ಪಾಲಕರ ಉತ್ತಮ ಮೌಲ್ಯಯುತ ಸಂಸ್ಕಾರ ಮಕ್ಕಳಿಗೆ ಪ್ರೇರಣೆ-ಕೊಣಾಜೆ ಶಂಕರ ಭಟ್
ಬದಿಯಡ್ಕ: ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಮನೆಯಲ್ಲಿ ಉತ್ತಮ ರೀತಿಯ ನಡವಳಿಕೆಯೊಂದಿಗೆ ಪಾಲಕರಾದ ನಾವು ಮಕ್ಕಳೊಂದಿಗೆ ವ್ಯವಹರಿಸಬೇಕು. ಹಾಗಿದ್ದಾಗ ಅವರಿಗೆ ಸಂಸ್ಕಾರದ ಮೌಲ್ಯಗಳು ಜೀವನದಲ್ಲಿ ಕರಗತವಾಗುತ್ತದೆ ಎಂದು ಹಿರಿಯರಾದ ಕೊಣಾಜೆ ಶಂಕರ ಭಟ್ ಹೇಳಿದರು.
ಅವರು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ನಡೆದ `ವಸಂತೋತ್ಸವ' ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕೈಲಾಸ ಮೂತರ್ಿ ಮಾತನಾಡುತ್ತಾ, ಇಲ್ಲಿಯ ಶಾಲೆಯ ವಾತಾವರಣವು ಕಲಿಕೆಗೆ ಪೂರಕವಾಗಿದೆ. ಅಂಕಗಳಿಕೆಯೊಂದಕ್ಕೇ ಸೀಮಿತಗೊಳ್ಳದೆ ಮಗುವಿನ ಸವರ್ಾಂಗೀಣ ಬೆಳವಣಿಗೆಗೂ ಪೂರಕವಾಗುವಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅಧ್ಯಾಪಕ ವೃಂದದ ಶ್ರಮ ಶ್ಲಾಘನೀಯ. ಇಂತಹ ಶಾಲೆಯಲ್ಲಿ ನಿಮ್ಮ ಮಕ್ಕಳು ಕಲಿಯುತ್ತಿರುವುದಕ್ಕೆ ನೀವು ಹೆಮ್ಮೆಪಡಬೇಕು ಎಂದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಶುಭಹಾರೈಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾಥರ್ಿಗಳನ್ನು ವೇದಿಕೆಯಲ್ಲಿ ಗುರುತಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಎ ಪ್ಲಸ್ ಪಡೆದ ವಿದ್ಯಾಥರ್ಿಗಳಿಗೆ ದಿ. ಕೃಷ್ಣ ಪೈ ಸ್ಮರಣಾರ್ಥ ಗಣೇಶ್ ಪೈ ಕುಟುಂಬದವರು ನಗದು ಪುರಸ್ಕಾರವನ್ನು ನೀಡಿದರು. ನಿವೃತ್ತ ಅಧ್ಯಾಪಕ ಕುಳಮರ್ವ ಶ್ಯಾಮ ಭಟ್ ಅತ್ಯಧಿಕ ಅಂಕ ಗಳಿಸಿದ ವಿದ್ಯಾಥರ್ಿಗೆ ನಗದು ಪುರಸ್ಕಾರವನ್ನು ನೀಡಿದರು.
2016-17 ಶೈಕ್ಷಣಿಕ ವರ್ಷದ ಅತ್ಯುತ್ತಮ ವಿದ್ಯಾಥರ್ಿಗೆ ದಿ.ಬೇರ್ಕಡವು ಸೀತಾರಾಮ ಭಟ್ ಸ್ಮರಣಾರ್ಥ ಮೊಮ್ಮಗ ಶಿವರಂಜನ್ ಕೊಡಮಾಡುವ `ಸ್ವಣರ್ಾಂಕುರ'ವನ್ನು ಕು. ಆಶ್ವಿಜ ಪಿ.ಎಸ್. ಪಡೆದುಕೊಂಡಳು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಚಾಲಕ ಜಯಪ್ರಕಾಶ ಪಜಿಲ, ಗೋಕರ್ಣ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು, ನಿವೃತ್ತ ಅಧ್ಯಾಪಕ ವಿ.ಮ.ಭಟ್ ಅಡ್ಯನಡ್ಕ, ಡಾ. ಬೇ.ಸೀ.ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾಥರ್ಿ ನಾಯಕ ಅಕ್ಷರ ಕೆ.ಎಸ್. ಸ್ವಾಗತಿಸಿ, ರಕ್ಷಕ ಶಿಕ್ಷಕ ಸಂಘದ ಖಜಾಂಜಿ ರಾಜಗೋಪಾಲ ಚುಳ್ಳಿಕ್ಕಾನ ಧನ್ಯವಾದವನ್ನಿತ್ತರು. ಸತತ 8 ಘಂಟೆಗಳ ಕಾಲ ಶಾಲಾ ಹೊರಾಂಗಣದ ವೇದಿಕೆಯಲ್ಲಿ ವೈವಿಧ್ಯಮಯವಾಗಿ ಎಲ್ಲಾ ವಿದ್ಯಾಥರ್ಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಭಾಸದರ ಮೆಚ್ಚುಗೆಗೆ ಪಾತ್ರರಾದರು.
ವಿಶೇಷತೆಗಳು :
* ಭರತನಾಟ್ಯ, ಜಾನಪದ, ಯೋಗ, ಲೇಝಿಮ್, ನಾಟಕ, ಯಕ್ಷಗಾನ.....
* ಪ್ರತಿಯೋರ್ವ ವಿದ್ಯಾಥರ್ಿಯೂ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದರು.
* ಹಿನ್ನೆಲೆ ಗಾಯನ, ನಿರೂಪಣೆ, ರಂಗಸಜ್ಜಿಕೆಯಲ್ಲಿ ವಿದ್ಯಾಥರ್ಿಗಳೇ ನೇತೃತ್ವ ವಹಿಸಿದ್ದರು.
* ಯಾವುದೇ ಧ್ವನಿಸುರುಳಿಯನ್ನು ಉಪಯೋಗಿಸದಿರುವುದು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.
* ಮಧ್ಯಾಹ್ನ, ಸಾಯಂಕಾಲ, ರಾತ್ರಿ ಊಟೋಪಚಾರದ ವ್ಯವಸ್ಥೆಯನ್ನು ಪಾಲಕರೇ ನಿರ್ವಹಿಸಿದರು.