HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           `ಗಭರ್ಾಶಯ ಕ್ಯಾನ್ಸರ್ ಸಂಪೂರ್ಣ ನಿಯಂತ್ರಿಸಬಹುದು'
      ಕ್ಯಾನ್ಸರ್ ಮುಕ್ತ  ಜಿಲ್ಲೆ  ಯೋಜನೆಯ ಅಂಗವಾಗಿ ಕ್ಯಾನ್ಸರ್ ಬಿ ಪಾಸಿಟಿವ್ ಪ್ರಾಥಮಿಕ ಹಂತದ ತಿಳುವಳಿಕೆ ತರಗತಿ
   ಕಾಸರಗೋಡು: ನಿರಂತರ ಪರಿಶ್ರಮದ ಮೂಲಕ ಮುಂದಿನ ಆರು ವರ್ಷಗಳೊಳಗೆ ಜಿಲ್ಲೆಯಲ್ಲಿ  ಗಭರ್ಾಶಯ ಕ್ಯಾನ್ಸರ್ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಮಲಬಾರ್ ಕಾನ್ಸರ್ ಸೆಂಟರ್ನ ನಿದರ್ೇಶಕ ಡಾ.ಸತೀಶನ್ ಬಿ. ಹೇಳಿದ್ದಾರೆ.
   ಈ ವಲಯದಲ್ಲಿ  ಸಾಕಷ್ಟು  ಮುಂಜಾಗ್ರತೆ ವಹಿಸಿ ಕಾಯರ್ಾಚರಿಸಬೇಕು. ಸೂಕ್ತ  ತಿಳುವಳಿಕೆ ಮೂಡಿಸಬೇಕು. ಹಾಗಾದಲ್ಲಿ  ಗಭರ್ಾಶಯ ಕ್ಯಾನ್ಸರ್ನಿಂದ ಓವರ್ೆ ರೋಗಿ ಕೂಡ ಜಿಲ್ಲೆಯಲ್ಲಿ  ಸಾವಿಗೀಡಾಗುವುದಿಲ್ಲ  ಎಂದು ಅವರು ನುಡಿದರು.
    ಕ್ಯಾನ್ಸರ್ ಮುಕ್ತ  ಜಿಲ್ಲೆ  ಯೋಜನೆಯ ಅಂಗವಾಗಿ ಕ್ಯಾನ್ಸರ್ ಬಿ ಪಾಸಿಟಿವ್ ಪ್ರಾಥಮಿಕ ಹಂತದ ಪ್ರಯುಕ್ತ  ಕಾಸರಗೋಡು ಕಲೆಕ್ಟರೇಟ್ನಲ್ಲಿ  ಹಮ್ಮಿಕೊಳ್ಳಲಾಗಿದ್ದ  ತಿಳುವಳಿಕೆ ತರಗತಿಯಲ್ಲಿ  ಭಾಗವಹಿಸಿ ಅವರು ಮಾತನಾಡಿದರು.
   ಜಿಲ್ಲೆಯಲ್ಲಿ  ಮಹಿಳೆಯರಲ್ಲಿ  ಪ್ರಧಾನವಾಗಿ ಸ್ತನ, ಗಭರ್ಾಶಯ, ಬಾಯಿ, ಶ್ವಾಸಕೋಶ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಪುರುಷರಲ್ಲಿ  ಮುಖ್ಯವಾಗಿ ಶ್ವಾಸಕೋಶ, ಬಾಯಿ, ಕರುಳಿನಲ್ಲಿ  ಕ್ಯಾನ್ಸರ್ ಕಾಣಿಸಿಕೊಳ್ಳುವುದು. ಜಿಲ್ಲೆಯಲ್ಲಿ  ಕಠಿಣ ಪರಿಶ್ರಮದ ಮೂಲಕ ಐದು-ಆರು ವರ್ಷಗಳಲ್ಲಿ  ಈ ರೋಗವನ್ನು  ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿದೆ ಎಂದು ಅವರು ವಿವರಿಸಿದರು.
   ಈ ಮೂಲಕ ಎಲ್ಲರ ಜೀವಗಳನ್ನು  ಉಳಿಸಲು ಸಾಧ್ಯವಾಗುವುದು. ಆದರೆ ಇತರ ಕ್ಯಾನ್ಸರ್ಗಳಲ್ಲಿ  ಜೀವ ಉಳಿಸಲು ಸಾಧ್ಯವಾಗುವುದಿಲ್ಲ  ಎಂದವರು ತಿಳಿಸಿದರು.
   ಈ ಬಗ್ಗೆ  ಜರಗಿದ ತಿಳುವಳಿಕೆ ತರಗತಿಯನ್ನು  ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು  ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ  ಪಂಚಾಯತ್ ಅಧ್ಯಕ್ಷ  ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಜೀವನ್ಬಾಬು, ಜಿಲ್ಲಾ  ಪಂಚಾಯತ್ ಅಭಿವೃದ್ಧಿ  ಸ್ಥಾಯೀ ಸಮಿತಿ ಅಧ್ಯಕ್ಷ  ಹಷರ್ಾದ್ ವಕರ್ಾಡಿ, ಶಾನವಾಸ್ ಪಾದೂರು, ಡಾ.ರಮೇಶನ್ ಮಾತನಾಡಿದರು. ಜಿಲ್ಲಾ  ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ಕುಮಾರ್ ಸ್ವಾಗತಿಸಿ, ಜಿಲ್ಲಾ  ಪಂಚಾಯತ್ ಕಾರ್ಯದಶರ್ಿ ಪಿ.ನಂದಕುಮಾರ್ ವಂದಿಸಿದರು.
   ಕೇರಳ ರಾಜ್ಯದ ಕ್ಯಾನ್ಸರ್ ಮುಕ್ತ  ಮೊದಲ ಜಿಲ್ಲೆಯಾಗಿ ಕಾಸರಗೋಡನ್ನು  ಗುರುತಿಸುವ ಉದ್ದೇಶದೊಂದಿಗೆ ಮೊದಲ ಹಂತದಲ್ಲಿ  ಎಲ್ಲಾ  ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಕ್ಯಾನ್ಸರ್ ಬಿ ಪಾಸಿಟಿವ್ ಎಂಬ ಯೋಜನೆಯನ್ನು  ಆರಂಭಿಸಲಾಗಿದೆ. ಇದರ ಅಂಗವಾಗಿ ಮೊದಲ ಹಂತದಲ್ಲಿ  ಜಿಲ್ಲೆಯಲ್ಲಿ  2.75 ಲಕ್ಷ  ಮನೆಗಳಿಂದ ಆಶಾ ಕಾರ್ಯಕತರ್ೆಯರು, ಕುಟುಂಬಶ್ರೀ ಕಾರ್ಯಕತರ್ೆಯರ ಸಹಾಯದೊಂದಿಗೆ ಪ್ರತ್ಯೇಕ ಅಜರ್ಿಯಲ್ಲಿ  ವಿವರಣೆಯನ್ನು  ಸಂಗ್ರಹಿಸಲಾಗುವುದು. ಜೀವನ ಶೈಲಿಗೆ ಸಂಬಂಸಿದಂತೆ ಮಾಹಿತಿಗಳನ್ನು  ಸಂಗ್ರಹಿಸಲು ನಿರ್ಧರಿಸಲಾಗಿದೆ. ವಾಡರ್್ ಮಟ್ಟದಲ್ಲಿ  ಇದು ಮೊದಲು ನಡೆಯಲಿದೆ. ವ್ಯಕ್ತಿಗಳ ಹೆಸರು, ಮನೆಯ ಹೆಸರು ಮುಂತಾದವುಗಳು ಇಲ್ಲದೆ ವಾಡರ್್ ನಂಬರ್, ಮನೆ ನಂಬರ್ ಮೊದಲಾದವುಗಳನ್ನು  ಮಾತ್ರ ಒಳಪಡಿಸಲಾಗುವುದು. ಫೆಬ್ರವರಿ 15ರೊಳಗೆ ಪೂರ್ಣಗೊಳಿಸುವ ಮೊದಲ ಹಂತದ ಮಾಹಿತಿ ಸಂಗ್ರಹದ ಆಧಾರದಲ್ಲಿ  ಎರಡನೇ ಹಂತದ ಯೋಜನೆಯನ್ನು  ಆರಂಭಿಸಲು ತೀಮರ್ಾನಿಸಲಾಗಿದೆ.
     ಮುಖ್ಯಾಂಶ:
     ಕ್ಯಾನ್ಸರ್ ಬಾಧಿತರ ರಿಜಿಸ್ಟರ್ ತಯಾರಿ
   ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸರಕಾರಿ ಕಾಲೇಜು, ಕೇಂದ್ರ ವಿಶ್ವ ವಿದ್ಯಾನಿಲಯ, ಎಲ್ಬಿಎಸ್ ಎಂಜಿನಿಯರಿಂಗ್ ಕಾಲೇಜು ಮೊದಲಾದ ಕಡೆಗಳಲ್ಲಿ  ಎನ್ಎಸ್ಎಸ್ ಕಾರ್ಯಕರ್ತರು ಎರಡನೇ ಹಂತದಲ್ಲಿ  ಮಾಹಿತಿ ಸಂಗ್ರಹಿಸುವರು. ಬಳಿಕ ಜಿಲ್ಲೆಯಲ್ಲಿ  ಕ್ಯಾನ್ಸರ್ ಬಾತರ ರಿಜಿಸ್ಟರ್ ತಯಾರಿಸಲಾಗುವುದು. ಇದರ ಪೂರ್ವಭಾವಿಯಾಗಿ ಜಿಲ್ಲೆಯ ಗ್ರಾಮ ಮತ್ತು  ಬ್ಲಾಕ್ ಪಂಚಾಯತ್ಗಳ ಅಧ್ಯಕ್ಷರಿಗೆ, ನಗರಸಭಾ ಅಧ್ಯಕ್ಷರಿಗೆ, ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ, ಹೆಲ್ತ್ ಇನ್ಸ್ಪೆಕ್ಟರ್ಗಳಿಗೆ, ಬ್ಲಾಕ್ ವೈದ್ಯಾಧಿಕಾರಿಗಳಿಗೆ ತಿಳುವಳಿಕಾ ತರಗತಿಯನ್ನು  ಆಯೋಜಿಸಲು ನಿರ್ಧರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries