HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       ಸರ್ವಪಲ್ಲಿಯವರೇ ನಿಮ್ಮ ನೆನಪಾಗುತ್ತಿದೆ
    ಡಾ.ರತ್ನಾಕರ ಮಲ್ಲಮೂಲೆಯವರ ಪ್ರವಾಸ ಕಥನ-2
     ಮೈಸೂರು ಮಣ್ಣು ಸಾಂಸ್ಕೃತಿಕವಾಗಿ ಎಷ್ಟೊಂದು ಫಲವತ್ತಾದ ನೆಲ ಅಂದ್ರೆ ಅದನ್ನು ಅಕ್ಷರಗಳಲ್ಲಿ ಬಣ್ಣಿಸಲಾಗುವುದೇ?
  ಈ ರಾಜರಸ್ತೆಯ ಇಕ್ಕೆಲಗಳಲ್ಲಿರುವ ಈ ಮಾಹಾವಟವೃಕ್ಷಗಳಿಗೆಲ್ಲ ಎಷ್ಟೊಂದು ಕತೆ ಹೇಳಲಿರಬಹುದು!  ರಾಜ ಮಾಹಾರಾಜ ರಾಣಿ ಯುವರಾಣಿ ಯರಿಂದ ತೊಡಗಿ ದೇಶ ಕಂಡ ವಿಶ್ವ ಕಂಡ ಮಹೋನ್ನತ ವ್ಯಕ್ತಿತ್ವಗಳ ಪಾದ ಧೂಳಿಯ ಕಂಪು ಇಲ್ಲೆಲ್ಲ ಹರಡಿದೆ.
 ಈ ಮರಗಳಿಗೆಲ್ಲ ಅವರ ಪರಿಚಯವಿದೆ .. ಕಾಲದ ಓಘಕ್ಕೆ ಸಿಲುಕಿ ಅದ ಹೋದ ಪರಿವರ್ತನೆಗಳೆಲ್ಲವನ್ನೂ ಮೌನವಾಗಿ ಇವುಗಳು ಕಂಡಿವೆ ....
  ಈಗ ಅವೆಲ್ಲ ತಮ್ಮ ಕದಂಬ ಬಾಹುಗಳನ್ನು ಹರಡಿ ಈಗಿನ ವಾಹನಗಳ ಹೊಗೆಗಳಿಗೆ ಮೂಗು ಬಾಯಿ ಮುಚ್ಚಿಕೊಂಡು  ಗಮ್ಮನೆ ನಿಂತಿವೆ.
  ರಾಜಣ್ಣನವರ ಜತೆ ಈ ಬಗ್ಗೆ ಚಚರ್ಿಸುತ್ತಾ ನಡೆವಾಗ ಪಕ್ಕನೆ ಕಣ್ಣಿಗೆ ಬಿದ್ದ ಫಲಕದಿಂದ ಮನಸ್ಸಿಗೆ ಖುಷಿಯಾಗಿ ಅಲ್ಲೇ ನಿಂತೆ.
"ರಾಜಣ್ಣ, ಒಂದು ನಿಮಿಷ ಬನ್ನಿ. ಆ ಫಲಕದ ಎದುರು ಒಂದು ಪೊಟೊ ತೆಗೆಯೋಣವೇ?" ಅಂತ ಮುಗ್ದ ಮಗು ಥರ ಪ್ರಶ್ನಿಸಿದಾಗ, "ಹೊ ನಾನು ರೆಡಿ" ಅಂತ ಬಂದು ಬಿಟ್ಟರು.
  ಹೌದು. ಅದು ನಾನು ಅತ್ಯಂತ ಇಷ್ಟಪಡುವ ಸರ್ವಪಲ್ಲಿಯವರ ಹೆಸರಿನಿಂದ ಕಂಗೊಳಿಸುತ್ತಿರುವ ಸಂಸ್ಥೆ. ಸಂಜೆಯಾದ ಕಾರಣ ಗೇಟು ಹಾಕಲಾಗಿದೆ. ಒಳ ಹೋಗುವಂತಿಲ್ಲ. ಫಲಕದ ಕೆಳಗೆ ನಿಂತು ಪೊಟೊ ಕ್ಲಿಕ್ ಮಾಡಿ, ಸರ್ವಪಲ್ಲಿಯವರ ಬಗೆಗಿನ ನನ್ನ ನಿಲುವನ್ನೂ ಅವರು ಓಡಾಡಿದ ಈ ಮಣ್ಣಿನಲ್ಲಿ ನಾವಿರುವಾಗ ಆಗುವ ಸುಖವನ್ನೂ ರಾಜಣ್ಣನಲ್ಲಿ ಹೇಳಿಕೊಂಡಾಗ ಆಹಾ ಅವರಿಗೂ ಖುಷಿ ಖುಷಿ...
ಇಪ್ಪತ್ತನೇ ವರ್ಷದಲ್ಲಿ ಭಾರತಿಯ ತತ್ವಶಾಸ್ತ್ರ ವನ್ನು ಅರಗಿಸಿಕೊಂಡು ,ಬೋಧನೆಯ ಮೂಲಕ ,ಪುಸ್ತಕ ರಚನೆಯ ಮೂಲಕ, ದೇಶ ವಿದೇಶಗಳಲ್ಲಿ ಮಾಡಿದ ಭಾಷಣಗಳ ಮೂಲಕ ಭಾರತೀಯ ತತ್ವಶಾಸ್ತ್ರ ದ ಮೇಲ್ಮೆಯನ್ನು ದಾಖಲಿಸುವಲ್ಲಿ, ಹೊಸ ಚಿಂತನಾಕ್ರಮವನ್ನು ಮೂಡಿಸುವಲ್ಲಿ ಈ ಅದ್ವಿತೀಯ ಪ್ರತಿಭೆಯ ಪರಿಶ್ರಮ ಎಂತವರನ್ನೂ ಬೆರಗು ಮೂಡಿಸಬಲ್ಲದು.
  ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿ ಸರ್ವಪಲ್ಲಿಯವರ ಹೆಜ್ಜೆಗುರುತುಗಳು ಚಿರಾಯು. ದೇಶದ ಎತ್ತರವಾದ ಪೀಠ ಅಲಂಕರಿಸಿದ ಈ ಪ್ರಾಧ್ಯಾಪಕ ನ ಸರಳ ಸಜ್ಜನಿಕೆ ಬೆರಗು ಮೂಡಿಸುವಂತದ್ದಾಗಿತ್ತು.
  ಹಿಂದೂ ಧರ್ಮದ ಸಾರ, ವೇದ,ಉಪನಿಷತ್, ಜೈನ ತತ್ವಜ್ಞಾನಗಳ ಕುರಿತು ಶಂಕರಾಚಾರ್ಯ, ರಾಮಾನುಜ, ಮಧ್ವಾಚಾರ್ಯ, ಪ್ಲೇಟೊ, ಬ್ರಾಡ್ಲಿ ಈ ಮುಂತಾದವರ ಕುರಿತು ವಿಶೇಷವಾದ ಒಲವು ಮತ್ತು ಅಧ್ಯಯನ ಕೈಗೊಂಡು ಪತ್ತಿಕೋದ್ಯಮ, ಪುಸ್ತಕೋದ್ಯಮ ಗಳಲ್ಲಿ ಹೆಸರು ಪಡೆದ  ಈ ಮಣ್ಣಿನ  ಅಪೂರ್ವ ಪುಣ್ಯಾತ್ಮರಲ್ಲಿ ಇವರು  ಒಬ್ಬರೆನಿಸಿದರು.
  1918 ರಿಂದ ಇದೇ ಮೈಸೂರಿನ ಈ ಮಣ್ಣಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ತತ್ವಜ್ಞಾನ ಪ್ರಾಧ್ಯಾಪಕರಾಗಿ ಅವರು ಸಲ್ಲಿಸಿದ ಸೇವೆ,ಅವರು ಕಟ್ಟಿದ ವಿದ್ಯಾಥರ್ಿ ಬಳಗ ಅಬ್ಬ.... ಓದಿದ ಕೇಳಿದ ನೆನಪುಗಳೆಲ್ಲ ಹಸುರಾಯಿತು....ಫಲಕ ಕಂಡಾಗ...........
ಸರ್ವಪಲ್ಲಿ ಓಡಾಡಿದ ಮಣ್ಣಲ್ಲೇ ನಾವೂ ನಡೆಯುತ್ತಿದ್ದೇವೆ ಎಂದರಿವಾದಾಗ...........
  ಅಲ್ಲೇ ಪಕ್ಕದಲ್ಲಿದ್ದ ಮರವೊಂದನ್ನು ನೋಡಿ,
ರಾಜಣ್ಣನಲ್ಲಿ ಕೇಳಿದೆ......
  "ರಾಜಣ್ಣ, ಕೆಲವೊಮ್ಮೆ ಈ ಮರಕ್ಕೆ ಮಾತನಾಡಲು ಗೊತ್ತಿದ್ದರೆ, ಭಾವನೆಗಳಿರುತ್ತಿದ್ದರೆ ಎಷ್ಟೊಳ್ಳೆದಿತ್ತು!"
  ರಾಜಣ್ಣ ನಕ್ಕರು.
  ರಾಜನ ಸಾರೊಟು, ರಾಣಿಯ ಪಲ್ಲಕ್ಕಿ , ಸೈನಿಕರ ಧೀರಹೆಜ್ಜೆ,  ಕಾಮರ್ಿಕರ ಬೆವರ ಹನಿ, ಬಿಳಿಯರ ಬೂಟಿನ ಶಬ್ದ, ಬಳಿಕ ಸರ್ವಪಲ್ಲಿಯವರಂತವರ   ಜ್ಞಾನದ  ದಿಕ್ಕುದೆಸೆ, ವಿದ್ಯಾಥರ್ಿಗಳ ಕಲರವಗಳನ್ನೆಲ್ಲ  ಕಣ್ಣಾರೆ ಕಂಡ ಮರ ಮಾತ್ರ ಯಾವ ಭಾವನೆಗಳೂ ಇಲ್ಲದೆ ನಿಲರ್ಿಪ್ತವಾಗಿತ್ತು...
   ಡಾ. ಮಲ್ಲಮೂಲೆ
     28.12.2017

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries