HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಮನು ಪಣಿಕ್ಕರ್ ರಿಗೆ ಲಕ್ಷ್ಮೀ ಬಳೆ ಪ್ರಧಾನ
   ಬದಿಯಡ್ಕ: ಕಾಕುಂಜೆ ತೆಂಕಮೂಲೆಯ ಪ್ರಧಾನ ರಕ್ತೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಗಣ್ಯರ  ಹಾಗೂ ಊರ ಹತ್ತು ಸಮಸ್ತರ ಸಮ್ಮುಖದಲ್ಲಿ ಖ್ಯಾತ ಭೂತ ನರ್ತನ, ಜಾನಪದ ಕಲಾವಿದ ಕುಮಾರನ್ ಪಣಿಕ್ಕರ್ ಅಗಲ್ಪಾಡಿ
ಅವರಿಗೆ ಲಕ್ಷ್ಮೀ ಬಳೆಯನ್ನು ಪ್ರಧಾನ ಮಾಡಲಾಯಿತು.
   ರಕ್ತೇಶ್ವರಿ ಭೂತ ನರ್ತನಕ್ಕಾಗಿ ಈ ಬಳೆಯನ್ನು ನೀಡಿ ಗೌರವಿಸಲಾಗಿದೆ.  ಹನ್ನೊಂದು ವರ್ಷಗಳ ಹಿಂದೆ  ಮಾಯಿಪ್ಪಾಡಿ ಅರಸರು ಕುಮಾರನ್ ಪಣಿಕ್ಕರ್ ಅವರಿಗೆ ಈ ಸನ್ನಿಧಿಯಲ್ಲಿ ಬಳೆಯನ್ನು ನೀಡಿ ಗೌರವಿಸಿದ್ದರು. ಈಗ ಲಕ್ಷ್ಮೀ ಮುದ್ರೆಯುಳ್ಳ ಅತೀ ವಿಶಿಷ್ಟವಾದ ಬಳೆಯನ್ನು ಪ್ರಧಾನ ಮಾಡಿ ಭೂತ ಕಲಾವಿದನನ್ನು ಗೌರವಿಸಲಾಯಿತು. ಲಕ್ಷ್ಮೀ ಬಳೆಯು ಶ್ರೀದೇವಿಯ ಕೆತ್ತನೆಯನ್ನೊಳಗೊಂಡ ಬಂಗಾರದ ಬಳೆಯಾಗಿದೆ. ಭೂತ ಕಲಾವಿದರಿಗೆ ನೀಡುವ ಅತ್ಯುನ್ನತ ಗೌರವವೂ ಇದಾಗಿದೆ. ಮಾಯಿಪ್ಪಾಡಿ ಅರಸರಿಂದ ಪಣಿಕ್ಕರ್ ಎಂಬ ನಾಮಧ್ಯೇಯ ಹಾಗೂ ಚಿನ್ನದ ಬಳೆಯನ್ನು ಹನ್ನೊಂದು ವರ್ಷಗಳ ಹಿಂದೆಯೇ ಪಡೆದುಕೊಂಡಿರುವ ಮನು ಪಣಿಕ್ಕರ್ ಅಥವಾ ಕುಮಾರನ್ ಪಣಿಕ್ಕರ್ ಈಗಾಗಲೇ ಕನರ್ಾಟಕ ಜಾನಪದ ಲೋಕ, ಕಲ್ಕೂರ ಪ್ರತಿಷ್ಠಾನದ ಜಾನಪದಸಿರಿ, ಜಾನಪದ ಪರಿಷತ್ ಮಹಾರಾಷ್ಟ್ರ ಘಟಕದ ಜಾನಪದ ಕಲಾಶ್ರೀ ಹಾಗೂ ಮಲಯನ್ ಸಮುದಾಯದ ಅತ್ಯಂತ ಉನ್ನತ ಪುರಸ್ಕಾರವಾದ ಕೇರಳ ರಾಜ್ಯ ಗುರುಪೂಜಾ ಪುರಸ್ಕಾರವನ್ನೂ ಪಡೆದಿರುತ್ತಾರೆ.
   ಪ್ರಸ್ತುತ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಭಟ್ ಖಂಡಿಗೆ, ಕುತ್ತಗುಡ್ಡೆ ಶ್ಯಾಮ ಭಟ್, ಕುತ್ತಗುಡ್ಡೆ ಸತ್ಯನಾರಾಯಣ ಶರ್ಮ, ಹಿರಿಯ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ  ಸುಧಾಮ ಮಣಿಯಾಣಿ, ವಾಮನ ಆಚಾರ್ಯ, ರಾಮಚಂದ್ರ ಮಣಿಯಾಣಿ, ಬಾಲ ಪಟ್ಟಾಜೆ, ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದು ಈ ಮಹತ್ವದ ಕಾರ್ಯಕ್ಕೆ ಸಾಕ್ಷಿಯಾದರು.
  ಸಮಾರಂಭದ ಮುಖಮಡರಾದ ರಾಧಾಕೃಷ್ಣ ಭಟ್ ಗೌರವಾಭಿನಂದನೆ ಸಲ್ಲಿಸಿ ಮಾತನಾಡಿ ಭೂತಾರಾಧನೆಯಲ್ಲಿ ಪಣಿಕ್ಕರ್ ತೋರಿದ ನೇಮನಿಷ್ಟೆ ಹಾಗೂ ಮಾಡಿದ ಸಾಧನೆಯನ್ನು ಗುರುತಿಸಿ ಲಕ್ಷ್ಮೀ ಬಳೆಯನ್ನು ಪ್ರಧಾನ ಮಾಡಲಾಗಿದೆ. ಹಲವಾರು ವರ್ಷಗಳಿಂದ ಕಾಕುಂಜೆ ಕ್ಷೇತ್ರದಲ್ಲಿ ರಕ್ತೇಶ್ವರಿ ಭೂತವನ್ನು ಕಟ್ಟಿ ಭಕ್ತರ ಮನಸಿನಲ್ಲಿ ಉತ್ತಮವಾದ ಅಭಿಪ್ರಾಯ ಹಾಗೂ ಗೌರವವನ್ನು ಗಳಿಸಿರುತ್ತಾರೆ. ಇಂತಹ ಕಲಾವಿದರಿಂದಲೇ ನಮ್ಮ ನಂಬಿಕೆ ವಿಶ್ವಾಸಗಳಿಗೆ, ಆರಾಧನೆಗಳಿಗೆ ಯಾವುದೇ ತೊಂದರೆ ಇಲ್ಲದೆ ಮುಂದುವರಿಯುತ್ತಿರುವುದು.ಈ ಸೇವೆಯನ್ನು ಮಾನ್ಯಮಾಡಿ ಗೌರವಾಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
 
                                                                                           







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries