HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಪುದುಕೋಳಿಯಲ್ಲಿ ಬೆಂಕಿ
     ಬದಿಯಡ್ಕ : ನೀಚರ್ಾಲು ಪರಿಸರದ ಪುದುಕೋಳಿಯಡ್ಕದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು ಸಮೀಪ ಪ್ರದೇಶವನ್ನು ಆಹುತಿ ಪಡೆದುಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಬೇಸಿಗೆಯ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ವಿಶಾಲವಾದ ಬಯಲು ಪ್ರದೇಶವನ್ನೊಳಗೊಂಡ ಪರಿಸರದಲ್ಲಿ ಬೆಂಕಿಯು ಬೇಗನೆ ವ್ಯಾಪಿಸಿಕೊಂಡು ಮಲ್ಲಡ್ಕ, ಎರ್ಟಕ್ಕಾಯರು, ಪುದುಕೋಳಿ, ತಲ್ಪಣಾಜೆ, ಕನ್ನೆಪ್ಪಾಡಿಯಿಂದ ಪೆರಡಾಲ ರಸ್ತೆಯ ಸಮೀಪದ ತನಕ ಸುಮಾರು 100 ಎಕ್ರೆಗಿಂತಲೂ ಅಧಿಕ ಸ್ಥಳಗಳನ್ನು ಆಕ್ರಮಿಸಿದ ಬೆಂಕಿಯನ್ನು ನಂದಿಸಲು ಕಾಸರಗೋಡು ಅಗ್ನಿಶಾಮಕ ದಳವು ಆಗಮಿಸಿದರೂ ಬೇಗನೆ ಅಗ್ನಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಊರವರೂ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಅಗ್ನಿಶಾಮಕ ದಳಕ್ಕೆ ಊರವರು ದೂರವಾಣಿ ಮಾಡಿದರೂ ಸುಮಾರು 20 ಕಿಲೋಮೀಟರ್ಗಳಷ್ಟು ದೂರದ ಕಾಸರಗೋಡಿನಿಂದ ಆಗಮಿಸುವ ಸಂದರ್ಭದಲ್ಲಿ ಮುಳಿ ಹುಲ್ಲು ವ್ಯಾಪಕವಾಗಿದ್ದ ಪ್ರದೇಶದಲ್ಲಿ ಬೇಗನೆ ಹರಡಿಕೊಂಡಿತು.
   ಜನವಸತಿ ರಹಿತ ಪ್ರದೇಶವಾಗಿರುವ ಇಲ್ಲಿ ಮುಳಿಹುಲ್ಲು ಹುಲುಸಾಗಿ ಬೆಳೆಯುತ್ತಿದ್ದು, ಇದು ಬೆಂಕಿ ಬಲು ಬೇಗನೆ ವ್ಯಾಪಿಸಲು ಕಾರಣವಾಗುತ್ತದೆ. ಜನವಸತಿ ಇಲ್ಲದಿರುವುದರಿಂದ ಉದ್ಯೋಗ ರಹಿತ ಯುವಕರ ದಂಡು ಇಲ್ಲಿ ಬೀಡು ಬಿಟ್ಟು ಗಾಂಜಾ, ಮದ್ಯ ಸಹಿತ ಘಾತುಕ ವ್ಯಸನಗಳಿಗಾಗಿ ಇಲ್ಲಿ ಬಿಡುಬಿಡುತ್ತಿರುವುದು ವ್ಯಾಪಕಗೊಂಡಿದೆ. ಇವರೇ ಇಲ್ಲಿ ಬೆಂಕಿ ಹಬ್ಬಿಸಲು ಕಾರಣವಾಗಿರಬೇಕೆಂದು ಶಂಕಿಸಲಾಗಿದೆ.
   ದಿನ ನಿತ್ಯ ಅಗ್ನಿ ಅನಾಹುತಗಳು ಬದಿಯಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದರೂ, ನೀಚರ್ಾಲಿನಲ್ಲಿ ಅಗ್ನಿಶಾಮಕ ದಳದ ಶಾಖೆಯನ್ನು ತೆರೆಯಬೇಕೆಂಬ ಜನರ ಕೂಗು ಅಧಿಕಾರಿ ವರ್ಗಕ್ಕೆ ಕೇಳುವುದಿಲ್ಲವೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries