ಫೋಟೊಗ್ರಫಿಯಲ್ಲಿ ಹೊಸ ಛಾಪು ಮೂಡಿಸಿದ ಕಾಸರಗೋಡಿನ ದಿನೇಶ್ಇನ್ಸೈಟ್
ವೈಲ್ಡ್ಲೈಫ್ ಫೋಟೊಗ್ರಾಫರ್ ಆಗಿ ಎರಡನೇ ಬಾರಿಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ದಿನೇಶ್
ಬದಿಯಡ್ಕ: ದೂರದೂರದ ಕಾನನಗಳಲ್ಲಿ,ದಟ್ಟ ಅಭಯಾರಣ್ಯಗಳಲ್ಲಿ ಕ್ಯಾಮರಾಕಣ್ಣಿನ ಮೂಲಕ ಪ್ರಾಣಿಗಳ ಚಲನ ವಲನ, ಸ್ಚಚ್ಛಂಧ ವಿಹಾರ, ಪ್ರಕೃತಿಯೊಳಗಿನ ಅವುಗಳ ಒಡನಾಟವನ್ನು ಕಳೆದ ಮೂರು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸಿ ಸೆರೆ ಹಿಡಿಯುತ್ತಿರುವವರು ಕಾಸರಗೋಡಿನ ಇನ್ಸೈಟ್ ಸ್ಟುಡಿಯೋ ಮಾಲಕರಾದ ಕೋಟೆಕಣಿ ನಿವಾಸಿ ದಿನೇಶ್ ಇನ್ಸೈಟ್ ಅವರು. ಕೇರಳ, ಕನರ್ಾಟಕ ಸಹಿತ ದೇಶದ ವಿವಿಧ ರಾಜ್ಯಗಳ ಹಲವು ಅಭಯಾರಣ್ಯಗಳು, ವನ್ಯಜೀವಿ ಸಂರಕ್ಷಣಾಲಯಗಳು ಸಹಿತ ಮಲೆ,ಕಾಡುಗಳನ್ನು ಸುತ್ತಿ ಬಂದಿರುವ ದಿನೇಶ್,ತಮ್ಮ ಅಂತದೃಷ್ಟಿಯ ಮೂಲಕ ಛಾಯಾಗ್ರಹಣ ಮಾತ್ರವಲ್ಲದೆ ಪ್ರಕೃತಿ ಸಾಮೀಪ್ಯವನ್ನು ಬೆಳೆಸಿಕೊಂಡು, ಪ್ರಕೃತಿಯ ಸೋಜಿಗಕ್ಕೆ ಒಳಗಾಗಿ ವೈಯಕ್ತಿಕ ನೆಲೆಯಲ್ಲೂ ಧನಾತ್ಮಕ ಬದಲಾವಣೆಯನ್ನು ಕಂಡಿದ್ದಾರೆ.
ಕೇರಳದ ತೇಕ್ಕಡಿ, ಮುನ್ನಾರ್, ಕನರ್ಾಟಕ ರಾಜ್ಯದ ಕಬಿನಿ, ಉತ್ತರಾಖಂಡದ ಜಿಮ್ಕಾಬರ್ೆಟ್, ರಾಜಸ್ಥಾನದ ರಣತಂಬೋರ್ ಅಭಯಾರಣ್ಯವನ್ನು ಸುತ್ತಿ ಹುಲಿ, ಸಿಂಹ, ಆನೆ ಸಹಿತ ಹಲವು ಪ್ರಾಣಿ, ಪಕ್ಷಿ ಪ್ರಭೇದಗಳ ಛಾಯಾಚಿತ್ರಗಳನ್ನು ಸೆರೆಹಿಡಿದು, ಛಾಯಾಚಿತ್ರ ರಸಿಕರ ಮನ ಗೆದ್ದು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಕೇರಳ ರಾಜ್ಯಾದ್ಯಂತ ನಡೆದಿರುವ ಹಲವು ಛಾಯಾಚಿತ್ರಪ್ರದರ್ಶನಗಳಲ್ಲಿ ಭಾಗವಹಿಸಿ ಕಾಸರಗೋಡು ಜಿಲ್ಲೆಯ ಉತ್ತಮ ವೈಲ್ಡ್ಲೈಫ್ ಫೋಟೊಗ್ರಾಫರ್ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಛಾಯಾಚಿತ್ರಗಳು ವಿಭಿನ್ನ ನೋಟ ಹಾಗೂ ದೃಷ್ಟಿಕೋನವನ್ನು ಹೊಂದುವ ಮೂಲಕ ನೋಡುಗರಲ್ಲಿ ಕೌತುಕ ಮೂಡಿಸುವಂತಿರಬೇಕು, ಕ್ಯಾಮರಾ ಇದ್ದವರು ಯಾರು ಬೇಕಾದರೂ ಚಿತ್ರಗಳನ್ನು ಸೆರೆಹಿಡಿಯಬಹುದು, ಆದರೆ ಉತ್ತಮ ಛಾಯಾಗ್ರಾಹಕ ಎಂದೆನಿಸಿಕೊಳ್ಳಲು ಆತ ಛಾಯಾಗ್ರಾಹಿಕೆಯ ಒಳಗುಟ್ಟನ್ನು ಅರಿತಿರಬೇಕು ಎನ್ನುತ್ತಾರೆ ದಿನೇಶ್. ಫೋಟೊಗ್ರಫಿಯಲ್ಲಿ ಒಂದು ರಾಷ್ಟ್ರ ಪ್ರಶಸ್ತಿ, ಐದುರಾಜ್ಯ ಪ್ರಶಸ್ತಿ ಸಹಿತ ಫೊಟೋಗ್ರಫಿ ಅಸೋಸಿಯೇಶನ್ ಕೊಡಮಾಡುವ ಹಲವು ಪ್ರಶಸ್ತಿಗಳಿಗೆ ದಿನೇಶ್ ಇನ್ಸೈಟ್ ಭಾಜನರಾಗಿದ್ದಾರೆ.
ಎರಡನೇ ಬಾರಿ ಆಫ್ರಿಕಾ ಪ್ರವಾಸ:
ವನ್ಯಜೀವಿ ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿ ಹೊಂದಿರುವ ದಿನೇಶ್ ಇನ್ಸೈಟ್ ಕಳೆದ ವರ್ಷ ಆಫ್ರಿಕಾದ ಕೀನ್ಯಾ ರಾಷ್ಟ್ರವನ್ನು ಸಂದಶರ್ಿಸಿ ಅಲ್ಲಿನ ಅಭಯಾರಣ್ಯ -ಹುಲ್ಲುಗಾವಲುಗಳಲ್ಲಿ ಹಲವು ದಿನಗಳ ಕಾಲ ಸಂಚರಿಸಿ ವೈಲ್ಡ್ ಲೈಫ್ ಫೋಟೊಗ್ರಫಿಯಲ್ಲಿ ಹೊಸ ಅನುಭವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಎರಡನೇ ಬಾರಿ ಆಫ್ರಿಕಾ ಪ್ರವಾಸಕೈಗೊಳ್ಳಲಿರುವ ದಿನೇಶ್ ತಾಂಜಾನಿಯಾದ ಮಸೈಮಾರಾ ವನ್ಯಧಾಮವನ್ನು ಸಂದಶರ್ಿಸಲಿದ್ದಾರೆ. ಫೆಬ್ರವರಿ ತಿಂಗಳು ವೈಲ್ಡ್ಬೀಸ್ಟ್, ಜೀಬ್ರಾ ಸೇರಿದಂತೆ ಲಕ್ಷೊಪಲಕ್ಷ ಸಂಖ್ಯೆಯಲ್ಲಿರುವ ಈ ಕಾಡುಮೃಗಗಳ ಸಂತಾನೋತ್ಪತ್ತಿ ಕಾಲ, ಆಹಾರ ಅರಸುತ್ತಾ ಹಲವು ಸಹಸ್ರ ಕಿ.ಮಿ ಸಂಚರಿಸುವ ವೈಲ್ಡ್ ಬೀಸ್ಟ್ಗಳು ಮಸೈಮಾರಾ ಪ್ರದೇಶದಲ್ಲಿನ ನದಿ ದಾಟಿ ಹುಲ್ಲುಗಾವಲು ಪ್ರವೇಶಿಸುತ್ತವೆ. ಸಂತಾನೋತ್ಪತ್ತಿಯ ನಂತರ ಈ ಪ್ರಾಣಿಗಳು ತಮ್ಮ ಎಳೆ ಕಂದಮ್ಮಗಳ ಜೊತೆ ಪುನಃ ಸ್ವಸ್ಥಾನಕ್ಕೆಮರಳುವ ದೃಶ್ಯ ಮನಮೋಹಕ ಮಾತ್ರವಲ್ಲದೆ, ಈ ವಲಸೆಯು ಪ್ರಕೃತಿ ವಿಶೇಷತೆಯೊಂದಿಗೆ, ಸೋಜಿಗವು ಹೌದು. ಇಂತಹ ಮನೋಹರ ದೃಶ್ಯಗಳನ್ನು ಕ್ಯಾಮರಾ ಮೂಲಕ ಸೆರೆಹಿಡಿಯಲು ತೆರಳುವುದಾಗಿ ಬಹಳ ಸಂತಸದಿಂದ ಹೇಳಿಕೊಳ್ಳುತ್ತಾರೆ ದಿನೇಶ್.
ಶೆಟ್ಟಿ ಸ್ಟುಡಿಯೋ ಫೋಟೊಗ್ರಫಿ ಗರಡಿ!:
1986ರಲ್ಲಿ ಕಾಸರಗೋಡಿನ ಪ್ರತಿಷ್ಠಿತ ಶೆಟ್ಟಿ ಸ್ಟುಡಿಯೋದಲ್ಲಿರೂಮ್ ಬಾಯ್ ಆಗಿ ಕೆಲಸಕ್ಕೆ ಸೇರಿದ ದಿನೇಶ್ರಿಗೆ ಶೆಟ್ಟಿ ಸ್ಟುಡಿಯೋ ಫೋಟೊಗ್ರಫಿಯ ಬೇಸಿಕ್ಸ್ ಗಳನ್ನು ಕಲಿಸಿ, ಉತ್ತಮ ಫೋಟೊಗ್ರಾಫರ್ ಆಗಿ ಬೆಳೆಯುವಲ್ಲಿ ಸಹಕರಿಸಿದೆ. ಫೋಟೊಗ್ರಫಿ ಬದುಕಿನ ಆರಂಭದ ಹಂತದಲ್ಲಿ ಶೆಟ್ಟಿ ಸ್ಟುಡಿಯೋ ತನ್ನ ಆಸಕ್ತಿಗೆ ನೀರೆರೆದು ಪೋಷಿಸಿತು ಎನ್ನುತ್ತಾರೆ ದಿನೇಶ್. ಹಲವು ಫೀಲ್ಡ್ ಕ್ಯಾಮರಾಗಳನ್ನು ಹೊಂದಿರುವ ದಿನೇಶ್ ಅವರು ವೃತ್ತಿಜೀವನದ ಆರಂಭದಲ್ಲಿ ಉಪಯೋಗಿಸುತ್ತಿದ್ದ ಯಶಿಕಾ, ಮಿನೋಲ್ಟಾ, ಕ್ಯಾನಾನ್, ನಿಕಾನ್ ಸಹಿತ ಹಲವು ರೋಲ್ ಕ್ಯಾಮರಾಗಳನ್ನು ನೆನಪಿಸಿಕೊಳ್ಳುತ್ತಾರೆ.
ಫೋಟೊಗ್ರಫಿ ಹಾಗೂ ವಿವಿಧ ಕ್ಯಾಮರಾ ಟೆಕ್ನಾಲಜಿಗಳ ಹಲವು ಹಂತಗಳನ್ನು ದಾಟಿ ಬಂದಿರುವ ತನಗೆ ದೇಶಾಭಿಮಾನಿ ಪತ್ರಿಕೆಯಲ್ಲಿ ಫೋಟೊಗ್ರಾಫರ್ ಆಗಿರುವ ರಾಜಶೇಖರ್ ಗುರುವಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕಾಸರಗೋಡಿನಲ್ಲಿ ಕನ್ನಡ, ಮಲಯಾಳಂ ಭಾಷೆಯ ಹಲವು ಪತ್ರಿಕೆಗಳಿಗೆ ಫ್ರೀಲಾನ್ಸ್ ಫೋಟೊಗ್ರಾಫರ್ ಆಗಿ ಸೇವೆ ಸಲ್ಲಿಸಿರುವ ದಿನೇಶ್, ವಿ.ಪಿ ಸಿಂಗ್ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭ ವಾರಾಹಿ ಯೋಜನೆ ಉದ್ಘಾಟನೆಗೆಂದು ಹಲವು ಕಿ.ಮಿ ಸಂಚರಿಸಿ, ಪ್ರಧಾನಿಯು ಯೋಜನೆಯನ್ನು ಉದ್ಘಾಟಿಸುವ ಸಂದರ್ಭ ಸೆರೆಹಿಡಿದ ಚಿತ್ರವನ್ನು ಸ್ಮರಿಸುತ್ತಾರೆ. ಅಂದು ಕೇವಲ ಹವಾಯಿ ಚಪ್ಪಲ್ ಧರಿಸಿ ಕಾರ್ಯಕ್ರಮದ ಛಾಯಾಚಿತ್ರವನ್ನು ಸೆರೆಹಿಡಿಯಲು ತೆರಳಿದ್ದೆ, ತನ್ನ ಉತ್ಸಾಹವನ್ನು ಗಮನಿಸಿದ ಹಿರಿಯ ಫೋಟೊಗ್ರಾಫರ್ ಒಬ್ಬರು ದೊಡ್ಡ ಫಿಲ್ಮಿರೋಲ್ ಅನ್ನು ಗಿಫ್ಟ್ ಆಗಿ ನೀಡಿದ್ದು ಬಹಳ ಖುಷಿ ನೀಡಿತ್ತು. ಹೀಗೆ ಫೋಟೊಗ್ರಫಿ ಮೇಲೆ ಇದ್ದ ಅಪರಿಮಿತ ಪ್ರೀತಿ, ಉತ್ಸುಕತೆ, ಆಸಕ್ತಿ, ಅದರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಹಂಬಲ ತನ್ನನ್ನು ಎತ್ತರಕ್ಕೆ ಬೆಳೆಸಿತು ಎನ್ನುತ್ತಾರೆ ಇವರು.
ಗಾನ ಪ್ರವೀಣ ಕೆ.ಜೆ.ಏಸುದಾಸ್ರವರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸಿದ ಸಂಗೀತ ಕಾರ್ಯಕ್ರಮಕ್ಕೆ ಮುಂಚಿತವಾಗಿ ತೆರಳಿದ್ದೆ, ಯೇಸುದಾಸ್ ತಮ್ಮ ಕೊಠಡಿಯಿಂದ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸುವ ಸಂದರ್ಭ ತೆಗೆದ ಚಿತ್ರವು ಮರುದಿನದ ಮಲಯಾಳಂ ದೈನಿಕದಲ್ಲಿ ಪ್ರಥಮ ಪುಟದ ಚಿತ್ರವಾಗಿ ಮೂಡಿ ಬಂದಿತ್ತು, ಹೀಗೆ ಹತ್ತು ಹಲವು ವಿಶೇಷ ಅನುಭವ ಚಿತ್ರಣಗಳನ್ನು ಬಿಡಿಸಿಡುವ ದಿನೇಶ್ ಅವರಿಗೆ ತಾಯಿ ಗಿರಿಜಾ ಭಾಯಿ ಸ್ಪೂತರ್ಿಯಾಗಿದ್ದಾರೆ. ಬಡತನದ ಬೇಗೆಯ ಮಧ್ಯೆಯು ಅಸಾಧಾರಣ ಬದುಕು ಕಟ್ಟಿಕೊಳ್ಳಲು ಬೇಕಾದ ಮಾರ್ಗದರ್ಶನ, ಪ್ರೋತ್ಸಾಹ, ತಾಳ್ಮೆ ಅವರಿಂದ ಪಡೆದಿದ್ದೇನೆ ಎನ್ನುತ್ತಾರೆ ಇವರು. ಪತ್ನಿ ಭಾರತಿಯವರು ಕೂಡಾ ದಿನೇಶ್ ಅವರ ಫೋಟೊಗ್ರಫಿ ವೃತ್ತಿಯ ಜೊತೆ ಹವ್ಯಾಸಿ ವೈಲ್ಡ್ಲೈಫ್ ಫೋಟೊಗ್ರಾಫರ್ ಆಗಿ ಮುಂದುವರೆಯಲು ಪ್ರೋತ್ಸಾಹ ನೀಡಿದ್ದಾರೆ.ಪ್ರೀತಿಯ ಮಕ್ಕಳಾದ ಅದಿತಿ, ಅಭಯ್ಚಿನ್ಮಯ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು ದಿನೇಶ್ ಅವರ ಫೋಟೊಗ್ರಫಿಯಾನವನ್ನು ಬೆಂಬಲಿಸುತ್ತಾರೆ.
ವೈಲ್ಡ್ ಲೈಫ್ ಫೋಟೊಗ್ರಫಿಯ ಜೊತೆಯಲ್ಲಿ ಜನಸಾಮಾನ್ಯರ ಬದುಕಿನ ಚಿತ್ರಣವನ್ನು ಸೆರೆ ಹಿಡಿಯುವ ಕಾಯಕದಲ್ಲೂ ದಿನೇಶ್ ತೊಡಗಿದ್ದಾರೆ.ದೇಶದ ಆದಿವಾಸಿ, ಬುಡಕಟ್ಟು ಜನರ ಶ್ರಮಜೀವನ, ಪ್ರಕೃತಿಯೊಂದಿಗೆ ಅವರ ಸಹ ಜೀವನದ ಎಳೆಗಳನ್ನು ತಮ್ಮ ಫೋಟೊಗಳಲ್ಲಿ ಸೆರೆಹಿಡಿದಿರುವ ದಿನೇಶ್ ಒರಿಸ್ಸಾ, ಜಾರ್ಖಂಡ್ಗಳ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿದ್ದು, ಗ್ರಾಮೀಣ ಜನಜೀವನದ ವಾಸ್ತವಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ರಾಜಸ್ಥಾನದ ಪುಷ್ಕರ್ ಮೇಳದ ಒಂಟೆ ಸಂತೆ, ವಾರಣಾಸಿಯ ಆಧ್ಯಾತ್ಮಿಕ ಜೀವನದ ಸಾದೃಶ್ಯಗಳನ್ನು ಹೊಸ ಆಯಾಮದ ಮೂಲಕ ಕ್ಯಾಮರಾ ಒಳಗಣ್ಣಿನ ಮೂಲಕ ಸತ್ವಯುತವಾಗಿ ಸೆರೆಹಿಡಿದಿದ್ದಾರೆ.
ಫೋಟೊಗ್ರಾಫರ್ ಉತ್ತಮ ಪ್ರೊಸೆಸರ್(ಸಂಸ್ಕಾರಕ) ಆಗಬೇಕೆನ್ನುವ ಇವರು, ಯುವಛಾಯಾಚಿತ್ರಗಾರರಿಗೆ ಮಾದರಿ. ಯುವ ಸಮೂಹದಲ್ಲಿ ಉತ್ತಮ ಫೋಟೊಗ್ರಾಫರ್ಗಳಿದ್ದಾರೆ.ಕ್ಯಾಮಾರದ ಒಳಗಣ್ಣಿನ ಮೂಲಕ ಚಿತ್ರಗಳಿಗೆ ಹೊಸ ಆಯಾಮ ದೊರಕಿಸಿಕೊಡುವಲ್ಲಿ ಯುವ ಸಮೂಹ ಹಿಂದುಳಿದಿಲ್ಲ ಎನ್ನುವ ಇವರ ಎರಡನೇ ಆಫ್ರಿಕಾ ಪ್ರವಾಸ ಶುಭಕರವಾಗಲಿ ಎಂದು ಹಾರೈಸೋಣ.
ಮನೆಯಲ್ಲಿಕ್ಯಾಮರಾ ಲೆನ್ಸ್ ಗ್ಯಾಲರಿ:
ದಿನೇಶ್ ಅವರ ಕೋಟೆಕಣಿಯಲ್ಲಿರುವ ಮನೆಯಲ್ಲೂ ವಿವಿಧ ಕ್ಯಾಮರಾ ಸಂಗ್ರಹಿಸಿರುವ ವಿಶೇಷ ಗ್ಯಾಲರಿಯಿದೆ. ವೈಡ್ಡ್ಲೈಫ್ ಫೋಟೊಗ್ರಫಿಗೆ ಅತ್ಯವಶ್ಯಕವಾಗಿರುವ ಹಲವು ಕ್ಯಾಮರಾ ಲೆನ್ಸ್ಗಳು, ಟ್ರೈಪಾಡ್ಗಳ ಸಂಗ್ರಹವಿದೆ. ಹಲವು ಲಕ್ಷರೂ. ಬೆಲೆಬಾಳುವ ಕ್ಯಾಮರಾ ಹಾಗೂ ಲೆನ್ಸ್ಗಳು ಹಾಳಾಗದಂತೆ ಕಾಪಾಡಲು ಒಂದೆ ತೆರನಾದ ಉಷ್ಣತೆ ಹೊಂದಿರುವ ಆಧುನಿಕ ವ್ಯವಸ್ಥೆಯು ಇದೆ.
ಇನ್ ಸೈಟ್ ಸ್ಟುಡಿಯೋ ಮೂಲಕ ಹಲವು ಹೊಸ ಛಾಯಾಚಿತ್ರಗಾರರನ್ನು ಬೆಳೆಸುವಲ್ಲಿ ಶ್ರಮ ವಹಿಸಿರುವ ಇವರು ಹಲವು ಮಂದಿಗೆ ಉದ್ಯೋಗ, ಮಾರ್ಗದರ್ಶನವನ್ನು ನೀಡಿದ್ದಾರೆ.
ಏನಂತಾರೆ ದಿನೇಶ್ ಬಗ್ಗೆ:1)
ದಿನೇಶ್ ಓರ್ವ ಶ್ರಮಜೀವಿ, ಫೋಟೊಗ್ರಫಿಯನ್ನೇ ತನ್ನ ಉಸಿರಾಗಿಸಿರುವ ಇವರು, ಊಟ, ನಿದ್ರೆಯಲ್ಲೂ ಛಾಯಾಗ್ರಹಣದ ಬಗ್ಗೆ ಯೋಚನೆ ಮಾಡುತ್ತಾ ಇದ್ದವರು. ಅವರ ಕಠಿಣ ಪರಿಶ್ರಮ, ಅಪರಿಮಿತ ಆಸಕ್ತಿ, ಛಲ, ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದೆ. ಶೆಟ್ಟಿ ಸ್ಟುಡಿಯೋದಲ್ಲಿ ಸಣ್ಣ ಕೆಲಸಕ್ಕೆ ಸೇರಿದ್ದ ಚೂಟಿ ಹುಡುಗನ ಚತುರತೆ ನಂತರ ಪ್ರೆಸ್ ಫೋಟೊಗ್ರಾಫರ್ ಆಗುವ ಅವಕಾಶ ನೀಡಿತು.ಮೊದಮೊದಲು ಫಿಲ್ಮ್ರೋಲ್ ಕ್ಯಾಮರಾ ಉಪಯೋಗದ ಬಗ್ಗೆ ಪ್ರೋತ್ಸಾಹಿಸಿದ್ದೆ, ಉತ್ತರದೇಶ ಸಂಜೆದೈನಿಕ ಆರಂಭದಲ್ಲಿ ಪತ್ರಿಕಾ ಛಾಯಾಗ್ರಹಣದ ಅವಕಾಶ ಸಿಕ್ಕಿದ್ದು ಮಾತ್ರವಲ್ಲದೆ ಕರ್ತವ್ಯ ನಿಷ್ಠೆಯೊಂದಿಗೆ ದಿನೇಶ್ ಬೆಳೆದ, ತಿಳಿದುಕೊಳ್ಳುವ ಆಸಕ್ತಿ, ಅರಿಯುವ ಹಂಬಲ, ಫೋಟೊಗ್ರಫಿಯಲ್ಲಿ ಆತನಿಗಿದ್ದ ತಲ್ಲೀನತೆ ಬಹಳ ಎತ್ತರಕ್ಕೆ ಬೆಳೆಸಿದೆ.ಪ್ರಸ್ತುತ ಜಿಲ್ಲೆ ಮತ್ತು ರಾಜ್ಯದ ನೆಚ್ಚಿನ ವೈಲ್ಡ್ಲೈಫ್ ಫೋಟೊಗ್ರಾಫರ್ ಆಗಿ ಬೆಳೆಯುತ್ತಿರುವ ಇವರು ಛಾಯಾಗ್ರಹಣದಲ್ಲಿ ಬದುಕಿನ ಆನಂದವನ್ನು ಕಂಡಿದ್ದಾರೆ.
ರಾಜಶೇಖರ್, (ದಿನೇಶ್ಇನ್ಸೈಟ್ಅವರ ಮಾರ್ಗದರ್ಶಕ/ಫೋಟೊಗ್ರಫಿಗುರು)
ಮುಖ್ಯಛಾಯಾಗ್ರಾಹಕ
ದೇಶಾಭಿಮಾನಿ ಮಲಯಾಳಂ ದೈನಿಕ, ಕಾಸರಗೋಡು
2)
ದಿನೇಶ್ ನಿಜಕ್ಕೂಉತ್ತಮ ಫೋಟೊಗ್ರಾಫರ್, ಅವರನ್ನೂ ಚಿಕ್ಕಂದಿನಿಂದಲೂ ಬಲ್ಲೆ.ಕ್ಯಾಮರಾಕ್ಕೂ ಒಂದು ಒಳಗಣ್ಣಿದೆ ಎಂಬುದು ಅವರ ಚಿತ್ರಗಳಿಂದ ಸಾಬೀತಾಗುತ್ತದೆ.ಪ್ರತಿಯೊಂದನ್ನು ತಮ್ಮ ಅಂತದೃಷ್ಟಿಯ ಮೂಲಕ ಗುರುತಿಸಿ, ಅದರ ಮಹತ್ವವನ್ನು ಛಾಯಾಚಿತ್ರಗಳ ಮೂಲಕ ಇಮ್ಮಡಿಗೊಳಿಸುವ ಶಕ್ತಿ ದಿನೇಶ್ ಅವರಲ್ಲಿದೆ.
ಬಾರಾ ಭಾಸ್ಕರನ್ (ದಿನೇಶ್ಇನ್ಸೈಟ್ಅವರ ಸ್ನೇಹಿತ)
ಅಂತಾರಾಷ್ಟ್ರೀಯ ಚಿತ್ರ ಕಲಾವಿದ