ಸಹೃದಯ ಸಮರಸ ಓದುಗರೇ,
ಕಳೆದ ಮೂರು ತಿಂಗಳುಗಳಿಂದ ಹೆಚ್ಚಿನ ಕಾಲಾವಧಿಯಲ್ಲಿ ಗಡಿನಾಡು ಜಿಲ್ಲೆಯ ಸಹಿತ ಕನ್ನಡ ಭೂಮಿಯ ಎಲ್ಲಡೆ ಸನ್ಮನಸ್ಸಿನ ಓದುಗರನ್ನು ಆಕಷರ್ಿಸಿರುವ ಓದುಗರು ಬ್ಲಾಗನ್ನು ಬೆಳೆಸಿದ್ದಿರಿ. ಎಲ್ಲ ಓದುಗರಿಗೂ ಮತ್ತೊಮ್ಮೆ ವಂದನೆಗಳು.
ಸಮರಸವನ್ನು ವ್ಯತ್ಯಸ್ಥ ದೃಷ್ಟಿಕೋನದಲ್ಲಿ ಬೆಳೆಸಬೇಕೆಂಬ ಉದ್ದೇಶದಿಂದ ಹೊಸಹೊಸ ವಿಷಯಗಳನ್ನು ಪಾರಂಪರಿಕತೆಯ ಅಡಿಪಾಯದೊಮದಿಗೆ ಮತ್ತೆ ಬೆಳೆಸಬೇಕೆಂಬ ಲಕ್ಷ್ಯದೊಮದಿಗೆ ಇದೀಗ ಪಾರಂಪರಿಕ ಆಹಾರ ಪರಿಚಯದೊಂದಿಗೆ ಮುಂದಡಿಯಿಡುತ್ತಿದೆ.
ಕರಾವಳಿಯಾದ್ಯಂತ ಪ್ರಾಚೀನ ಕಾಲದಿಂದಲೂ ತಂಬುಳಿ ಎಂಬ ವಿಶೇಷ ಆಹಾರ ಪದಾರ್ಥ ಚಾಲ್ತಿಯಲ್ಲಿದ್ದು, ಇಂದದು ಬಹುತೇಕ ಬಳಕೆಯಲ್ಲಿ ಕುಸಿಯುತ್ತಿದೆ. ಇಂದಿನ ವೈಪರೀತ್ಯದ ಹವಾಮಾನ, ಕಲಬೆರಕೆಯುಕ್ತ ಆಹಾರ ವಸ್ತುಗಳು, ತತ್ಪರಿಣಾಮವಾಗಿ ಆರೋಗ್ಯದ ಏರುಪೇರುಗಳ ಮಧ್ಯೆ ಪಾರಂಪರಿಕ ಆಹಾರ ಪದ್ದತಿಯ ಬಗ್ಗೆ ಅರಿತಿರುವುದು ಉತ್ತಮ ಎಂಬ ಸದುದ್ದೇಶ ತಂಬುಳಿ ಅಂಕಣದ್ದು. ನಿಮಗಿಷ್ಟವಾದೀತು...ಹಾಗೆ ತಂಬುಳಿ ಮಾಡಿದರೆ ನಮಗೂ ಕಳಿಸಲು ಮರಿಬೇಡಿ ಮತ್ತೆ!






