ಸಮರಸ ಸಂಪಾದಕೀಯ ಅರಿಕೆ,
ಸನ್ಮನಸ್ಸಿನ ಓದುಗರೇ, ಶ್ರೀಮಂತ ಪರಂಪರೆಯ ನಮ್ಮ ಭಾರತ ಸಾಗಿಬಂದ ಹಾದಿ ವಿಶಿಷ್ಟವಾಗಿ ವಿಶಾಲವಾದುದು. ಸಾವಿರಾರು ವರ್ಷಳಿಂದ ಬೆಳೆದುಬಂದಿರುವ ಭರತ ಖಂಡದ ಇಷ್ಟು ಪ್ರಾಚೀನ ಸಂಸ್ಕೃತಿ, ಜೀವನ ಕ್ರಮ ಈವರೆಗೂ ಬೆಳೆದುಬರಲು ಕಾರಣವಾದುದು ಇಲ್ಲಿಯ ಆಧ್ಯಾತ್ಮಿಕಕತೆಯ ಮಹಾನ್ ಶಕ್ತಿಯಿಂದ. ಕಳೆದ ಶತಮಾನದ ಯುಗ ಪ್ರವರ್ತಕ ಸ್ವಾಮಿ ವಿವೇಕಾನಂದರೂ ಇದನ್ನೇ ಎತ್ತಿಹಿಡಿದು ಯುವ ಸಮೂಹಕ್ಕೆ ಆಧ್ಯಾತ್ಮಿಕತೆಯ ಒಲವಿಗೆ ಪ್ರೇರೇಪಿಸಿದ್ದರು.
ಹೊಸ ತಲೆಮಾರಿಗೆ ಇಂತಹ ಆಧ್ಯಾತ್ಮಿಕ ಪರಂಪರೆಯ ಸಾಧಕರನ್ನು ಪರಿಚಯಿಸಲು ಸಮರಸ ಸುದ್ದಿ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಮುದ್ರಣಗೊಂಡಿರುವ ಪುಸ್ತಕದ ಆಯ್ದ ಪುಟಗಳನ್ನು ಹಂಚಿಕೊಳ್ಳಬಯಸುತ್ತಿದ್ದು, ಇಂದಿನಿಂದ ನಿಯಮಿತವಾಗಿ ಓದುಗರಿಗೆ ಲಭ್ಯವಾಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 169ನೇ ಪ್ರಕಟಣೆಯಾಗಿರುವ ಡಾ.ಪ್ರಧಾನ್ ಗುರುದತ್ತ್ ಪ್ರಧಾನ ಸಂಪಾದಕರಾಗಿದ್ದ ಡಾ.ಎ.ವಿ. ನರಸಿಂಹಮೂತರ್ಿ ಬರೆದು ಸಂಪದಿಸಿರುವ ನಮ್ಮ ದೇಶದ ಆಧ್ಯಾತ್ಮಿಕ ವ್ಯಕ್ತಿಗಳು-ಒಂದು ನೋಟ ಕೃತಿಯನ್ನು ಓದುಗರಿಗಾಗಿ ಪ್ರಕಟಿಸಲಿದೆ.
ಪ್ರಧಾನ ಸಂಪಾದಕಿ.
ಅಕ್ಷತಾ ಪಿ.ಭಟ್

