HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಜನರಲ್ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಕಲ್ಪಿಸಲು ಆಗ್ರಹ
   ಕಾಸರಗೋಡು: ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ವಿದ್ಯಾಭ್ಯಾಸ, ವ್ಯಾಪಾರ ಸಹಿತ ಕೃಷಿ ವಲಯಗಳ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿ ದಿಸೆಯಲ್ಲಿ ಸಮಗ್ರ ಬದಲಾವಣೆಯನ್ನು ತರಬೇಕೆಂದು ಸಿಪಿಎಂ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹಿಸಿದೆ.
   ಕಾಸರಗೋಡು ಜನರಲ್ಆಸ್ಪತ್ರೆಯಲ್ಲಿ ಬಾಕಿಯಿರುವ ವಿಭಾಗದಲ್ಲಿ ಸೂಕ್ತ ಸಿಬ್ಬಂದಿಗಳನ್ನು ನೇಮಿಸಿ ಆರೋಗ್ಯ ಸೇವೆಯನ್ನು ವಿಸ್ತರಿಸಬೇಕಿದೆ, ತಾಲೂಕು ಆಸ್ಪತ್ರೆ ಜನರಲ್ ಆಸ್ಪತ್ರೆಯಾಗಿ ಮೇಲ್ದಜರ್ೆಗೇರಿ ವರ್ಷಗಳು ಸಂದಿವೆ, ಡಯಾಲಿಸಿಸ್ ಸಹಿತ ತಜ್ಞ ವೈದ್ಯರನ್ನು ನೇಮಿಸಿ ಪ್ರಸ್ತುತ ಆಸ್ಪತ್ರೆಯನ್ನು 400 ಹಾಸಿಗೆಯುಳ್ಳ ಸುವ್ಯವಸ್ಥಿತ ಆಸ್ಪತ್ರೆಯಾಗಿ ಬದಲಾಯಿಸಬೇಕಿದೆ ಎಂದು ಅಭಿಪ್ರಾಯ ಪಡಲಾಯಿತು. ಹಿಂದುಳಿದ ವಿಭಾಗಗಳ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕಿದೆ. ಜಿಲ್ಲೆಯಲ್ಲಿ 1262 ಪರಿಶಿಷ್ಟ ವರ್ಗದ ಸಮುದಾಯಗಳಿದ್ದು, 21,283 ಕುಟುಂಬಗಳಿವೆ. ಒಟ್ಟಾರೆ 83,865 ಮಂದಿ ಪ.ವರ್ಗಜನರಿದ್ದಾರೆ. ವಯನಾಡು ಜಿಲ್ಲೆಗಿಂತ ಶೇ.56 ಪ್ರತಿಶತ ಹೆಚ್ಚಿರುವ ಬುಡಕಟ್ಟು ಹಾಗೂ ಹಿಂದುಳಿದ ವರ್ಗದ ಸಮುದಾಯ ಅಭಿವೃದ್ಧಿಯ ಅಗತ್ಯವಿದೆ. 15 ಬುಡಕಟ್ಟು ವಿಭಾಗದ ಮೇಲಸ್ತುವಾರಿ ಕಚೇರಿ, 2 ಕ್ಷೇಮಾಭಿವೃದ್ಧಿ ಕಚೇರಿ, ಒಂದು ಯೋಜನಾ ಕಚೇರಿ ಇದೆ. ಜಿಲ್ಲೆಯ ಪರಪ್ಪ ಪ್ರದೇಶದಲ್ಲಿ ಟ್ರೈಬಲ್ ಆಫೀಸು ಬೇಕಿದೆ. ತ್ರಿಸ್ಥರ ಪಂಚಾಯತ್ಗಳಲ್ಲಿ ಬುಡಕಟ್ಟು ಜನಾಂಗದಅಭಿವೃದ್ಧಿಗಾಗಿ ಟಿ.ಎಸ್.ಪಿ. ಅನುದಾನ ಬೇಕಿದೆ. ಬುಡಕಟ್ಟು ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕಾಗಿ ಪ್ರಿ ಮೆಟ್ರಿಕ್ ಶಿಕ್ಷಣ ಸಂಸ್ಥೆಗಳು, ಜನಸಂಖ್ಯೆಗನುಗುಣವಾಗಿ ವನನಿಮರ್ಾಣ ಯೋಜನೆಗಳಿಗೆ ಸೂಕ್ತ ಅನುದಾನವನ್ನು ಸರಕಾರ ನೀಡಬೇಕಿದೆ ಎಂದು ಸಮ್ಮೇಳನದಲ್ಲಿ ಅಭಿಪ್ರಾಯಪಡಲಾಯಿತು. ಬೆಲ್-ಇ.ಎಂ.ಎಲ್ ಕಂಪೆನಿಯನ್ನು ಸರಕಾರವು ಕೈವಶಪಡಿಸಬೇಕು. ಜಿಲ್ಲೆಯ ವ್ಯಾಪಾರ ಹಾಗೂ ಹೂಡಿಕೆಗೆ ಸೂಕ್ತ ವಾತಾವರಣ ಸೃಷ್ಟಿಸಬೇಕೆಂದು ಸಮ್ಮೇಳನದಲ್ಲಿ ನಿಶ್ಚಯಿಸಲಾಯಿತು. ಈ ಹಿಂದೆ ಎಡರಂಗ ಸರಕಾರವು ಮೊಗ್ರಾಲ್ ಪುತ್ತೂರು ಸಮೀಪದ  ಬೆದ್ರಡ್ಕದಲ್ಲಿ ಕೆಲ್ ಕೈಗಾರಿಕಾ ಘಟಕ ಆರಂಭಿಸಿ ಹಂತ ಹಂತವಾಗಿ ಅಭಿವೃದ್ಧಿ ಹಲವು ಮಂದಿಗೆ ಉದ್ಯೋಗಾವಕಾಶ ನೀಡಿತ್ತು. ಇದೇ ರೀತಿಯಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಭೆಯಲ್ಲಿ ನಿಶ್ಚಯಿಸಲಾಯಿತು. ಬೀಡಿ ಉದ್ಯಮದ ಮೇಲಿನ ಜಿ.ಎಸ್.ಟಿ. ಹೇರಿಕೆಯನ್ನು ಹಿಂತೆಗೆಯಬೇಕು, ಜಿಲ್ಲೆಯಲ್ಲಿ ಹೊಸ ಉದ್ಯಮಗಳನ್ನು ಆರಂಭಿಸಬೇಕು, ಕೆಎಸ್ಆರ್ಟಿಸಿ ಸೇವೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗ್ರಾಮ ಭಾಗಗಳಿಗೂ ಸಂಚಾರವನ್ನು ವಿಸ್ತರಿಸಬೇಕೆಂದು  ನಿಶ್ಚಯಿುಸಲಾಯಿತು. ಸಮ್ಮೇಳನದಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries