HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಅಧ್ಯಾಪಕ ಪರಿಷತ್ತು ಸಮ್ಮೇಳನ
   ಬದಿಯಡ್ಕ : ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉತ್ತಮ ವಿದ್ಯಾಥರ್ಿಗಳನ್ನು ರೂಪಿಸುವಲ್ಲಿ ದೇಶಪ್ರೇಮಿ ಅಧ್ಯಾಪಕ ಸಂಘಟನೆಯಾದ ಎನ್.ಟಿ.ಯು. ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡ ಭಾಷೆಯು ನಮ್ಮ ಸಂಸ್ಕೃತಿಯ ಅವಿಭಾಜ್ಯವಾಗಿದೆ ಎಂದು ಯುವಮೋಛರ್ಾ ರಾಜ್ಯ ಸಮಿತಿ ಸದಸ್ಯ ಪಿ.ಆರ್. ಸುನಿಲ್ ಅಭಿಪ್ರಾಯಪಟ್ಟರು.
ಅವರು ಶನಿವಾರ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶನಿವಾರ ನಡೆದ ದೇಶೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು.)ನ ಕುಂಬಳೆ ಉಪಜಿಲ್ಲಾ ಸಮ್ಮೇಳನವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
  ಕೇರಳ ರಾಜ್ಯದಲ್ಲಿ ಕನ್ನಡ ಭಾಷೆ, ಕನ್ನಡ ಅಧ್ಯಾಪಕರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಅದಕ್ಕಾಗಿ ಹೋರಾಡುವಲ್ಲಿ ಎನ್.ಟಿ.ಯು. ಸಂಘಟನೆ ಮುಂಚೂಣಿಯಲ್ಲಿದೆ. ಖಜಾನೆಯಲ್ಲಿ ಹಣ ಬರಿದಾಗಿದೆ ಎಂದು ಸರಕಾರ ಹೇಳುತ್ತಿದೆ ಇತ್ತ `ಅನ್ಲಿಮಿಟೆಡ್ ಕಾಲ್' ಯುಗದಲ್ಲಿ ರಾಜ್ಯದ ಮಂತ್ರಿಗಳ ದೂರವಾಣಿ ಬಿಲ್ ಅರ್ಧಲಕ್ಷಕ್ಕಿಂತಲೂ ಹೆಚ್ಚಿದೆ, ಇದು ನಮ್ಮ ದೌಭರ್ಾಗ್ಯಕರವಾಗಿದೆ. ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರ ಹಣವನ್ನು ಸರಕಾರ ಲೂಟಿಗೈಯುತ್ತಿದೆ ಎಂದರು.
ಎನ್.ಟಿ.ಯು.ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಗೋವಿಂದ ರಾಜ್ ಕೆ. ಬೆಳಗ್ಗೆ ಧ್ವಜಾರೋಹಣಗೈದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಮಲಯಾಳ ಭಾಷೆಯನ್ನು ಖಡ್ಡಾಯಗೊಳಿಸಿರುವುದರ ವಿರುದ್ಧ ಎನ್.ಟಿ.ಯು.ಹೋರಾಡಿದೆ. ಕನ್ನಡ ಭಾಷೆಯ ಅವಗಣನೆ ಸರಿಯಲ್ಲ. ನಿರ್ಬಂಧ ಮಲಯಾಳ ಹೇರಿಕೆಯ ವಿರುದ್ಧ ನಿರಂತರ ಹೋರಾಡುವುದಾಗಿ ಅವರು ಘೋಷಿಸಿದರು. ಅಧ್ಯಾಪಕರು ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಭವ್ಯಭಾರತದ ಪ್ರಜೆಗಳನ್ನು ರೂಪಿಸಬೇಕು ಎಂದರು.
ಕಾಸರಗೋಡು ಬ್ಲಾಕ್ ಪಂಚಾಯತು ಸದಸ್ಯ ಅವಿನಾಶ್ ವಿ.ರೈ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಶಂಕರ್ ಸಾರಡ್ಕ, ಶ್ಯಾಮ ಭಟ್ ಕೆ, ಸಂಘಟನಾ ಸಮಿತಿ ಸಂಚಾಲಕ ಎಂ. ನಾರಾಯಣ ಭಟ್ ಮಾತನಾಡಿದರು. ಹಿರಿಯ ಸದಸ್ಯರುಗಳಾದ ಅಶೋಕ್ ಬಾಡೂರು, ಸೀತಾರಾಮ ರಾವ್ ಪಿಲಿಕೂಡ್ಲು, ನವೀನಚಂದ್ರ ಎಂ.ಎಸ್. ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.  ಎನ್.ಟಿ.ಯು.ಕುಂಬಳೆ ಉಪಜಿಲ್ಲಾ ಕಾರ್ಯದಶರ್ಿ ರಂಜಿತ್ ಎಂ. ಸ್ವಾಗತಿಸಿ, ಉಪಾಧ್ಯಕ್ಷೆ ಕವಿತಾ ಎಸ್. ಧನ್ಯವಾದವನ್ನಿತ್ತರು. ನಾರಾಯಣ ಆಸ್ರ, ಪ್ರಸಾದ್ ಮಾಸ್ತರ್ ನಿರೂಪಣೆಗೈದರು. ಸಭಾಕಾರ್ಯಕ್ರಮದ ನಂತರ ಸಂಘಟನಾ ಚಚರ್ೆ ಹಾಗೂ ಅಪರಾಹ್ನ ನೂತನ ಸಮಿತಿಯನ್ನು ರಚಿಸಲಾಯಿತು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries