ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕುಗಳ ರಕ್ಷಣೆಗೆ ಆದ್ಯತೆ : ಸಚಿವ ಇ.ಚಂದ್ರಶೇಖರನ್
ಕಾಸರಗೋಡು: ಹೊಸ ತಲೆಮಾರಿನ ಯುವ ಸಮೂಹಕ್ಕೆ ಪ್ರಜಾಫ್ರಭುತ್ವ, ಹಕ್ಕುಗಳಂತಹ ವ್ಯವಸ್ಥೆಗಳ ಬಗ್ಗೆ ಗಾಢ ಅರಿವಿನ ಕೊರತೆ ಕಂಡುಬರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ, ಮತೇತರತ್ವದ ಮೇಲಿನ ವಿಶ್ವಾಸಗಳನ್ನಿರಿಸಿರುವ ನಮ್ಮ ಸಂವಿಧಾನ ದೇಶದ ಸಮಗ್ರ ಅಭಿವೃದ್ಧಿಯ ಅಡಿಪಾಯವಾಗಿದ್ದು, ಈ ವ್ಯವಸ್ಥೆಯ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆಗೆ ಆದ್ಯತೆ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಹೇಳಿದರು.
ಅವರು ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ಶುಕ್ರವಾರ ಆಯೋಜಿಸಲಾದ ಗಣರಾಜ್ಯೋತ್ಸವ ಜಿಲ್ಲಾ ಮಟ್ಟದ ಪರೇಡ್ನಲ್ಲಿ ತ್ರಿವರ್ಣ ಧ್ವಜಾರೋಹಣಗೈದು ವಂದನೆ ಸ್ವೀಕರಿಸಿ ಮಾತನಾಡಿದರು.
ಪ್ರಜಾಪ್ರಭುತ್ವವು ಪ್ರತಿಯೊಬ್ಬನಿಗೂ ಸ್ವಾತಂತ್ರ್ಯ, ಮೂಲಭೂತ ಹಕ್ಕು, ನ್ಯಾಯವನ್ನು ಕಲ್ಪಿಸುತ್ತದೆ. ದೇಶವನ್ನು ಮತೇತರ ಆಶಯದೊಂದಿಗೆ ಮುನ್ನಡೆಸುವುದು ಗಣರಾಜ್ಯದ ಮುಖ್ಯ ಉದ್ದೇಶವಾಗಿದೆ ಎಂದರು.
ಜನರ ಮಧ್ಯೆ ಕಂದಕ ಸೃಷ್ಟಿಸುವವರು ಪ್ರಜಾಪ್ರಭುತ್ವದ ಮೂಲ ವ್ಯವಸ್ಥೆಗೆ ಆತಂಕಿತರಾಗಿದ್ದಾರೆ. ವಿಜ್ಞಾನ ರಂಗದಲ್ಲೂ, ತಾಂತ್ರಿಕತೆಯಲ್ಲೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗಿದ್ದರೆ ಅದಕ್ಕೆ ಮೂಲ ಕಾರಣ ದೇಶದಲ್ಲಿ ಕಾಯ್ದುಕೊಂಡು ಬಂದ ಪ್ರಭಲ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಕೇರಳ ಸರಕಾರ ಇಚ್ಛಾಶಕ್ತಿಯಿಂದ ದುಡಿದಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿದೆ. ಜನಸಾಮಾನ್ಯರಿಗೆ ಅಭಿವೃದ್ಧಿ ಕ್ಷೇಮ ಯೋಜನೆಗಳ ಪ್ರಯೋಜನ ಲಭಿಸುವಂತೆ ಮಾಡಲು ಸರಕಾರಕ್ಕೆ ಸಾಧ್ಯವಾಯಿತು ಎಂದರು.
ಮಾತೃಭೂಮಿಯ ಸಾರ್ವಭೌಮತೆಯನ್ನು ಕಾಪಾಡುವುದರೊಂದಿಗೆ ಅದನ್ನು ಇನ್ನಷ್ಟು ಬಲಿಷ್ಠಪಡಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಭಾರತದ ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮತೆಯ ಶಕ್ತಿ ಅಥರ್ೈಸಿಕೊಳ್ಳಲು ಭಾರತದೊಂದಿಗೆ ಸ್ವಾತಂತ್ರಗಳಿಸಿದ ದೇಶಗಳ ಕುರಿತು ಅಧ್ಯಯನ ಮಾಡಿದರೆ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಹಿಂಸೆ, ಆಕ್ರಮಣ, ಬುಡಮೇಲು ಕೃತ್ಯ ಹಾಗೂ ಅರಾಜಕತೆ ಇಂದು ಅಂತಹ ರಾಷ್ಟ್ರಗಳನ್ನು ಹೈರಾಣುಗೊಳಿಸಿ ಅಶಾಂತಿಗೆ ಕಾರಣವಾಗಿರುವುದು ಕಂಡುಬರುತ್ತಿದೆ. ಆದರೆ ಭಾರತ ವಿಜ್ಞಾನ-ತಾಂತ್ರಿಕ ರಂಗಗಳಲ್ಲಿ ಪ್ರಗತಿಯಲ್ಲಿದ್ದು, ಇತರ ದೇಶಗಳಿಗೆ ಮಾದರಿಯಾಗಿದೆ. ಆ ಮಾದರಿಯಲ್ಲೇ ರಾಜ್ಯದಲ್ಲೂ ಅನುಸರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಭಾರತದೊಂದಿಗೆ ಸ್ವಾತಂತ್ರ್ಯ ಲಭಿಸಿದ ಇತರ ದೇಶಗಳೊಂದಿಗೆ ತುಲನೆ ಮಾಡಿದಾಗ ನಮ್ಮ ದೇಶದ ಮಹತ್ವ ಮನವರಿಕೆಯಾಗುತ್ತದೆ ಎಂದರು. ಸರ್ವ ರಂಗದಲ್ಲೂ ಕೇರಳ ರಾಜ್ಯ ಸಹಿತ ದೇಶವೇ ಸಮಗ್ರ ಅಭಿವೃದ್ದಿಯತ್ತ ಸಾಗುತ್ತಿದೆ. ಸ್ತ್ರೀಶಕ್ತಿಕರಣ ಮತ್ತು ಆಹಾರ ಸುರಕ್ಷೆಯನ್ನು ಖಾತ್ರಿಪಡಿಸುವಲ್ಲಿ ಕೇರಳ ರಾಜ್ಯ ದೇಶಕ್ಕೆ ಮಾದರಿಯಾಗಿದೆ ಎಂದರು. ಅಭಿವೃದ್ಧಿ ಕಾರ್ಯಗಳನ್ನು ಕೆಳ ಸ್ತರಕ್ಕೆ ತಲುಪಿಸಲು ಸಾಧ್ಯವಾದದ್ದು ರಾಜ್ಯದ ಸಾಧನೆಯಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಜೀವನ್ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಸೈಮನ್, ಜಿಲ್ಲೆಯ ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್, ಕಾಸರಗೋಡು ನಗರಸಭಾ ಅಧ್ಯಕ್ಷೆ ಬಿಫಾತಿಮ್ಮಾ ಇಬ್ರಾಹಿಂ, ಎಡಿಎಂ ದೇವಿದಾಸ್, ಆರ್ಡಿಒ ಸಿ.ಬಿಜು, ಡೆಪ್ಯೂಟಿ ಕಲೆಕ್ಟರ್ಗಳಾದ ಕೆ.ರವಿ ಕುಮಾರ್, ಶಶಿಧರ ಶೆಟ್ಟಿ, ಕೆ.ಜಯಲಕ್ಷ್ಮಿ, ಎ.ಕೆ.ರಾಮಚಂದ್ರನ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬಂದಿಗಳು, ತ್ರಿಸ್ತರ ಪಂಚಾಯತಿಗಳ ಪ್ರತಿನಿಧಿಗಳು, ಡಿವೈಎಸ್ಪಿ, ವಿವಿಧ ಪೊಲೀಸ್ ಅಧಿಕಾರಿಗಳು, ರಾಜಕೀಯ ಪಕ್ಷಗಳ ನೇತಾರರು, ಪ್ರತಿನಿಧಿಗಳು, ಅಧ್ಯಾಪಕರು, ವಿದ್ಯಾಥರ್ಿಗಳು, ಸರಕಾರಿ ನೌಕರರು, ಸಾರ್ವಜನಿಕರು ಭಾಗವಹಿಸಿದರು.
ಪೊಲೀಸರು, ಮಹಿಳಾ ಪೊಲೀಸರು, ಅಬಕಾರಿ, ಸಶಸ್ತ್ರ ಪೊಲೀಸರು, ಸೀನಿಯರ್ ಮತ್ತು ಜ್ಯೂನಿಯರ್ ಎನ್ಸಿಸಿ, ಜ್ಯೂನಿಯರ್ ರೆಡ್ಕ್ರಾಸ್, ಭಾರತೀಯ ಭೂಸೇನಾ ಪಡೆ, ಭಾರತೀಯ ನೌಕಾಪಡೆ ವಿಭಾಗ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ , ಸ್ಟೂಡೆಂಟ್ ಪೊಲೀಸ್ ಕೆಡೆಟ್ ಇತ್ಯಾದಿ ವಲಯಗಳಿಂದ ಪಥ ಸಂಚಲನ ನಡೆಯಿತು. ಪೊಲೀಸರು, ನವೋದಯ ವಿದ್ಯಾಲಯ, ಜೈಮಾತಾ ಸ್ಕೂಲ್ಗಳ ಬ್ಯಾಂಡ್ ಮೇಳಗಳು ಆಕರ್ಷಣೆ ನೀಡಿತು. ಕಾರ್ಯಕ್ರಮದ ಅಂಗವಾಗಿ ಆಕರ್ಷಕ ಕವಾಯತು ಪ್ರದರ್ಶನ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿತು.