗೆ ಸಾರ್ಥಕ ಬದುಕಿಗೆ ಅಭಿನಂದನೆ ಸಲ್ಲಿಸಿದರು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.