ಕಹಿ ಸತ್ಯ - ಎಚ್ಚರಿಕೆ - ನಮ್ಮ ಜವಾಬ್ದಾರಿ.
ದಯವಿಟ್ಟು ಮುಕ್ತ ಮನಸ್ಸಿನಿಂದ ಗಮನಿಸಿ...............
ನಿರೀಕ್ಷೆಯಂತೆ ಘಟನೆಗಳು ನಡೆಯುತ್ತಿವೆ. ಭಾರತೀಯ ಮನಸ್ಸುಗಳು ಸ್ಪಷ್ಟವಾಗಿ ಬೇರೆ ಬೇರೆ ಗುಂಪುಗಳಾಗಿ ಒಡೆಯುತ್ತಿವೆ. ಮೊದಲು ಕೇವಲ ಅಂತರಂಗದಲ್ಲಿ ಹುದುಗಿದ್ದ ದ್ವೇಷ ಅಸೂಯೆಗಳು ಈಗ ಬಹಿರಂಗವಾಗಿ ಹೊರ ಬರುತ್ತಿದೆ.
" ಭಿನ್ನತೆಯಲ್ಲೂ ಐಕ್ಯತೆ "
ಇದರಲ್ಲಿ ಐಕ್ಯತೆ ಮಾಯವಾಗಿ ಭಿನ್ನತೆಯೇ ಸರ್ವವ್ಯಾಪಿಯಾಗಿದೆ.
ಇದರಲ್ಲಿ ಯಾವ ಒಗಟೂ ಇಲ್ಲ. ಎಲ್ಲಾ ನೇರ ನೇರ......
ಈ ಕ್ಷಣದಲ್ಲಿ ನಾಲ್ಕು ಮುಖ್ಯ ಪಂಥಗಳು ಈ ದೇಶದಲ್ಲಿ ಬಹಳ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿವೆ.
ಒಂದು,
ಬಲಪಂಥೀಯ.
ಎರಡು,
ಅಂಬೇಡ್ಕರ್ ಪ್ರೇರಿತ ದಲಿತ ಚಳವಳಿ.
ಮೂರು,
ಕಮ್ಯುನಿಸ್ಟ್ ವಿಚಾರಗಳ ಪ್ರೇರಿತ ಎಡಪಂಥೀಯ.
ನಾಲ್ಕು,
ಇಸ್ಲಾಂ ಪ್ರೇರಿತ ಮುಸ್ಲಿಂ ಧಾಮರ್ಿಕ ಚಟುವಟಿಕೆಗಳು.
ಇಂತಹ ಮನೋಭಾವಳ ಪ್ರಭಾವದಿಂದಾಗಿ ಇದು ಹೀಗೆ ಮುಂದುವರಿದರೆ ಭಾರತ ಮತ್ತೊಂದು ವಿಭಜನೆಯತ್ತ ಸಾಗುವುದು ನಿಶ್ಚಿತ....
ಇತಿಹಾಸದ ಅನುಭವದಿಂದ ಹೇಳುವುದಾದರೆ ಯಾವುದೇ ದೊಡ್ಡ ಘಟನೆಗಳು - ಕ್ರಾಂತಿಗಳು ತಕ್ಷಣದ ಪ್ರೇರಣೆಯಿಂದ ಆಗುವುದಿಲ್ಲ. ಅತೃಪ್ತಿ ಅಸಹನೆಗಳು ಪರೋಕ್ಷವಾಗಿ ಜನ ಮಾನಸದಲ್ಲಿ ನಿಧಾನವಾಗಿ ಬೇರೂರಿ ಆಳಕ್ಕೆ ಇಳಿಯುತ್ತಿರುತ್ತದೆ. ಯಾವುದೋ ಒಂದು ಸಂಧರ್ಭದಲ್ಲಿ ತತ್ಕ್ಷಣದ ಒಂದು ಕಾರಣದಿಂದಾಗಿ ಅದು ಸ್ಪೋಟಗೊಳ್ಳುತ್ತದೆ. ಆ ಲಕ್ಷಣಗಳು ಈಗ ಗೋಚರಿಸುತ್ತಿದೆ....
ಸ್ವಾತಂತ್ರ್ಯ ನಂತರ ಪಾಕಿಸ್ತಾನ ಭಾರತದ ವಿರುದ್ಧ ಯುದ್ಧ ಸಾರಿದಾಗ ಭಾರತೀಯ ಹಿಂದುಗಳಿಗೆ ಪಾಕಿಸ್ತಾನದ ವಿರುದ್ಧ ಮತ್ತು ಪರೋಕ್ಷವಾಗಿ ಇಲ್ಲಿನ ಮುಸ್ಲಿಮರ ವಿರುದ್ಧ ಅಸಹನೆ ಪ್ರಾರಂಭವಾಯಿತು.
ಬಾಬರಿ ಮಸೀದಿ ಧ್ವಂಸವಾದಾಗ ಇಲ್ಲಿನ ಮುಸ್ಲಿಮರಿಗೆ ಅಭದ್ರತೆ ಕಾಡಿತು ಮತ್ತು ಹಿಂದುಗಳ ಬಗ್ಗೆ ದ್ವೇಷ ಮೊಳಕೆಯೊಡೆಯಿತು.
ಕಂಬಾಲಪಲ್ಲಿ - ಕರಮಚೇಡು - ಬದನವಾಳು - ಮತ್ತು ಇತ್ತೀಚಿನ ಊನಾ ಘಟನೆಗಳು ದಲಿತರಲ್ಲಿ ಆಕ್ರೋಶ ಉಂಟಾಗಿ ಹಿಂದೂ ಧರ್ಮದ ಮೇಲ್ವರ್ಗದವರ ಮೇಲೆ ದ್ವೇಷ ಶುರುವಾಗಿದೆ.
ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಮರಿಗೆ ಆಡಳಿತ ಪಕ್ಷಗಳು ಓಟಿಗಾಗಿ ಅನವಶ್ಯಕ ಪ್ರಾಮುಖ್ಯತೆ ನೀಡಿ ಅವರಿಗೆ ಮೇಲ್ನೋಟದ ಅನೇಕ ಧಾಮರ್ಿಕ ಸ್ವಾತಂತ್ರ್ಯ ನೀಡಿರುವುದು ಹಿಂದುಗಳಲ್ಲಿ ಅವರ ಬಗ್ಗೆ ಆಕ್ರೋಶ ಬುಗಿಲೇಳುತ್ತಿದೆ.
ಈ ಕ್ಷಣದಲ್ಲಿ.....
ತ್ರಿವಳಿ ತಲ್ಲಾಖ್ - ಉಡುಪಿಯ ಹಿಂದೂ ಧರ್ಮ ಸಂಸದ್ - ಮಂಗಳೂರು ಮತ್ತು ಕಣ್ಣೂರಿನ ಕೊಲೆಗಳು ಮತ್ತು ಇದೀಗ ಭುಗಿಲೆದ್ದಿರುವ ಕೊರೆಗಾಂವ್ ಹಿಂಸಾಚಾರ ಭಾರತ ದೇಶ ಅರಬ್ ಮತ್ತು ಪಶರ್ಿಯನ್ ದೇಶಗಳಂತೆ ಅರಾಜಕತೆಯತ್ತ ಎಲ್ಲಿ ಸಾಗುವುದೋ ಎಂಬ ಭಯ ಮೂಡಿಸುತ್ತಿದೆ.
ಇದರಲ್ಲಿ ಯಾರದು ಸರಿ ಯಾರದು ತಪ್ಪು ಎಂದು ವಿಮಶರ್ಿಸುವುದಕ್ಕಿಂತ ಮುಖ್ಯವಾಗಿ ಭಾರತದ ರಕ್ಷಣೆ - ಐಕ್ಯತೆ - ಜನರ ಜೀವನಮಟ್ಟ ಸುಧಾರಣೆ - ಕಾನೂನು ಸುವ್ಯವಸ್ಥೆ ಮತ್ತು ಜನರಲ್ಲಿ ಶಾಂತಿ ಸಮಾನತೆ ತರುವ ನಿಟ್ಟಿನಲ್ಲಿ ನಾವೆಲ್ಲ ಶೀಘ್ರ ಕಾಯರ್ೋನ್ಮಖರಾಗಬೇಕಿದೆ.
ನೀವು ರೈತರೋ ಕಾಮರ್ಿಕರೋ ಗೃಹಿಣಿಯೋ ಕಲಾವಿದರೋ ವೃತ್ತಿಪರರೋ ಯಾರೇ ಆಗಿರಿ ಈ ಕ್ಷಣದಿಂದ ಈ ದೇಶದ ಹಾಗುಹೊಗುಗಳ ಮೇಲೆ ಗಮನವಿಟ್ಟಿರಿ. ಈ ಪಾಪಿ ರಾಜಕಾರಣಿಗಳು ನಕಲಿ ಹೋರಾಟಗಾರರು - ನಕಲಿ ಧರ್ಮ ರಕ್ಷಕರು - ನಕಲಿ ಬುದ್ದಿ ಜೀವಿಗಳು - ಧಮರ್ಾಂಧರು - ಮತಿಹೀನ ಮಾಧ್ಯಮದವರು - ತಲೆ ಕೆಟ್ಟ ಖಠಛಿಚಿಟ ಟಜಜಚಿ ಪುಂಡರು ಇವರುಗಳು ಬಗ್ಗೆ ಈಗಿನಿಂದಲೇ ಎಚ್ಚರಿಕೆ ವಹಿಸುವ ಮುಖಾಂತರ ದೇಶಕ್ಕೆ ನಮ್ಮ ಅಳಿಲು ಸೇವೆ ಸಲ್ಲಿಸೋಣ. ಈಜಿಪ್ಟ್ ಸಿರಿಯಾ ಇರಾಕ್ ಪಾಕಿಸ್ತಾನ ಆಫ್ಘನಿಸ್ತಾನ ಮುಂತಾದ ದೇಶಗಳ ರಕ್ತಪಾತ ನಮಗೆ ಎಚ್ಚೆತ್ತುಕೊಳ್ಳಲು ಬಹುದೊಡ್ಡ ಪಾಠ. ಈಗಾಗಲೇ ಮಂಗಳೂರು ಕಣ್ಣೂರು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಕೆಲಭಾಗಗಳು ನಮ್ಮ ಕೈ ಮೀರುತ್ತಿವೆ. ಭಾರತ ಮಾತೆಗೆ ಬೀಳುತ್ತಿರು ಕೆಟ್ಟ ಕನಸು ಕನಸಾಗೇ ಇರಲಿ.
ಅದು ನಿಜವಾಗದಿರಲಿ ಎಂದು ಆಶಿಸುತ್ತಾ......
ಎಲ್ಲಾ ರೀತಿಯ ದುಷ್ಟ ಶಕ್ತಿಗಳ ಧಮನಕ್ಕೆ ಸಾಮಾನ್ಯರಾದ ನಾವು ಶೀಘ್ರದಲ್ಲೇ ಕೈ ಮತ್ತು ಮನಸ್ಸು ಜೋಡಿಸೋಣ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.