HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕೆಎಸ್ಟಿಎ ಮಂಜೇಶ್ವರ ತಾಲೂಕು ಸಮ್ಮೇಳನ
    ಕುಂಬಳೆ: ಕೇರಳ ಸ್ಟೇಟ್ ಟೈಲರ್ಸ್  ಅಸೋಸಿಯೇಶನ್ (ಕೆಎಸ್ಟಿಎ)ನ ಮಂಜೇಶ್ವರ ತಾಲೂಕು ಸಮ್ಮೇಳನವು ಕುಂಬಳೆ ವ್ಯಾಪಾರ ಭವನದಲ್ಲಿ  ಇತ್ತೀಚೆಗೆ ಜರಗಿತು.
    ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ  ಪುಂಡರೀಕಾಕ್ಷ  ಕೆ.ಎಲ್. ಸಮ್ಮೇಳನವನ್ನು  ದೀಪಬೆಳಗಿಸಿ ಉದ್ಘಾಟಿಸಿ, ಹೊಲಿಗೆ ಕೆಲಸ ಎಂಬ ಕೀಳರಿಮೆ ತೊರೆದು ಮುಂದಿನ ತಲೆಮಾರಿನವರೂ ಈ ಉದ್ಯೋಗವನ್ನು  ಆರಿಸಿಕೊಳ್ಳುವಂತೆ ಕರೆ ನೀಡಿದರು. ಹೊಲಿಗೆ ಕಾಮರ್ಿಕರಿಗಾಗಿ ಹೋರಾಡಿ ಹಲವಾರು ನ್ಯಾಯಯುತ ಸೌಲಭ್ಯಗಳನ್ನು  ಪಡೆಯಲು ನಿರಂತರವಾಗಿ ಶ್ರಮಿಸುತ್ತಿರುವ ಕೆಎಸ್ಟಿಎ ಸಂಘಟನೆಯ ಪ್ರಯತ್ನವನ್ನು  ಅವರು ಪ್ರಶಂಸಿಸಿದರು.
  ಕೆಎಸ್ಟಿಎ ತಾಲೂಕು ಘಟಕದ ಅಧ್ಯಕ್ಷ  ಶ್ರೀರಾಮ ಪೊಯ್ಯೆಕಂಡ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ಟಿಎ ರಾಜ್ಯ ಉಪಾಧ್ಯಕ್ಷ  ರಾಮನ್ ಚೆನ್ನಿಕೆರೆ ಮುಖ್ಯ ಭಾಷಣ ಮಾಡಿದರು. ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ  ಶೆಟ್ಟಿ  ಕರಿಪ್ಪಾರ್, ವೆಲೇರ್ ಫಂಡ್ ಬೋಡರ್್ ಸಮಿತಿ ಸದಸ್ಯ ಶಂಕರ ಅಣಂಗೂರು, ಜಿಲ್ಲಾಧ್ಯಕ್ಷ  ಮೋಹನದಾಸ್ ಕುಂಬಳೆ, ಜಿಲ್ಲಾ  ಪ್ರಧಾನ ಕಾರ್ಯದಶರ್ಿ ಭಾಸ್ಕರನ್ ನಾಯರ್, ಜಿಲ್ಲಾ  ಕೋಶಾಧಿಕಾರಿ ಸಿ.ಸುರೇಶ್ ಬದಿಯಡ್ಕ ಶುಭಹಾರೈಸಿದರು.
   ಜಿಲ್ಲಾ  ಸಮಿತಿ ಸದಸ್ಯ ಸಂಕಪ್ಪ  ಗಟ್ಟಿ  ಕುಂಬಳೆ, ಯು.ಕೇಶವ ಮಯ್ಯ, ನಾರಾಯಣ ಕುಂಬಳೆ ಉಪಸ್ಥಿತರಿದ್ದರು. ತಾಲೂಕು ಪ್ರಧಾನ ಕಾರ್ಯದಶರ್ಿ ಪಿ.ರಾಮಚಂದ್ರ ಭಟ್ ಧರ್ಮತ್ತಡ್ಕ ವರದಿ ಮಂಡಿಸಿದರು. ತಾಲೂಕು ಕೋಶಾಧಿಕಾರಿ ಮನೋಹರ ಶೆಟ್ಟಿ  ಲೆಕ್ಕಪತ್ರ ಮಂಡಿಸಿದರು.
   ಈ ಸಂದರ್ಭ ಓಖಿ ಚಂಡಮಾರುತ ದುರಂತದಲ್ಲಿ  ಸಾವನ್ನಪ್ಪಿದವರಿಗೆ ಹಾಗೂ ಜಿಲ್ಲೆಯಲ್ಲಿ  ಅಗಲಿದ ಸಾಮಾಜಿಕ, ರಾಜಕೀಯ ಮತ್ತು  ಧಾಮರ್ಿಕ ರಂಗಗಳ ನಾಯಕರಿಗೆ, ಸಂಘಟನೆಯ ಸದಸ್ಯರಿಗೆ ಶ್ರದ್ಧಾಂಜಲಿ ಅಪರ್ಿಸಲಾಯಿತು.
  ಕಲಾವತಿ ಸುರೇಂದ್ರ ಮಂಜೇಶ್ವರ ಮತ್ತು  ಕನಕ ಸಹೋದರಿಯರು ಪ್ರಾಥರ್ಿಸಿದರು. ಕಾರ್ಯದಶರ್ಿ ದಯಾನಂದ ಎಂ. ಸ್ವಾಗತಿಸಿ, ಜೊತೆ ಕಾರ್ಯದಶರ್ಿ ರತ್ನಾಕರ ಪೆರ್ಲ ವಂದಿಸಿದರು.
   ಬಳಿಕ ಕೆಎಸ್ಟಿಎ ತಾಲೂಕು ಘಟಕದ ಮುಂದಿನ ಸಾಲಿನ ಪದಾಧಿಕಾರಿಗಳಾಗಿ ನೂತನ ಅಧ್ಯಕ್ಷರನ್ನಾಗಿ ಸಂಕಪ್ಪ  ಗಟ್ಟಿ  ಕುಂಬಳೆ, ಪ್ರಧಾನ ಕಾರ್ಯದಶರ್ಿಯಾಗಿ ಎಂ.ಸತೀಶ ಆಚಾರ್ಯ ಉಪ್ಪಳ, ಕೋಶಾಧಿಕಾರಿಯಾಗಿ ಮನೋಹರ ಶೆಟ್ಟಿ  ಹಾಗೂ 20 ಮಂದಿಯನ್ನು  ಕಾರ್ಯಕಾರಿ ಸಮಿತಿಗೆ ಆರಿಸಲಾಯಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries