ಕುಂಞಿಕೃಷ್ಣ ಮಣಿಯಾಣಿ ಪದ್ಮಾರ್ ನಿಧನ
ಬದಿಯಡ್ಕ: ಹಿರಿಯ ಕೃಷಿಕ, ವ್ಯಾಪಾರಿ ಪದ್ಮಾರ್ ಕುಂಞಿಕೃಷ್ಣ ಮಣಿಯಾಣಿ(87) ಬುಧವಾರ ಬೆಳಗ್ಗೆ ಅಗಲ್ಪಾಡಿಯ ಪದ್ಮಾರಿನ ಅವರ ಸ್ವಗೃಹದಲ್ಲಿ ನಿಧನರಾದರು. ಯಾದವ ಸೇವಾ ಸಂಘ ಅಗಲ್ಪಾಡಿ, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಅಗಲ್ಪಾಡಿ ಇದರ ಅಧ್ಯಕ್ಷ ಸ್ಥಾನ ಸಹಿತ ಸಂಘಟನೆಗಳ ಆರಂಭದ ದಿನಗಳಿಂದಲೂ ಈ ಸಂಸ್ಥೆಗಳ ಅಭಿವೃದ್ಧಿಗೆ ಅಪಾರ ಶ್ರಮ ವಹಿಸಿದ್ದರು. ಗ್ರಾಮೀಣ ಕೃಷಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಮುತ್ತಕ್ಕ, ರಾ.ಸ್ವಯಂ ಸೇವಕ ಸಂಘದ ಕನರ್ಾಟಕ ರಾಜ್ಯದ ಮಾಧ್ಯಮ ವಿಭಾಗ ಪ್ರಮುಖ್ ರಾಜೇಶ್ ಪದ್ಮಾರ್ ಸಹಿತ 7 ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಆರೆಸ್ಸೆಸ್ ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಮುಕುಂದ ಸಿ ಆರ್, ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಯೋಜಕ ಜೆ ನಂದಕುಮಾರ್, ಕ್ಷೇತ್ರೀಯ ಸಂಘಚಾಲಕ ವಿ ನಾಗರಾಜ್, ವಿಹಿಂಪ ಅಂತರರಾಷ್ಟ್ರೀಯ ಕಾಯರ್ಾಧ್ಯಕ್ಷ ಪ್ರವೀಣ್ ತೊಗಾಡಿಯಾ, ಕುಟುಂಬ ಪ್ರಭೋಧನ್ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ರಾಮ್ ಮಾಧವ್, ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.