ಜ.16-20 : ಕಾಟುಕುಕ್ಕೆಯಲ್ಲಿ ಶ್ರೀನಿವಾಸ ಮಹಾಮಂಗಲೋತ್ಸವ
ಕಾಸರಗೋಡು: ಕಾಟುಕುಕ್ಕೆಯ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿಯ ದಶಮಾನೋತ್ಸವ ಪ್ರಯುಕ್ತ ಭಜಕರ ಸಹಕಾರದೊಂದಿಗೆ ಶ್ರೀನಿವಾಸ ಮಹಾಮಂಗಲೋತ್ಸವ ಮತ್ತು ರಾಮಕೃಷ್ಣ ಕಾಟುಕುಕ್ಕೆ ಅವರ ದಾಸ ಸಂಕೀರ್ತನ ಯಾನದ 500 ನೇ ಸಂಭ್ರಮದ ಲೋಕಾರ್ಪಣೆ ಕಾರ್ಯಕ್ರಮ ಜ.16 ರಿಂದ 20 ರ ವರೆಗೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕನ್ನಡ ಜಾಗೃತಿ ಸಮಿತಿ ಕಾಯರ್ಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಮಿತ್ತೂರು ಪುರುಷೋತ್ತಮ ಭಟ್ ಅವರು ತಿಳಿಸಿದರು.
ಜ.16 ರಂದು ಪುರಂದರದಾಸ ಮಂಟಪದಲ್ಲಿ ಶ್ರೀ ಪುರಂದರ ದಾಸರ ಪುಣ್ಯ ದಿನಾಚರಣೆ ನಡೆಯಲಿದೆ. ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಮಯ್ಯ ಅವರು ದೀಪ ಪ್ರಜ್ವಲನೆಗೊಳಿಸುವರು. ಆಹ್ವಾನಿತ ಭಜನಾ ಮಂಡಳಿಗಳಿಂದ ಸೂಯರ್ೋದಯದಿಂದ ಸೂಯರ್ಾಸ್ತದವರೆಗೆ ಏಕಾಹ ಭಜನೆ ನಡೆಯಲಿದೆ. ಸಂಜೆ 5.30 ಕ್ಕೆ ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿಯವರು ಸಮಾರೋಪ ಆಶೀರ್ವಚನ ನೀಡುವರು. ರಾತ್ರಿ 9.30 ರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಲಿದೆ. 17 ರಂದು ಬೆಳಗ್ಗೆ 7 ರಿಂದ ಆಯ್ದ ಭಜನಾ ತಂಡಗಳಿಂದ ಭಜನೆ, ರಾತ್ರಿ 6 ರಿಂದ ಯಕ್ಷಸಂಕೀರ್ತನೆ, ರಾತ್ರಿ 8 ರಿಂದ ರಾಮ ಭಟ್ ನೀಚರ್ಾಲು ಅವರಿಂದ ಧಾಮರ್ಿಕ ಪ್ರವಚನ, 18 ರಂದು ಬೆಳಗ್ಗೆ 9.30 ರಿಂದ ಶತರುದ್ರಾಭಿಷೇಕ, 11 ರಿಂದ ಕುಂಕುಮಾರ್ಚನೆ, ಅಪರಾಹ್ನ 3 ರಿಂದ ಯಕ್ಷಗಾನ ತಾಳಮದ್ದಳೆ, 19 ರಂದು ರಾತ್ರಿ 6 ರಿಂದ ಹರಿ ಕೀರ್ತನೆ ನಡೆಯುವುದು.
ಜ.20 ರಂದು ಬೆಳಗ್ಗೆ 7 ರಿಂದ ಪುರಂದರದಾಸ ಮಂಟಪ ಮುಂಭಾಗದಲ್ಲಿ ಭಜನಾ ಸಂಕೀರ್ತನೆ, ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮೀ ಶೋಭಾನೆ ಪಾರಾಯಣ ನಡೆಯಲಿದೆ. 10 ರಿಂದ ದಾಸ ಸಂಕೀರ್ತನ 500 ರ ಸಂಭ್ರ್ರಮ, 11 ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು, ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ದೀಪೋಜ್ವಲನೆ ಮಾಡಲಿದ್ದಾರೆ. ಬ್ರಹ್ಮಶ್ರೀ ಪೂಜ್ಯ ನೀಲೇಶ್ವರ ಉಚ್ಚಲತ್ತಾಯ ಪದ್ಮನಾಭ ತಂತ್ರಿ, ಬ್ರಹ್ಮಶ್ರೀ ಪೂಜ್ಯ ರವೀಶ ತಂತ್ರಿ ಕುಂಟಾರು, ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಮಯ್ಯ ದಿವ್ಯ ಉಪಸ್ಥಿತರಿರುವರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶಕುಂತಳಾ ಶೆಟ್ಟಿ, ಶಾಸಕ ಕೆ.ಕುಂಞಿರಾಮನ್, ಆಡಳಿತ ಮೊಕ್ತೇಸರ ವಿಷ್ಣುಪ್ರಕಾಶ್ ಪಿಲಿಂಗಲ್ಲು, ಬದಿಯಡ್ಕ ಗ್ರಾ.ಪಂ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಶಂಕರ ರೈ ಮಾಸ್ತರ್, ಮಿತ್ತೂರು ಪುರುಷೋತ್ತಮ ಭಟ್, ಮಲ್ಲಿಕಾ ಜೆ.ರೈ, ಅಶೋಕ್ ಕುಮಾರ್ ರೈ, ಜಗನ್ನಿವಾಸ ರಾವ್, ನಿತ್ಯಾನಂದ ಮುಂಡೋಡಿ, ಜಗನ್ನಾಥ ಗೌಡ ಅಡ್ಕಾಡಿ, ಸುಧಾಕರ ಕುಮಾರ್, ಚಿತ್ತರಂಜನ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಭಾಗವಹಿಸುವರು.
ಮಧ್ಯಾಹ್ನ 12.30 ರಿಂದ ವಿಶೇಷ ಭಜನಾ ಪ್ರಾತ್ಯಕ್ಷಿಕೆ, ಸಂಜೆ 4 ರಿಂದ ವಿದ್ವಾನ್ ಆನಂದ ತೀಥರ್ಾಚಾರ್ ಪಗಡಾಲ್ ಅವರಿಗೆ ಗುರುವಂದನೆ ಮತ್ತು ಅವರಿಂದ ಆಶೀರ್ವಚನ, ಸಂಜೆ 6 ರಿಂದ ಲೋಕಕಲ್ಯಾಣಕ್ಕಾಗಿ ಶ್ರೀನಿವಾಸ ಮಹಾಮಂಗಲೋತ್ಸವ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ಸಚ್ಚಿದಾನಂದ ಖಂಡೇರಿ, ದೇವಸ್ಥಾನದ ಆಡಳಿತ ಮೊಕ್ತೇಸರ ವಿಷ್ಣುಪ್ರಕಾಶ್ ಪಿಲಿಂಗಲ್ಲು, ಪ್ರಧಾನ ಸಂಚಾಲಕ ರಾಮಕೃಷ್ಣ ಕಾಟುಕುಕ್ಕೆ, ಗೌರವ ಸಲಹೆಗಾರರಾದ ರಾಮಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಸತ್ಯನಾರಾಯಣ ಕಾಸರಗೋಡು ವಂದಿಸಿದರು.