HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬಿ.ಜೆ.ಪಿ ಜನಪ್ರತಿನಿಧಿಗಳ ಜಿಲ್ಲಾಟ್ರೆಶರಿ ಮಾಚರ್್
    ಕಾಸರಗೋಡು: ರಾಜ್ಯ ಸರಕಾರವು ಹಣಕಾಸು ಇಲಾಖೆ ಮೇಲಿನ ನಿಯಂತ್ರಣವನ್ನು ಕೂಡಲೇ ಹಿಂತೆಗೆಯಬೇಕು, ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಸಿಬ್ಬಂದಿಗಳನ್ನು ನೇಮಿಸಬೇಕು, ಆ ಮೂಲಕ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭತರ್ಿಗೊಳಿಸಬೇಕು ಎಂದು ಬಿ.ಜೆ.ಪಿ ಜನಪ್ರತಿನಿಧಿಗಳು ವಿದ್ಯಾನಗರದಜಿಲ್ಲಾಧಿಕಾರಿ ಸಮುಚ್ಚಯದಜಿಲ್ಲಾಟ್ರಶರಿ ಇಲಾಖೆಗೆ ಮಾಚರ್್ ನಡೆಸಿದರು.
   ಬಳಿಕ ಮಾತನಾಡಿದ ಎಣ್ಮಕಜೆ ಗ್ರಾ.ಪಂ ಅಧ್ಯಕ್ಷೆ ರೂಪವಾಣಿ ಭಟ್, ರಾಜ್ಯ ಸರಕಾರವು ಹಣಕಾಸು ಇಲಾಖೆಯ ಮೇಲೆ ತನ್ನ ನಿಯಂತ್ರಣವನ್ನು ಹೇರಿದೆ. ತ್ರಿಸ್ಥರ ಪಂಚಾಯತುಗಳಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟ ಹಣ ಸಕಾಲಕ್ಕೆ ತಲುಪದೆ ವಿವಿಧ ಯೋಜನೆಗಳು ಕುಂಟುತ್ತಾ ಸಾಗಿದೆ ಎಂದರು. ಗ್ರಾಮ ಸ್ವರಾಜ್ಯಕನಸನ್ನು ಸಾಕಾರಗೊಳಿಸಲು ಹಾಗೂ ಹಲವು ಯೋಜನೆಗಳನ್ನು ಮುನ್ನಡೆಸಲು ಹಣಕಾಸಿನ ಅಡಚಣೆಯುಂಟಾಗಿದೆಎಂದರು.ಸರಕಾರಿ ಕಚೇರಿಗಳಲ್ಲಿ ಸೂಕ್ತ ಸಿಬ್ಬಂದಿಗಳನ್ನು ನೇಮಿಸದ ಕಾರಣ ನಾಗರಿಕರು ಪರಿತಪಿಸುವಂತಾಗಿದೆ ಎಂದರು.ನೋಟು ಅಮಾನ್ಯೀಕರಣದ ವೇಳೆ ಬೊಬ್ಬೆರಿದು ಮೊಸಳೆ ಕಣ್ಣೀರು ಸುರಿಸಿದ್ದ ಪ್ರತಿಪಕ್ಷಗಳು ರಾಜ್ಯ ಎಡರಂಗ ಸರಕಾರದ ಟ್ರೆಶರಿ ನಿಯಂತ್ರಣದ ಬಗ್ಗೆ ಚಕಾರವೆತ್ತಿಲ್ಲ ಎಂದರು.
   ಮಾಚರ್್ ಉದ್ಘಾಟಿಸಿ ಮಾತನಾಡಿದ ಬಿ.ಜೆ.ಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಗ್ರಾಮ ಪಂಚಾಯತ್ ಕಾರ್ಯವೈಖರಿಯನ್ನು ಸ್ತಬ್ದವಾಗಿಸುವ ಟ್ರಶರಿ ನಿಯಂತ್ರಣದಂತಹ ಕ್ರಮ ಸಲ್ಲ, ಕೃಷಿ ಸಬ್ಸಿಡಿಯೋಜನೆ ಸಹಿತ ಪಂಚಾಯಿತಿರಾಜ್ ಕಾರ್ಯದಕ್ಷತೆಯನ್ನು ಉಲ್ಲಂಘಿಸಿರುವ ಪಿಣರಾಯಿ ಸರಕಾರ ಬ್ಲೇಡ್ ಸರಕಾರವಾಗಿದ್ದು, ಹಲವು ಯೋಜನೆಗಳ ಹಣವನ್ನು ಬಿಡುಗಡೆಗೊಳಿಸದೆ ದುವರ್ಿನಿಯೋಗಿಸುತ್ತಿದೆ ಎಂದು ಆರೋಪಿಸಿದರು. ಜಿಲ್ಲೆಯ ಹಲವು ಗ್ರಾ.ಪಂ ಯೋಜನೆಗಳು ಹಣದ ಕೊರತೆಯಿಂದ ಸ್ತಬ್ಧವಾಗಿದೆ ಎಂದರು. ರಾಜ್ಯದ ಮಂತ್ರಿವರ್ಯರು ಐಶಾರಾಮಿ ಹೊಟೆಲುಗಳಲ್ಲಿ ತಂಗಲು, ಆಹಾರ ಸೇವಿಸಲು, ಹೆಲಿಕಾಪ್ಟರ್ ಸಂಚಾರ ಸಹಿತ ಕನ್ನಡಕ ಕೊಳ್ಳಲು ಸರಕಾರಿ ಹಣವನ್ನು ಬಳಸುತ್ತಿದ್ದಾರೆ ಎಂದು ಅಪಾದಿಸಿದರು. ಈ ಹಿಂದೆ ರಾಜ್ಯವನ್ನಾಳುತ್ತಿದ್ದ ಐಕ್ಯರಂಗ ಸರಕಾರ ಜಿಲ್ಲಾ ಅಭಿವೃದ್ಧಿಯೋಜನೆಗೆ ಮೀಸಲಿಟ್ಟ 100 ಕೋಟಿರೂ.ಗಳನ್ನು ತಡೆಹಿಡಿದಿತ್ತು, ಪ್ರಸ್ತುತ ಎಡರಂಗ ಸರಕಾರ ಅಂತಹುದೆ ಕ್ರಮವನ್ನು ಅನುಸರಿಸುತ್ತಿದೆ ಎಂದರು.ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ರಕ್ಷಣೆಗೆ ಪ್ರಭಾಕರನ್ ಆಯೋಗದ ಶಿಫಾರಸಿನಂತೆ ಶಿಕ್ಷಣ ಮತ್ತುಉದ್ಯೋಗದಲ್ಲಿ ಮೀಸಲಾತಿ ನೀಡಬೇಕು, ಸರಕಾರಿ ಕಚೇರಿಗಳಲ್ಲಿ ಕನ್ನಡ ಸಿಬ್ಬಂದಿಗಳನ್ನು ನೇಮಿಸಬೇಕು ಎಂದರು.ಮಾಚರ್್ನಲ್ಲಿ ಬಿ.ಜೆ.ಪಿ ರಾಜ್ಯ ಸಮಿತಿ ಸದಸ್ಯರವೀಶತಂತ್ರಿಕುಂಟಾರು, ಮಂಜೇಶ್ವರ ಮಂಡಲುಅಧ್ಯಕ್ಷ ಸತೀಶ್ಚಂದ್ರ ಭಂಡಾರಿ,ಜಿ.ಪಂ ಸದಸ್ಯೆ ಪುಷ್ಪಾ ಅಮೆಕ್ಕಳ, ಬೆಳ್ಳೂರು ಗ್ರಾ.ಪಂ ಅಧ್ಯಕ್ಷೆ ಸ್ವಪ್ನಾ ಸೇರಿದಂತೆ ವಿವಿಧಗ್ರಾ.ಪಂ ಸದಸ್ಯರು ಭಾಗವಹಿಸಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries