HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಆಯ್ತು..ಮುಗಿದೋಯ್ತು.... ಅಪಾಯಕಾರಿ ಓಜೋನ್ ರಂಧ್ರ ಕ್ಷೀಣ: ನಾಸಾ ಅಧ್ಯಯನದಿಂದ ಬೆಳಕಿಗೆ
    ವಾಷಿಂಗಟ್ಟನ್: ವಾಯುಮಂಡಲದಲ್ಲಿ ಕ್ಲೋರಿನ್ ಮಟ್ಟ ವೇಗವಾಗಿ ಕಡಿಮೆಯಾಗುತ್ತಿದ್ದು, ಓಜೋನ್ ಪದರದ? ರಂಧ್ರ ಕ್ಷೀಣಿಸಿದೆ ಎಂದು ನ್ಯಾಷನಲ್ ಏರೋನಾಟಿಕ್ಸ್ ಆ?ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಖಚಿತಪಡಿಸಿದ್ದು, ಕ್ಲೋರೋಫ್ಲೋರೋ ಕಾರ್ಬನ್ಸ್ ನಿಷೇಧದ ಪರಿಣಾಮ ಎಂದು ಹೇಳಿದೆ.
  ಓಜೋನ್ ರಂಧ್ರ ಕ್ಷೀಣಿಸುತ್ತಿರುವುದು ಕಳೆದ ವರ್ಷ ಉಪಗ್ರಹದಿಂದ ತೆಗೆದ ಛಾಯಾಚಿತ್ರಗಳಿಂದ ಪತ್ತೆಯಾಗಿದ್ದು, 2060ರ ವೇಳೆಗೆ ಓಜೋನ್ ಪದರ ಸಂಪೂರ್ಣ ದುರಸ್ತಿಯಾಗಲಿದೆ ಎಂಬ ಭರವಸೆ ಇಡಲಾಗಿದೆ.
   ಆದರೂ, ಕ್ಲೋರೋಫ್ಲೋರೋಕಾರ್ಬನ್ಸ್ ನಿಮರ್ೂಲನ ಮಾಡುವ ನಿಟ್ಟಿನಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳು 1985ರಲ್ಲಿ ಸಹಿ ಹಾಕಿದ ಮಾಂಟ್ರಿಯಲ್ ಪ್ರೊಟೊಕಾಲ್? ನ ನೇರ ಪರಿಣಾಮ ಓಜೋನ್ ರಂಧ್ರ ಸುಧಾರಣೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.  ತನ್ನ ಔರಾ ಉಪಗ್ರಹ ಮೂಲಕ ನಾಸಾ 2005 ರಿಂದ ಓಜೋನ್ ಪದರದಲ್ಲಿನ ರಂಧ್ರವನ್ನು ನಿರಂತರವಾಗಿ ಗಮನಿಸುತ್ತಿದ್ದು, ವಾಯುಮಂಡಲದಲ್ಲಿ ಕ್ಲೋರಿನ್ ಮಟ್ಟ ಶೇ. 20ರಷ್ಟು ಕುಸಿದಿದೆ ಎಂದು ತಿಳಿಸಿದೆ.
   ಮಾನವರಲ್ಲಿ ಚರ್ಮ ಕ್ಯಾನ್ಸರ್?, ಕ್ಯಾಟರಾಕ್ಟ್ಸ್ ಹಾಗೂ ಜೀವನಿರೋಧಕ ಶಕ್ತಿಯನ್ನು ಕುಂದಿಸುವುದರ ಜತೆಗೆ ಸಸ್ಯ ಸಂಕುಲವನ್ನು ಹಾಳುಗೆಡುವ ಸೂರ್ಯನ ಅತಿನೇರಳೆ ವಿಕಿರಣವನ್ನು ತಡೆಯುವ ಕೆಲಸವನ್ನು ಓಜೋನ್ ಪದರ ನಿರ್ವಹಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries