ಗಂಭೀರ ಸಮಸ್ಯೆ ಇಲ್ಲ, ಆದರೆ ಸೇನಾ ಪಡೆ ಸನ್ನದ್ಧವಾಗಿದೆ: ಡೋಕ್ಲಾಮ್ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್
ನವದೆಹಲಿ: ಡೋಕ್ಲಾಮ್ ಬಗ್ಗೆ ಮಾತನಾಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಡೊಕ್ಲಾಮ್ ವಿವಾದದ ನಂತರದಲ್ಲಿ ಯಾವುದೇ ಗಂಭೀರ ಸಮಸ್ಯೆ ಉದ್ಭವಿಸಿಲ್ಲ ಎಂದು ಹೇಳಿದ್ದಾರೆ.
ಚೀನಾ-ಭಾರತ ನಿರಂತರ ಮಾತುಕತೆ ನಡೆಸಿದ್ದು, ವಿವಾದ ಉಂಟಾಗುವುದಕ್ಕೂ ಮುನ್ನ ಇದ್ದ ಶಾಂತಿಯುತ ವಾತಾವರಣ ಈಗ ಪುನಃ ನಿಮರ್ಾಣವಾಗಿದೆ. ಆದರೆ ಸೇನೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಇದೇ ವೇಳೆ ಉತ್ತರ ಡೊಕ್ಲಾಮ್ ನಲ್ಲಿ ವಿವಾದ ಉಂಟಾದಾಗ ಇದ್ದ ಚೀನಾ ಸೈನಿಕರ ಸಂಖ್ಯೆಗಿಂತ ಈಗಿರುವ ಸಂಖ್ಯೆ ಕಡಿಮೆ ಆಗಿದೆ ಎಂದು ರಾವತ್ ಹೇಳಿದ್ದು, ಚೀನಾದವರು ತಾತ್ಕಾಲಿಕವಾದಂತಹ ಮೂಲಸೌಕರ್ಯ ಅಭಿವೃದ್ಧಿ ಮಾಡಿಕೊಂಡಿದ್ದು ಮತ್ತೊಮ್ಮೆ ಬರಬಹುದು ಎಂದು ಊಹೆ ಮಾಡಬಹುದು, ಅಥವಾ ಚಳಿಗಾಲದಲ್ಲಿ ಅವರ ಉಪಕರಣಗಳನ್ನು ತೆಗೆದುಕೊಂಡು ಹೋಗಲಾರದೇ ಆ ವ್ಯವಸ್ಥೆ ಮಾಡಿರಬೇಕು ಎಂದು ರಾವತ್ ಹೇಳಿದ್ದಾರೆ.