HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಸರಕಾರಿ ಕಛೇರಿಗಳಲ್ಲಿ ರಾಷ್ಟ್ರಧ್ವಜಕ್ಕೆ ಮತ್ತೊಮ್ಮೆ ಅವಮಾನ :
    ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ಕಾಯರ್ಾಚರಿಸುತ್ತಿರುವ ಕೇರಳ ಸರಕಾರದ ಪ್ರಧಾನ ಕಛೇರಿಗಳಿಗೆ ಕನಿಷ್ಠ ರಾಷ್ಟ್ರದ ಸಾರ್ವಭೌಮತೆಯ ಬಗೆಗಿನ ತಿಳುವಳಿಕೆಯ ಕೊರತೆಯಿಂದ ಅವಮಾನಕರ ಪ್ರಸಂಗಗಳು ನಿರಂತರವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಶಂಕೆಗೆಡೆಯಾಗಿದೆ.
   ಭಾರತೀಯರ ತ್ಯಾಗ, ಬಲಿದಾನ ಮತ್ತು ಅಭಿಮಾನದ ಸಂಕೇತವಾದ ರಾಷ್ಟ್ರಧ್ವಜವನ್ನು ಗಣರಾಜ್ಯ ದಿನದಂದು ಕಿಟಕಿಗಳಿಗೆ  ಕೆಳಮುಖವಾಗಿ ಕಟ್ಟಿ ಧ್ವಜಾರೋಹಣ ಮಾಡಿರುವುದು ಸಾರ್ವಜನಿಕರಲ್ಲಿ ಚಚರ್ೆಗೆ ಗ್ರಾಸವಾಗಿದೆ.
    ಈ ಕಛೇರಿಗಳು ಭಾರತದ  ಪರಮ ಪವಿತ್ರ  ರಾಷ್ಟ್ರಧ್ವಜದ  ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಮತ್ತು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದಕ್ಕೆ ಸಾಕ್ಷಿಯಾಗಿ ರಾಷ್ಟ್ರ ಧ್ವಜವನ್ನು  ಕಿಟಕಿಗಳಿಗೆ  ಕೆಳಮುಖವಾಗಿ ಕಟ್ಟಿರುವುದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ.
   ಪ್ರತ್ಯೇಕವಾಗಿ ಕುಂಬಳೆ ಮತ್ಸ್ಯ ಭವನದಲ್ಲಿ ಮತ್ತು ಮೃಗ ಆಸ್ಪತ್ರೆಯಲ್ಲಿ ಕಳೆದ ಸ್ವಾತಂತ್ಯ  ದಿನದಂದು ಇದೆ ರೀತಿ  ಹಾಕಲ್ಪಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡು ವಿವಾದಕ್ಕೀಡಾಗಿತ್ತು.(ವಿಜಯವಾಣಿ ಕಳಕಳಿಯ ವರದಿ ಪ್ರಕಟಿಸಿತ್ತು.)
    ಕಳೆದ  ಸ್ವಾತಂತ್ರ್ಯ ದಿನದಂದು ಸಂಪೂರ್ಣ ಕೆಳಮುಖವಾಗಿ ಧ್ವಜಾರೋಹಣ ಮಾಡಿದ್ದ ಕುಂಬಳೆ ಕೃಷಿ ಭವನದ ಅಧಿಕೃತರು, ಈ ಗಣರಾಜ್ಯ ದಿನದಂದು ಧ್ವಜಾರೋಹಣ ಮಾಡುವ ಗೋಜಿಗೆ ಹೋಗದಿರುವುದು ಹಾಸ್ಯಾಸ್ಪದವಾಗಿದೆ.(ಕಳೆದ ಬಾರಿ ಪತ್ರಿಕೆ ಸ್ಪಷ್ಟೀಕರಣ ಕೇಳಿದ್ದಾಗ ಶೀಘ್ರ ಧ್ವಜ ಸ್ತಂಭ ಸ್ಥಾಪಿಸುವ ಭರವಸೆಯನ್ನು ಕೃಷಿ ಅಧಿಕಾರಿ ತಿಳಿಸಿದ್ದರು.) ಒಂದು ಸರಕಾರೀ ಸಂಸ್ಥೆ ರಾಷ್ಟ್ರೀಯ ದಿನಗಳಾದ ಸ್ವಾತಂತ್ರ್ಯ ಮತ್ತು ಗಣತಂತ್ರ  ದಿನಗಳಂದು ಧ್ವಜಾರೋಹಣ ಮಾಡದೇ ಇರುವುದು ಕೂಡಾ ರಾಷ್ಟ್ರಧ್ವಜದ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries