HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಪೇರಾಲು ಶಾಲೆಯಲ್ಲಿ ಮಾಸ್ಟರ್ ಪ್ಲಾನ್ ಬಿಡುಗಡೆ
   ಕುಂಬಳೆ: ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞದಲ್ಲಿ ಗರಿಷ್ಟ ಪ್ರಮಾಣದಲ್ಲಿ ಭಾಗವಹಿಸಿದ ಕೆಲವು ಶಾಲೆಗಳಲ್ಲಿ ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯೂ ಒಂದು ಎಂದು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ ಎಲ್ ನುಡಿದರು.
   ಸರ್ವಶಿಕ್ಷಾ ಅಭಿಯಾನ ಮತ್ತು ಶಿಕ್ಷಣ ಇಲಾಖೆಯ ನಿದರ್ೇಶನದ ಮೇರೆಗೆ ವಿವಿಧ ಹಂತಗಳಲ್ಲಿ ತರಬೇತಿ ಮತ್ತು ಚಚರ್ೆಗಳ ಆಧಾರದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಸದಸ್ಯರು , ಹಳೆ ವಿದ್ಯಾಥರ್ಿಗಳು ಹಾಗೂ ಊರಪರವೂರ ಶಿಕ್ಷಣ ತಜ್ಞರು ಒಟ್ಟು ಸೇರಿ ಪೇರಾಲು ಸರಕಾರಿ ಶಾಲೆಗೆ ತಯಾರಿಸಲಾದ ಶಾಲಾ ದೀಘರ್ಾವಧಿ ಮತ್ತು ಹ್ರಸ್ವಾವಧಿ ಶೈಕ್ಷಣಿಕ ಮಾಸ್ಟರ್ ಪ್ಲಾನನ್ನು ಬಿಡುಗಡೆಗೊಳಿಸುತ್ತಾ ಅವರು ಮಾತನಾಡಿದರು.
  ಶಾಲೆಯಲ್ಲಿರುವ ಸೌಕರ್ಯಗಳು, ಕೊರತೆಗಳು ಹಾಗೂ ದೊರೆಯಲು ಸಾಧ್ಯವಿರುವ ಅವಕಾಶಗಳ ಸರಿಯಾದ ಮಥನ ನಡೆದು ಅದರ ಆಧಾರದಲ್ಲಿ ತಯಾರಿಸಬೇಕೆಂಬ ಆದೇಶವನ್ನು ಪಾಲಿಸುವುದರ ಜೊತೆಗೆ  ಕ್ಲಪ್ತ ಸಮಯಕ್ಕೆ ಯೋಜನೆಯನ್ನು ಆಳವಾದ ಚಿಂತನೆ ಮತ್ತು ಸಂವಾದಗಳ ಮೂಲಕ ತಯಾರಿಸುವಲ್ಲಿ ಊರವರು ವಹಿಸಿದ ಶ್ರಮವನ್ನು ಅವರು ಶ್ಲಾಘಿಸಿದರು.
   ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪೇರಾಲು ಅಧ್ಯಕ್ಷತೆ ವಹಿಸಿದರು. ಮಾಜಿ ರಕ್ಷಕ ಶಿಕ್ಷಕ ಸಂಘದ ಮಾಜೀ ಅಧ್ಯಕ್ಷ ಪಿಎಸ್ ಮೊಹಮ್ಮದ್ ಹಾಜಿ ಶುಭಹಾರೈಸಿದರು. ಅಧ್ಯಾಪಕ ಸಜಯನ್ ಮಾಸ್ಟರ್ ರಕ್ಷಕರಿಗೆ ಶಾಲಾ ಚಟುವಟಿಕೆಗಳಲ್ಲಿ ಭಾಗಿಗಳಾಗಲು ಇರುವ ಅವಕಾಶವನ್ನೂ ಯೋಜನೆಯಲ್ಲಿ ಗುರುತಿಸಲಾದ ಊರವರ ಪಾತ್ರವನ್ನೂ ವಿವರಿಸಿದರು. ಮುಖ್ಯೋಪಾಧ್ಯಾಯ ಗುರುಮೂತರ್ಿ ಸ್ವಾಗತಿಸಿ, ಅಧ್ಯಾಪಕ ರಹಿಮಾನ್ ಮಾಸ್ಟರ್ ವಂದಿಸಿದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries