HEALTH TIPS

ಯಾವುದೇ ಶೀರ್ಷಿಕೆಯಿಲ್ಲ


    ಪೆರ್ಲ: ಸ್ವರ್ಗ-ಮಲೆತ್ತಡ್ಕ -ದುಗ್ಗಜ್ಜಮೂಲೆ (ಮೂಲಸ್ಥಾನ) ರಸ್ತೆ ಕಾಂಕ್ರಿಟೀಕರಣ, ಸ್ವರ್ಗ- ಮಲೆತ್ತಡ್ಕ ಕಿರು ತೋಡಿಗೆ ಸೇತುವೆ ನಿಮರ್ಾಣ, ಸ್ವರ್ಗ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮಳೆ ನೀರು ಇಂಗಿಸುವಿಕೆಗೆ ಬೇಕಾದ ಸೌಲಭ್ಯ ಒದಗಿಸುವಂತೆ ಫಲಾನುಭವಿಗಳ ಪರವಾಗಿ ಸುದರ್ಶನ ಬಳಗದ ಸುಬ್ರಹ್ಮಣ್ಯ ಭಟ್ ಕೆ ವೈ, ಜಗದೀಶ್ ಕುತ್ತಾಜೆ, ಅಜಿತ್ ಸ್ವರ್ಗ ಅವರು ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪಾ ಅಮೆಕ್ಕಳ ಅವರ ಉಪಸ್ಥಿತಿಯಲ್ಲಿ ಮಂಜೇಶ್ವರ ಶಾಸಕ  ಪಿ.ಬಿ.ಅಬ್ದುಲ್ ರಜéಾಕ್ ಅವರ ಸಮ್ಮುಖದಲ್ಲಿ ಕಿರುನೀರಾವರಿ, ಪ್ಲಾನಿಂಗ್ ಬೋಡರ್್, ರೈನ್ ವಾಟರ್ ಹಾವರ್ೆಸ್ಟಿಂಗ್ ಇಲಾಖಾಧಿಕಾರಿಗಳಿಗೆ ಹಾಗೂ ಕನ್ಯಾರುಮೂಲೆ- ಪಿಲಿಂಗಲ್ಲು(ನೀಚರ್ಾಲು) ರಸ್ತೆ ಡಾಮರೀಕರಣಕ್ಕೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
   ಈ ಮೊದಲು ಸ್ವರ್ಗ- ಮಲೆತ್ತಡ್ಕ ದುಗ್ಗಜ್ಜಮೂಲೆ  ರಸ್ತೆ ಅಭಿವೃದ್ಧಿಗೆ ಶಾಸಕರಿಗೆ ಒತ್ತಡ ಹೇರಲು ಸೋಮಶೇಖರ್ ಶೇಣಿ ಹಾಗೂ ಅಶ್ರಫ್ ಮತ್ರ್ಯ ಅವರನ್ನು ಕೋರಲಾಗಿದ್ದು ಅದು ಶೀಘ್ರದಲ್ಲಿ ಯಾಥಾಥ್ರ್ಯ ಗೊಳ್ಳುವ ನಿರೀಕ್ಷೆಯಲ್ಲಿದೆ.
   ಕುರಿಯತ್ತಡ್ಕ ಮೂಲಕ  ವೊಡ್ಯ ಹಾದಿಯಾಗಿ ನೆರೆಯ ಕನರ್ಾಟಕಕ್ಕೆ ಸಂಪರ್ಕ ಕಲ್ಪಿಸುವ ಮುಂಗ್ಲಿಕ್ಕಾನ  ವಿಸಿಬಿ ಡ್ಯಾಮ್ ಕಮ್ ಬ್ರೀಡ್ಜ್  ಸ್ಥಾಪನೆಯ ಅಂಗೀಕಾರಕ್ಕಾಗಿರುವ ಪ್ರಸ್ತಾವನೆಯನ್ನು ಶಾಸಕರ ಸಮ್ಮುಖದಲ್ಲಿ ಕಿರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಗ್ರಾ.ಪಂ.  ಸದಸ್ಯೆ ಮಲ್ಲಿಕಾ ಜೆ ರೈ ಅವರು ನೀಡಿದರು. ಈ ಮೊದಲು ಈ ಯೋಜನೆಯ ರೆಸೋಲ್ಯೂಶನ್ ಶಾಸಕರು ಹಾಗೂ ಎಣ್ಮಕಜೆ ಗ್ರಾಮ ಪಂಚಾಯತು ಮೂಲಕ ದೊರಕಿದ್ದು ಶೀಘ್ರದಲ್ಲಿ ಅದೂ ಸಾಕಾರಗೊಳ್ಳುವುದೆಂದು ನಿರೀಕ್ಷಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries