HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ದೇಶ ಸೇವೆಗೆ ಆದ್ಯತೆ ನೀಡಬೇಕು-ನ್ಯಾಯವಾದಿ ಕೆ.ಶ್ರೀಕಾಂತ್ 
   ಬದಿಯಡ್ಕ : ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನಿಮರ್ಿಸಿಕೊಡುವಲ್ಲಿ ಅಧ್ಯಾಪಕರ ಪಾತ್ರ ಮಹತ್ತರವಾಗಿದೆ. ತಮ್ಮ ನಿವೃತ್ತಿ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟು ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ಅವರು ಅಗಲ್ಪಾಡಿ ಶ್ರೀ ಅನ್ನಪೂಣರ್ೇಶ್ವರಿ ಪ್ರೌಢ ಶಾಲೆಯ ವಾಷರ್ಿಕೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಹಳ್ಳಿಯಲ್ಲಿ ಉತ್ತಮ ಪ್ರತಿಭೆಗಳನ್ನು ದೇಶಕ್ಕೆ ನೀಡುತ್ತಿರುವ ಈ ಶಾಲೆ ಮಾದರಿ ಶಾಲೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿರಿಯ ವ್ಯವಸ್ಥಾಪಕರಾದ ಬಳ್ಳಪದವು ರಾಧಾಕೃಷ್ಣ ಭಟ್ ಅವರು ದೀಪ ಬೆಳಗಿಸಿ ವಾಷರ್ಿಕೋತ್ಸವವನ್ನು ಉದ್ಘಾಟಿಸಿದ್ದರು. ಈ ವರ್ಷ ವೃತ್ತಿಯಿಂದ ನಿವೃತ್ತಿ ಹೊಂದಲಿರುವ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ ಬಿ. ಹಾಗೂ ಅಧ್ಯಾಪಕರಾದ ಶ್ರೀಧರ ಭಟ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಉಪ್ಪಂಗಳ ಶಂಕರನಾರಾಯಣ ಭಟ್ ಮಾತನಾಡಿ ಶಾಲೆಯ ಇತಿಹಾಸವನ್ನು ಸಭೆಗೆ ತಿಳಿಸಿದರು. ವ್ಯವಸ್ಥಾಪಕರಾದ ನಾರಾಯಣ ಶರ್ಮ, ಪಂ.ಸದಸ್ಯೆಯರಾದ ಶಾಂತ ಕುಮಾರಿ, ಯಶೋಧ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಭಾಕರ ರೈ ಗೋಸಾಡ, ಮಾತೃಸಂಘದ ಅಧ್ಯಕ್ಷೆ ಜಯಂತಿ, ಶಾಲಾ ಮುಖ್ಯೋಪಾಧ್ಯಾಯರಾದ ಗಿರೀಶ್ ಎನ್., ಕಾಸರಗೋಡು ಸರಕಾರೀ ಕಾಲೇಜಿನ ಉಪನ್ಯಾಸಕಿ ನಿರ್ಮಲಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ಸತೀಶ್ ವೈ ಸ್ವಾಗತಿಸಿ, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ್ ಭಟ್ ಎಂ ಧನ್ಯವಾದವನ್ನಿತ್ತರು.
ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊನೆಯಲ್ಲಿ ಮಕ್ಕಳಿಂದ ಪ್ರದಶರ್ಿತಗೊಂಡ `ರತಿಕಲ್ಯಾಣ' ಎಂಬ ಯಕ್ಷಗಾನವು ಎಲ್ಲರ ಮನ ರಂಜಿಸಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries