HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಶಾಲಾ ಮಕ್ಕಳಿಂದ ಹೀಗೊಂದು ಪರಿಸರ ಕಾಳಜಿ-  ಹೋಲಿ ಫ್ಯಾಮಿಲಿ ಶಾಲಾ ಮಕ್ಕಳಿಂದ ಶಿರಿಯ ಹೊಳೆ ಅಳಿವೆ ಶುಚೀಕರಣ
  ಕುಂಬಳೆ: ಇಂದಿನ ಆಧುನಿಕ ಶಿಕ್ಷಣದ ಪುಸ್ತಕ, ಗಣಕ ಯಂತ್ರಗಳ ಕಲಿಕೆಯ ಮಧ್ಯೆ ಮನುಷ್ಯ ಸಹಿತ ಭೂಮಿಯ ಇತರ ಜೀವಜಾಲಗಳ ಅಸ್ತಿತ್ವವನ್ನು ನೆನಪಿಸುವ ಯತ್ನಗಳು ಶಾಲಾ ವಿದ್ಯಾಭ್ಯಾಸದ ವ್ಯವಸ್ಥೆಯಡಿ ನಿಡುವುದು ಸವಾಲಾಗುತ್ತಿದ್ದು, ತತ್ಪರಿಣಾಮವಾಗಿ ಅರಿವಿನ ಕೊರತೆ ಬಾಧಿಸುತ್ತಿದೆ. ಆದರೂ ಕೆಲವು ಶಾಲೆಗಳಲ್ಲಿ ಕ್ರಿಯಾತ್ಮಕ ಶಿಕ್ಷಕರ ನಿರಂತರ ಪರಿಶ್ರಮದ ಕಾರಣ ಆಗೊಮ್ಮೆ-ಈಗೊಮ್ಮೆ ವಿದ್ಯಾಥರ್ಿಗಳಿಗೆ ಈ ಬಗೆಗಿನ ಅರಿವು ಹಚ್ಚುವ ಕೆಲಸವೂ ನಡೆಯುತ್ತಿರುವುದು ಭರವಸೆಗಳಿಗೆ ಕಾರಣವಾಗಿದೆ.   ಸುತ್ತಮುತ್ತಲಿನ ಪ್ರದೇಶ ನಿರ್ಮಲವಾಗಿದ್ದಲ್ಲಿ ಮನಸ್ಸೂ ಸ್ವಚ್ಛವಾದ ಆಲೋಚನೆಗಳನ್ನು ಹುಟ್ಟು ಹಾಕುತ್ತವೆ. ಮಾತ್ರವಲ್ಲ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಲೂ ಆರೋಗ್ಯವಾಗಿರುತ್ತವೆ. ಮುಂದಿನ ದಿನಗಳಲ್ಲಿ ಬೇಸಿಗೆ ಬಿಸಿ, ಒಣ ಭೂಮಿಯ ಕಾಟ ತಡೆಯಲಾರದೆ ಎಲ್ಲರೂ ವರುಣ ದೇವನ ದಾರಿ ಕಾಯುತ್ತಿದ್ದರೆ ಇಲ್ಲೊಂದು ಮಕ್ಕಳ ಗುಂಪು ಶುದ್ಧ ಜಲದ ಹರಿವೆಗೆ ಅಳಿವಿಯೊಂದನ್ನು ಶುಚೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದೆ.
   ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ  ಸ್ಕೌಟ್ಸ್ ಮತ್ತು  ಗೈಡ್ಸ್ ವಿದ್ಯಾಥರ್ಿಗಳು ಈ ವಾರ ದೊರಕಿದ ಸರಕಾರಿ ರಜಾವನ್ನು ಶಿರಿಯಾ ಹೊಳೆಯ ಅಳಿವಿಯನ್ನು ಸ್ವಚ್ಛಗೊಳಿಸಿ ರಜಾ ದಿನವನ್ನು ಸದುಪಯೋಗಪಡಿಸಿ ಮಾದರಿ ಕೆಲಸವನ್ನು ಮಾಡಿದ್ದಾರೆ. ಮಾತ್ರವಲ್ಲ ಶಿರಿಯ ಅಳಿವೆಯಿಂದ ಪ್ಲಾಸ್ಟಿಕ್ ಕಸ ಸಂಗ್ರಹಿಸಿ ಗುಜರಿಗೆ ಮಾರಾಟ ಮಾಡಿದ್ದು, ಅಲ್ಲಿ ,  ಸಿಕ್ಕಿದ 100 ರೂಪಾಯಿಯನ್ನು ಶಾಲೆಯ ಆರೋಗ್ಯ ನಿಧಿಗೆ ಹಸ್ತಾಂತರಿಸುವ ಮೂಲಕ ಶಾಲಾ ಶಿಕ್ಷಕ ರಕ್ಷಕ ಸಂಘದ ಶ್ಲಾಘನೆಗೆ ಪಾತ್ರರಾಗಿರುವರು. ಒಳ ಪ್ರದೇಶದ ತೋಡು, ಸಣ್ಣ ಪುಟ್ಟ ತೊರೆಗಳು ನದಿಯನ್ನು ಸೇರುವುದಷ್ಟೇ ಅಲ್ಲದೆ ಅದರ ಜತೆಗೆ ಊರಿನ ಪ್ರತಿ ಮನೆ, ಅಂಗಡಿ ಮುಗ್ಗಟ್ಟು, ಕಛೇರಿಗಳು ಬಿಸಾಡುವ ಪ್ಲಾಸ್ಟಿಕ್, ಕಸಕಡ್ಡಿಗಳು ಅಳಿವೆಯ ಮೂಲಕ ಸಾಗರವನ್ನು ಸೇರುತ್ತಿರುವುದು ದುರಂತ. ಅನೇಕ ಕಸ ಕಡ್ಡಿಗಳು ಅಳಿವಿಯಲ್ಲಿ ಸಿಲುಕಿ ಹಾಕಿಕೊಂಡು ನೀರಿನ ಸುಗಮ ಹರಿವೆಗೆ ತೊಡಕನ್ನುಂಟು ಮಾಡುತ್ತಿವೆ. ಬೇಸಿಗೆ ಕಾಲದಲ್ಲಿ ಜಿಲ್ಲೆಯ ಪ್ರತಿ ಊರು ಇತ್ತೀಚಿನ ವರ್ಷಗಳಲ್ಲಿ ಬರಗಾಲದ ಅನುಭವವನ್ನು ಪಡೆಯುತ್ತಿರುವುದು ಜನ ಸಾಮನ್ಯರು ಕುಡಿಯುವ ನೀರು ಸಿಗದೆ ತತ್ತರಿಸುವಂತಾಗಿದೆ. ಅಂತಹುದ್ದರಲ್ಲಿ ಇರುವ ಜಲಮೂಲಗಳನ್ನೂ ಶುಚಿಗೊಳಿಸದೆ ಅಸಡ್ಡೆಯಿಂದ ಸಂಬಂಧಪಟ್ಟ ಇಲಾಖೆ ಕಾಲ ಕಳೆಯುತ್ತಿದೆ.
ನೀಡಿದರು.
   ವಿದ್ಯಾಥರ್ಿಗಳಿಗೆ  ಶುಚೀಕರಣದ ಪ್ರಕ್ರಿಯೆ ಜತೆಗೇ ಅಳಿವೆಯ ಪ್ರದೇಶದಲ್ಲಿ ವಿಶೇಷ ವಾಗಿ ಕಂಡುಬರುವ ಕ್ಯಾಶ್ಪಿಯನ್ ಟನರ್್,ಬ್ರೌನ್ ಹೆಡ್ಡೆಡ್ ಗಲ್, ಗಲ್ ಬಿಲ್ಲ್ ಟನರ್್ ಎಂಬ ಪಕ್ಷಿ ಗಳನ್ನು ಕಾಣುವ ಭಾಗ್ಯವೂ ಮಕ್ಕಳಿಗೆ ದೊರಕಿದ್ದು, ವಿಶೇಷ ಅನುಭವ ನೀಡಿದೆ.. ಕಾಸರಗೋಡು ಪಕ್ಷಿ ಪ್ರೇಮಿ ತಂಡದ ಸದಸ್ಯರಾದ ಪ್ರದೀಪ್ ಕಿದೂರು, ಗ್ಲೆನ್ ಕಿದೂರು,ಜಾನ್ಸನ್ ಕಿದೂರು ಸಹಕರಿಸಿದರು. ಶಿರಿಯ ತೀರ ಪ್ರದೇಶ ಪೋಲಿಸ್ ಠಾಣೆಯ ಪೋಲಿಸರು  ಈ ಸಂದರ್ಭದಲ್ಲಿ ಜೊತೆಗಿದ್ದು, ಮಾರ್ಗದರ್ಶನ ನೀಡಿದರು.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries