HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಭಾರತೀಯ ಸಂಸ್ಕಾರ-ಸಂಸ್ಕೃತಿ ಜಗತ್ತಿನಲ್ಲೇ ಶ್ರೇಷ್ಠವಾದುದು
        ಶೇಡಿಕಾವು ವಿದ್ಯಾಲಯದ ಮಾತೃಪೂಜನ ಕಾರ್ಯಕ್ರಮದಲ್ಲಿ  ರಾಮಚಂದ್ರ ಗಟ್ಟಿ  ಕುಂಬಳೆ
   ಕುಂಬಳೆ: ಭಾರತೀಯ ಸನಾತನ ಸಂಸ್ಕಾರ - ಸಂಸ್ಕೃತಿಯು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದುದು. ಇಲ್ಲಿನ ಸಂಸ್ಕೃತಿಯನ್ನು  ವಿದೇಶಿಯರು ಆದರ್ಶವಾಗಿ ಇಟ್ಟುಕೊಳ್ಳುತ್ತಿದ್ದಾರೆ. ಆದರೆ ಇಂದು ನಮ್ಮ  ಯುವಜನಾಂಗದಲ್ಲಿ  ಸಂಸ್ಕಾರದ ಕೊರತೆ ಎದ್ದು  ಕಾಣುತ್ತಿದೆ. ಎಳವೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರವನ್ನು  ಹಾಗೂ ಆದರ್ಶಯುತ ಬದುಕಿನ ಮೌಲ್ಯಗಳ ಕುರಿತು ಕಲಿಸಿಕೊಟ್ಟರೆ ಉತ್ತಮ ಜನಮನ್ನಣೆ ಗಳಿಸುವ ನಾಗರಿಕರಾಗಿ ಬಾಳು ಸಾಗಿಸಲು ಅನುಕೂಲವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಗಟ್ಟಿ  ಕುಂಬಳೆ ಹೇಳಿದರು.
   ಕುಂಬಳೆ ಶೇಡಿಕಾವು ಶಂಕರಪುರಂ ಶ್ರೀಕೃಷ್ಣ  ವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡ ಮಾತೃ ಪೂಜನ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
  ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು  ಶ್ರೀಕೃಷ್ಣ  ವಿದ್ಯಾಲಯದಲ್ಲಿ  ಕಲಿಸಿಕೊಡಲಾಗುತ್ತಿದೆ. ಈ ಶಾಲೆಯಲ್ಲಿ  ಕಲಿತು ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆ ಶಿಕ್ಷಣಸಂಸ್ಥೆಗಳಿಗೆ ತೆರಳುವ ವಿದ್ಯಾಥರ್ಿಗಳಿಗೆ ಇಲ್ಲಿ  ಕಲಿಸಿದ ಸಂಸ್ಕಾರವು ಅಡಿಪಾಯವಾಗಿರುತ್ತದೆ. ಈ ಶಾಲೆಯ ಶಿಸ್ತು , ಚಟುವಟಿಕೆ ಮಾದರಿಯಾಗಿದೆ ಎಂದು ತಿಳಿಸಿದರು.
   ಇದೇ ಸಂದರ್ಭ ಭಾರತೀಯ ವಿದ್ಯಾನಿಕೇತನದ ಕೇರಳ ರಾಜ್ಯ ಸಂಘಟಕ ಸದಸ್ಯ ಹರಿಹರನ್ ಮಾತನಾಡಿ, ನಮ್ಮ  ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು  ಕೊಡುವ ಹೊಣೆ ನಮ್ಮದು. ಆದರೆ ಮಕ್ಕಳೊಂದಿಗೆ ಹೆತ್ತವರೂ ದಾರಿ ತಪ್ಪುತ್ತಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ ಎಂದರು. 
   ಸಮಾರಂಭದಲ್ಲಿ  ಕಾಸರಗೋಡು ದ್ವಾರಕಾನಗರದ ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಜಲಜಾಕ್ಷಿ  ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಧಾನ ಸಂಚಾಲಕ ಶೇಂತಾರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ರವಿ ಪೂಜಾರಿ ಕೋಟೆಕ್ಕಾರು, ಮಾತೃ ಸಂಘದ ಅಧ್ಯಕ್ಷೆ  ಲತಾ ಕುಂಬಳೆ, ಶಾಲಾ ಸಹ ಕಾರ್ಯದಶರ್ಿ ಲಲಿತಾ ಕೆ. ಅಡಿಗ, ಮುಖ್ಯೋಪಾಧ್ಯಾಯಿನಿ ಶಕುಂತಳಾ ಕಡಮಣ್ಣಾಯ ಮುಂತಾದವರು ಉಪಸ್ಥಿತರಿದ್ದರು. ಹರಿಣಾಕ್ಷಿ  ಮಾತಾಶ್ರೀ ಸ್ವಾಗತಿಸಿ, ಜಯಶ್ರೀ ಮಾತಾಶ್ರೀ ವಂದಿಸಿದರು. ವನಿತಾ ಮಾತಾಶ್ರೀ ಕಾರ್ಯಕ್ರಮ ನಿರೂಪಿಸಿದರು.
 
       ಮಕ್ಕಳಿಂದ ಅಮ್ಮಂದಿರಿಗೆ ಪೂಜೆ:
   ಕಳೆದ ಹಲವಾರು ವರ್ಷಗಳಿಂದ ಭಾರತೀಯ ವಿದ್ಯಾನಿಕೇತನ ವಿದ್ಯಾಲಯಗಳ ಸಂಘಟಕರಾಗಿ ಸೇವೆ ಸಲ್ಲಿಸಿ, ಈ ವಲಯದ ಬೆಳವಣಿಗೆಗೆ ತಮ್ಮನ್ನು  ತಾವು ಸಮಪರ್ಿಸಿಕೊಂಡಿರುವ ಹರಿಹರನ್ ಅವರನ್ನು  ಈ ಸಂದರ್ಭ ಗೌರವಿಸಲಾಯಿತು. ಅಲ್ಲದೆ ಯುವ ಪತ್ರಕತರ್ೆ ಸಾಯಿಭದ್ರಾ ರೈ ಎ.ಶಿರಿಯಾ ಅವರನ್ನು  ಮಾತೃಪೂಜನ ಕಾರ್ಯಕ್ರಮದ ಅಂಗವಾಗಿ ಸನ್ಮಾನಿಸಲಾಯಿತು.
   ಮಾತೃಪೂಜನದ ಪ್ರಯುಕ್ತ  ಅಮ್ಮಂದಿರನ್ನು  ಅವರ ಮಕ್ಕಳು ಪಾದ ತೊಳೆದು ಶ್ರೀಗಂಧ ಅಕ್ಷತೆಯೊಂದಿಗೆ ಪೂಜಿಸಿ ಆರತಿ ಬೆಳಗಿ ಆಶೀವರ್ಾದ ಪಡೆದರು. ಈ ಕಾರ್ಯಕ್ರಮವನ್ನು  ಕಣಿಪುರ ಶ್ರೀ ಗೋಪಾಲಕೃಷ್ಣ  ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ಅಡಿಗ ಕುಂಬಳೆ ನಡೆಸಿಕೊಟ್ಟರು. ಅಲ್ಲದೆ ಪೂಜೆಯ ಮಹತ್ವದ ಕುರಿತು ವಿವರಿಸಿದರು.
     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries