HEALTH TIPS

No title

            ಕಾಟುಕುಕ್ಕೆಯಲ್ಲಿ ಗಣರಾಜ್ಯೋತ್ಸವ
    ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಶಾಲೆಯಲ್ಲಿ ಶುಕ್ರವಾರ 69ನೇ ಗಣರಾಜ್ಯೋತ್ಸವ ಜರುಗಿತು. ಶಾಲಾ ಮುಖ್ಯೋಪಾಧ್ಯಾಯ ಸುಧೀರ್ಕುಮಾರ್ ಧ್ವಜಾರೋಹನ ನೆರವೇರಿಸಿದರು.
   ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನಿವೃತ್ತ ಸಿ.ಆರ್.ಎಫ್ ಯೋಧ  ಜಿ.ಎ ಮಣಿಯಾಣಿ ಮಾತನಾಡಿ ಆಧುನಿಕ ವ್ಯವಸ್ಥೆ ಇಷ್ಟು ಬೆಳೆದು ಬರುವಲ್ಲಿ ಹಲವಾರು ಮಹನೀಯರು ಜೀವನದ ಅತಿ ಅಮೂಲ್ಯವಾದ ಸಂತೋಷ ,ನೆಮ್ಮದಿ, ಸುಖ ಸಂತೋಷಗಳನ್ನು ಮರೆತು ರಕ್ತ ಹರಿಸಿ ಬೆವರು ಸುರಿಸಿ ದೇಶಕ್ಕಾಗಿ ಜೀವವನ್ನೇ ಬಲಿದಾನಗೈದಿದ್ದಾರೆ.ಅವರ ತ್ಯಾಗ ಬಲಿದಾನವನ್ನು ನಾವು ವಿಸ್ಮರಿಸುವ ಹಾಗಿಲ್ಲ. ಮಹಾತ್ಮ ಗಾಂಧಿ,ನೆಹರು ,ರಾಣಿ ಲಕ್ಷ್ಮೀ ಭಾಯಿ ಸಹಿತ ಅನೇಕ ಮಹಾತ್ಮರ ಬಲಿದಾನದ ಮೂಲಕ ತಂದ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಬಾರದು. ಸ್ವಾತಂತ್ರ್ಯವನ್ನು ಗೌರವಯುತವಾಗಿ ಕಾಣಬೇಕು. ದೇಶಪ್ರೇಮ ,ದೇಶ ಜಾಗೃತಿ ಪ್ರತಿಯೊಬ್ಬ ಮಕ್ಕಳಲ್ಲೂ ಬೆಳೆಸುವ ಕಾರ್ಯವಾಗಬೇಕು. ನಾವು ನಮ್ಮ ಮನೆ ಕಚೇರಿಗಳು ,ಶಾಲಾ ಕಾಲೇಜುಗಳಲ್ಲಿ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ಸ್ವಚ್ಚತೆಗೆ ಮೊದಲ ಆದ್ಯತೆ  ಕೊಟ್ಟರೆ ಸ್ಚಚ್ಚ ಭಾರತದ ನಿಮರ್ಾಣ ಸಾಧ್ಯ ಎಂದು ತಿಳಿಸಿದರು. ದೇಶದೊಳಗಿನ ಆಂತರಿಕ ಕಲಹಕ್ಕೆ ಮುಂದಾಗುತ್ತಿರುವ ವಿದ್ಯಾಥರ್ಿಗಳನ್ನು ನೇರವಾಗಿ ಬಳಸಿಕೊಳ್ಳುವ ಅಷ್ಟೇ ಯಾಕೆ ಕರ್ತವ್ಯದಲ್ಲಿರುವ ಯೋಧರನ್ನೇ ಹಾದಿ ತಪ್ಪಿಸುವ ಜಾಲಗಳು ಚಾಲ್ತಿಯಲ್ಲಿವೆ. ಹಾಗಾಗಿ ಮಕ್ಕಳ ಲಾಲನೆ-ಪಾಲನೆಯಲ್ಲಿ ಹೆತ್ತವರು ಹೆಚ್ಚಿನ ಶಿಸ್ತು , ಜಾಗೃತಿ ಹೊಂದಿದ್ದಲ್ಲಿ ಮಕ್ಕಳ ಭವಿಷ್ಯ , ದೇಶದ ಭವಿಷ್ಯ ಉಜ್ವಲವಾಗಿರುತ್ತೆ ಎಂದು ನುಡಿದರು.
  ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್ , ಶಾಲಾ ಆಧ್ಯಕ್ಷ ಸಿ.ಸಂಜೀವ ರೈ, ಉಪಸ್ಥಿತರಿದ್ದರು. ಹೈಯರ್ ಸೆಕೆಂಡರಿ ಪ್ರಾಂಶುಪಾಲ   ಪದ್ಮನಾಭ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಅಧ್ಯಾಪಕ-ಅಧ್ಯಾಪಿಕೆಯರಾದ ,ಹರಿಪ್ರಸಾದ್  ಶೆಟ್ಟಿ , ರಮಣಿ, ಕೃಷ್ಣ ಕುಮಾರಿ, ಮಹೇಶ, ಈಶ್ವರ ನಾಯಕ್, ಎ .ಮನೋಹರ್, ಅನಿತಾ ಟೀಚರ್, ಶಿಲ್ಪಾ, ಸಂಧ್ಯಾ , ಚಂದ್ರಹಾಸ್,   ನಿವೃತ್ತ ಶಿಕ್ಷಕ ಮತ್ತು ಕಚೇರಿ ಸಹಾಯಕ  ಭಾಸ್ಕರ. ಕೆ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಎಚ್.ಲೋಕನಾಥ ಶೆಟ್ಟಿ ಸ್ವಾಗತಿಸಿ, ಅಧ್ಯಾಪಿಕೆ ವಾಣಿ.ಜಿ ಶೆಟ್ಟಿ ವಂದಿಸಿದರು. ಉಪನ್ಯಾಸಕ ರಾಜೇಶ್ ಸಿ.ಯಚ್ ಕಾರ್ಯಕ್ರಕ್ಕೆ ನಿರೂಪಣೆಗೈದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries