HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       ಕಲಾವಿದರ ಪ್ರಾತಿನಿಧಿಕ ಧ್ವನಿ ಸವಾಕ್-ಜಿ.ವಿಶಾಖನ್
       ಜಿಲ್ಲಾ ಸಮಾವೇಶದ ಉದ್ಘಾಟನೆ-ಕಲಾವಿದರಿಗೆ ನ್ಯಾಯದೊರಕಿಸಿಕೊಡುವುದೊಂದೇ ಸವಾಕ್ನ ಲಕ್ಷ್ಯ 
    ಕುಂಬಳೆ: ಕಲಾವಿದರು, ಕಲಾ ಸಂಬಂಧಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಸಾವಿರಾರು ಜನರ ಸಂಕಷ್ಟಗಳಿಗೆ ಧ್ವನಿಯಾಗಿ, ರಾಜ್ಯದ ಎಲ್ಲಾ ಸಾಂಸ್ಕೃತಿಕ ರಂಗದ ಪಾತಿನಿಧಿಕ ನೆಲೆಯಲ್ಲಿ ಸವಾಕ್ ಸಮಗ್ರ ಕಾರ್ಯಯೋಜನೆಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಸಟೇಜ್ ಆಟರ್ಿಸ್ಟ್ ಆಂಡ್ ವರ್ಕಸ್ಸರ್್ ಅಸೋಸಿಯೇಶನ್ ಓಫ್ ಕೇರಳ(ಸವಾಕ್) ರಾಜ್ಯಾಧ್ಯಕ್ಷ ಜಿ.ವಿಶಾಖನ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಸವಾಕ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶನಿವಾರ ಕಾಸರಗೋಡು ನಗರಸಭಾ ಕಾನ್ಪರೆಂನಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕುಟುಂಬ ಸಂಗಮ-ಸಮಾವೇಶ ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಅವರು ಮಾತನಾಡಿದರು.
   ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಕಲಾವಿದರು ಒಂದಾಗಬೇಕಾದ ಅಗತ್ಯವಿದ್ದು, ನ್ಯಾಯಯುತ ಹಕ್ಕುಗಳನ್ನು ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು. ರಾಜ್ಯಾದ್ಯಂತ ಕಳೆದ 20 ವರ್ಷಗಳಿಂದ ಕಾಯರ್ಾಚರಿಸುತ್ತಿರುವ ಸವಾಕ್ ಪ್ರಸ್ತುತ ಕಳೆದ ಕೆಲವು ತಿಂಗಳುಗಳಿಂದ ಜಿಲ್ಲೆಯಲ್ಲೂ ಸಕ್ರಿಯವಾಗಿ ಕಾರ್ಯಚಟುವಟಿಕೆ ವಿಸ್ತರಿಸಿರುವುದು ಇಲ್ಲಿಯ ಕಲಾವಿದರ ಸಂಘಟನಾತ್ಮಕತೆಯ ಸಂಕೇತವಾಗಿದ್ದು, ಲಕ್ಷ್ಯ ಪ್ರಾಪ್ತಿಯಲ್ಲಿ ಗುಣಾತ್ಮಕ ಬಲ ಪಡೆಯಲಿದೆ ಎಂದು ತಿಳಿಸಿದರು.
    ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಮಾತನಾಡಿ, ಅತಿ ಹಿಂದುಳಿದಿರುವ ಕಾಸರಗೋಡಿನ ಕಲಾ ಕ್ಷೇತ್ರಗಳ ಒಗ್ಗಟ್ಟಿಗೆ ಸಾಕ್ಷಿಯಾಗಿ ಸವಾಕ್ ಅತಿ ಕಿರಿಯ ಅವಧಿಯಲ್ಲಿ ಸಮಾವೇಶ ಸಂಘಟಿಸಿರುವುದು ಸ್ತುತ್ಯರ್ಹ ಬೆಳವಣಿಗೆಯಾಗಿದೆ. ಇಲ್ಲಿಯ ಬಹು ಸಮ್ಮಿಶ್ರ ಸಂಸ್ಕೃತಿಯ ಪ್ರಾಚೀನ ಕಲಾ ಪ್ರಕಾರಗಳ ಸಂಗಮ ಕೇಂದ್ರವಾಗಿ ಗುರುತಿಸಿಕೊಂಡಿದ್ದರೂ ಹೊಸ ತಲೆಮಾರಿನ ಯುವ ಕಲಾವಿದರು ರೂಪುಗೊಳ್ಳುವಲ್ಲಿ ಹಿನ್ನಡೆಯಲ್ಲಿದ್ದು, ಹಲವು ಕಲಾ ಪ್ರಕಾರಗಳು ನಾಶಗೊಳ್ಳುವ ಭೀತಿಯಲ್ಲಿದೆ. ಈ ಹಿನ್ನೆಲೆಯಲಲಿ ಕಲೆ, ಕಲಾವಿದರು ಉಳಿದು ಬೆಳೆಯಲು ವರ್ತಮಾನದ ಮಾನದಂಡಗಳಡಿ ಕಲಾವಿದರನ್ನೂ ಪರಿಪೋಶಿಸುವಲ್ಲಿ ಸರಕಾರ ಉತ್ಸುಕತೆ ತೋರಿದೆ. ಆದರೆ ಸಂಘಟನಾತ್ಮಕ ಶಕ್ತಿಯ ಮೂಲಕ ಹಕ್ಕುಗಳನ್ನು ಪಡೆಯುವಲ್ಲಿ ಪರಿಶ್ರಮಿಸುವ ಸವಾಕ್ ನ ಚಟುವಟಿಕೆ ಯಶಸ್ವಿಯಾಗಲಿ ಎಂದು ತಿಳಿಸಿದರು.
   ಸವಾಕ್ ಜಿಲ್ಲಾ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಿಂಬು, ಸವಾಕ್ ಸವಾಕ್ ರಾಜ್ಯ ಪ್ರಧಾನ ಕಾರ್ಯದಶರ್ಿ ಸುದರ್ಶನ ವರ್ಣ, ಉಪಾಧ್ಯಕ್ಷ ರಾಜೇಶ್ ಪಲಂಗಾಡ್, ಖಜಾಂಜಿ ಅಲಿಯಾರ್ ಪುನ್ನಪ್ರ, ರಾಜ್ಯ ಕಾರ್ಯನಿವರ್ಾಹಕ ಕಾರ್ಯದಶರ್ಿ ವಿನೋದ್ ಅಚುಂಬಿತಾ, ಸವಾಕ್ ಮಹಿಳಾ ಸಮಿತಿ ರಾಜ್ಯಾಧ್ಯಕ್ಷೆ ಬಿಂದು ಸಜಿತ್ ಕುಮಾರ್,  ಕಣ್ಣೂರು ಜಿಲ್ಲಾಧ್ಯಕ್ಷ ಹರಿದಾಸ್ ಚೇರುಕ್ಕುನ್ನು, ಕೆಎಸ್ಎಚ್ಗಿಓಎ ಜಿಲ್ಲಾಧ್ಯಕ್ಷ ಸುರೇಂದ್ರನ್, ಸವಾಕ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ, ಪಿ.ಪಿ.ವಿಜಯನ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಸವಾಕ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ತುಳಸೀಧರನ್ ಸ್ವಾಗತಿಸಿನ್ಜಿಲ್ಲಾ ಖಜಾಂಜಿ ಉಮೇಶ್ ಮಾಸ್ಟರ್ ಪ್ಯೂಶನ್ ವಂದಿಸಿದರು. ವೀಜೀ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
    ಅನಾರೋಗ್ಯಪೀಡಿತರಾಗಿ ಸಂಕಷ್ಟದಲ್ಲಿರುವ ಕಲಾವಿದರಾದ ಬಾಲನ್ ಕಾಸರಗೋಡು ರವರಿಗೆ ವ್ಹೀಲ್ ಚೆಯರ್ ಹಸ್ತಾಂತರಿಸಲಾಯಿತು. ಬಳಿಕ ಸಂಧ್ಯಾರಾಗ ತೆರೆದ ರಂಗಮಂದಿರದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಿತು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries