HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕುಂಬಳೆ ಸಹಕಾರಿ ಬ್ಯಾಂಕ್ ನಲ್ಲಿ ವಿಶ್ವನಾಥ ಆಳ್ವರ ಭಾವಚಿತ್ರ ಪುನಃ ಸ್ಥಾಪನೆ
   ಕುಂಬಳೆ: ಸಹಕಾರಿ ರಂಗದಲ್ಲಿ ದಾಖಲೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಸಾಮಾಜಿಕ ಅಭಿವೃದ್ದಿಯಲ್ಲಿ ಅಹನರ್ಿಶಿ ದುಡಿದವರ ಸ್ಮರಣೆ ಹೊಸ ತಲೆಮಾರಿಗೆ ಆದರ್ಶವಾಗಿದ್ದು, ಅಂತಹ ಸಾಧಕರ  ನಿತ್ಯ ನೆನಪುಗಳು ಬೆಳವಣಿಗೆಗೆ ಪೂರಕವಾಗಿರುತ್ತದೆ ಎಂದು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಕುಂಬಳೆ ಸೇವಾ ಸಹಕಾರಿ ಬ್ಯಾಂಕಿನಲಲಿ 55 ವರ್ಷಗಳ ಕಾಲ ಅಧ್ಯಕ್ಷರಾಗಿ ದುಡಿದ, ಸಾಮಾಜಿಕ, ಸಾಂಸ್ಕೃತಿಕ ನೇತಾರ ದಿ. ಬಂಬ್ರಾಣ ಯಜಮಾನ ವಿಶ್ವನಾಥ ಆಳ್ವರ ಚಿರಸ್ಮರಣೆಗಾಗಿ ಬ್ಯಾಂಕಿನ ರಜತ ಸಂಭ್ರಮ ಕಟ್ಟಡದ ಸಭಾಂಗಣದಲ್ಲಿ ಅವರ ಹೆಸರಿನ ನಾಮ ಫಲಕದ ಪುನಃಸ್ಥಾಪನಾ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
  ಯಜಮಾನ ವಿಶ್ವನಾಥ ಆಳ್ವರು ಸಾಮಾಜಿಕ&ಸಹಕಾರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅತ್ಯಂತ ಸ್ಮರಣೆಯ ಸಾಧಕ ಸೇವೆಯಾಗಿದ್ದು, ಅವರ ನಾಮ ಫಲಕವನ್ನು ಸ್ವಾರ್ಥ ಲಾಲಸೆಗೊಳಗಾಗಿ ತೆರೆದಿರಿಸಿ ಅವಮಾನಿಸಿದ ಪ್ರಸಂಗ ಭವಿಷ್ಯತ್ತಿನಲ್ಲಿ ಸಂಭವಿಸಬಾರದು ಎಂದು ಸಲಹೆ ನೀಡಿದರು.
   ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕ್ಯಾಂಪ್ಕೋ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿ, ರಾಜಕೀಯ ಸ್ವಾರ್ಥಗಳ ಹೇಯ ಮನೋಸ್ಥಿತಿಯನ್ನು ಸಾಧಕರ ಮೇಲೆ ಪ್ರಯೋಗಿಸುವುದು ಸಂಸ್ಕೃತಿಯ ವಿಕೃತತನದ ಸಂಕೇತವಾಗಿದ್ದು, ಅಧಃಪತನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
   ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಗಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಕಾರಣಗಳಿಂದ ಹಿನ್ನಡೆಗೆ ಸರಿಯುವ ಭೀತಿಯಲ್ಲಿದ್ದ ಬ್ಯಾಂಕನ್ನು ಮತ್ತೆ ಹಿರಿಯ ಸಾಧಕರ ಸ್ಮರಣೆಯೊಂದಿಗೆ ಯಶಸ್ವಿಯಾಗಿ ಮುನ್ನಡೆಸಲು ಆಡಳಿತ ಸಮಿತಿ ಉತ್ಸುಕವಾಗಿ ಕಾರ್ಯಯೋಜನೆ ಕೈಗೆತ್ತಿಕೊಳ್ಳುತ್ತಿದೆ ಎಂದರು.
  ಉಪ್ಪಳ ಭೂಅಭಿವೃದ್ದಿ ಬ್ಯಾಂಕ್ ನಿದರ್ೇಶಕ ಮಂಜುನಾಥ ಆಳ್ವ ಮಡ್ವ, ಉದ್ಯಮಿ ಬಿ.ತಿಮ್ಮಪ್ಪ ಆಳ್ವ, ಬ್ಯಾಂಕ್ ಆಡಳಿತ ಸಮಿತಿ ಸದಸ್ಯ ಡಾ.ದಾಮೋದರ ಎ, ಕುಂಬಳೆ ಗ್ರಾ.ಪಂ.ಸದಸ್ಯ ರಮೇಶ್ ಭಟ್,ಲಕ್ಷ್ಮಣ ಪ್ರಭು ಕುಂಬಳೆ, ಕುಂಬಳೆ ಎಗ್ರಿಕಲ್ಚರಿಸ್ಟ್ ವೆಲ್ಪೇರ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣ ಚೆಟ್ಟಿಯಾರ್, ಸಿಪಿಐಎಂ ಏರಿಯಾ ಕಾರ್ಯದಶರ್ಿ ಸುಬೈರ್, ಸಿಪಿಐ ಮಂಡಲ ಸದಸ್ಯ ಜಯಪ್ರಕಾಶ್, ಕಾಂಗ್ರೆಸ್ಸ್ ಮಂಡಲ ಅಧ್ಯಕ್ಷ ಸ್ವಾಮಿಕುಟ್ಟಿ ಕೆ, ಬಿಜೆಪಿ ಮಂಡಲ ಪ್ರಧಾನ ಕಾರ್ಯದಶರ್ಿ ಮುರಳೀಧರ ಯಾದವ್ ನಾಯ್ಕಾಪು,ಯೂಸುಫ್ ಉಳುವಾರ್, ಜೆಡಿಯು ಜಿಲ್ಲಾಧ್ಯಕ್ಷ ಅಹಮ್ಮದಾಲಿ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪ್ರಾಂತ್ಯ ಸದಸ್ಯ ಕೆ.ಸಿ.ಮೋಹನ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಕುಂಬಳೆ ಘಟಕಾಧ್ಯಕ್ಷ ವಿಕ್ರಂ ಪೈ ಉಪಸ್ಥಿತರಿದ್ದು ಮಾತನಾಡಿ ಶುಬಹಾರೈಸಿದರು.
   ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ಸದಸ್ಯ ಸುಖೇಶ್ ಭಂಡಾರಿ ಸ್ವಾಗತಿಸಿ, ಕಾರ್ಯದಶರ್ಿ ಸುರೇಖಾ ಕೆ. ವಂದಿಸಿದರು.
 
               

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries