ಕಲಾ ಚಟುವಟಿಕೆಗಳು ಸಮಾಜ ನಿಮರ್ಾಣದ ಅಡಿಗಲ್ಲು&ಫಾ.ವಿಕ್ಟರ್ ಡಿಸೋಜಾ
ಉಪ್ಪಳ: ಸಂಗೀತಕ್ಕೆ ಮನಸ್ಸನ್ನು ಪ್ರಪುಲ್ಲಗೊಳಿಸಿ ಧನಾತ್ಮಕ ಶಕ್ತಿಯನ್ನು ಉದ್ದೀಪಿಸುವ ಸಾಮಥ್ರ್ಯ ಹೊಂದಿದೆ. ಆಧುನಿಕ ಗೊಂದಲಮಯ ಸಾಮಾಜಿಕ ಅಸ್ಥಿರತೆಯಿಂದ ಪಾರಾಗುವಲ್ಲಿ, ಸಾಮಾಜಿಕ ಶಾಂತತೆ ನಿಮರ್ಾಣಕ್ಕೆ ಕಲೆ, ಸಾಂಸ್ಕೃತಿಕ ಚಟುವಟುಕೆಗಳನ್ನು ವಿಪುಲವಾಗಿ ಹಮ್ಮಿಕೊಳ್ಳುವ ಮೂಲಕ ಸುಸ್ಥಿರ ಸಮಾಜ ನಿಮರ್ಾಣಕ್ಕೆ ಪ್ರಯತ್ನಿಸುತ್ತಿರುವ ರಂಗಚಿನ್ನಾರಿ ಜಿಲ್ಲೆಯ ಹೆಮ್ಮೆಯ ಸಂಘಟನೆ ಎಂದು ಕಯ್ಯಾರು ಕ್ರಿಸ್ತರಾಜ ದೇಗುಲದ ಧರ್ಮಗುರು ಫಾ.ವಿಕ್ಟರ್ ಡಿಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಸಾಂಸ್ಕೃತಿಕ, ಸಾಹಿತ್ತಿಕ ಸಂಘಟನೆಯಾದ ರಂಗಚಿನ್ನಾರಿಯು ಕನರ್ಾಟಕದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಕಾರದೊಂದಿಗೆ ಕಾಸರಗೋಡಿನ ಇಪ್ಪತ್ತು ಕನ್ನಡ ಶಾಲೆಗಳ ಎರಡು ಸಾವಿರ ವಿದ್ಯಾಥರ್ಿಗಳಿಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಕಲಿಸುವ ಕನ್ನಡ ಸ್ವರ ಕಾಯರ್ಾಗಾರವನ್ನು ಶುಕ್ರವಾರ ಕಯ್ಯಾರು ಡಾನ್ಬಾಸ್ಕೋ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಟಿಸಿ ಅವರು ಮಾತನಾಡಿದರು.
ಗಡಿನಾಡು ಕಾಸರಗೋಡಿನಲ್ಲಿ ಕ್ಷೀಣಿಸುವ ಭೀತಿ ಎದುರಿಸುತ್ತಿರುವ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ರಂಗಚಿನ್ನಾರಿಯು ಹಮ್ಮಿಕೊಂಡಿರುವ ವಿನೂತನನ ಪ್ರಯತ್ನ ಸ್ತುತ್ಯರ್ಹವಾಗಿದ್ದು, ಕನ್ನಡ ನಾಡು ನುಡಿಯ ಅರಿವು ಮೂಡಿಸುವಲ್ಲಿ ಕನ್ನಡ ಸ್ವರ ಪರಿಣಾಮಕಾರಿ ಎಂದು ಅವರು ತಿಳಿಸಿದರು. ಸಾಹಿತ್ಯ, ಗೀತ=ಗಾಯನಗಳು ಭಾಷೆಯ ಮೇಲಿನ ಪ್ರಬುದ್ದತೆ, ಭಾಷಾ ಪ್ರೇಮಕ್ಕೆ ಪ್ರೇರಣೆಯೊದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಲಾ ಮುಖ್ಯೋಪಾದ್ಯಾಯ ಲೂಯೀಸ್ ಮೊಂತೇರೋ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಟಿ.ಚಿದಾನಂದ ಮಯ್ಯ ಹಾಗೂ ಮಾತೃಸಂಘದ ಅಧ್ಯಕ್ಷೆ ಆಶಾದೇವಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ರಂಗಚಿನ್ನಾರಿಯ ನಿದರ್ೇಶಕ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಳಿಕ ಗಾಯಕ ಕಿಶೋರ್ ಪೆರ್ಲ ವಿದ್ಯಾಥರ್ಿಗಳಿಗೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ತಾಯೆಬಾರ ಮೊಗವ ತೋರ, ಕುವೆಂಪು ರವರ ಜೈ ಭಾರತ ಜನನಿಯ ತನುಜಾನೆ ಹಾಗೂ ಇತರ ಭಾಗಗೀತೆಗಳ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಿದರು.
ಫೆ ತಿಂಗಳಲ್ಲಿ ಕನ್ನಡ ಸ್ವರ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಂಜೇಶ್ವರದಲ್ಲಿ ಬೃಹತ್ ಮಟ್ಟದಲ್ಲಿ ನಡೆಯಲಿದ್ದು, ಅಂದು 2 ಸಾವಿರ ವಿದ್ಯಾಥರ್ಿಗಳನ್ನು ಪಾಲ್ಗೊಳಿಸಿ ನಾಡಗೀತೆಗಳ ಕಾರ್ಯಕ್ರಮ ಏರ್ಪಡಿಸಲಾಗುವುದೆಂದು ರಂಗ ಚಿನ್ನಾರಿಯ ನಿದರ್ೇಶಕ, ರಂಗನಟ ಕಾಸರಗೋಡು ಚಿನ್ನಾ ಪತ್ರಿಕೆಗೆ ತಿಳಿಸಿದ್ದಾರೆ.