HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕಾಯರ್ಕಟ್ಟೆ  ಮಂದಿರದ ಬ್ಯಾನರ್ ನಾಶ: ವಿಹಿಂಪ ಖಂಡನೆ
    ಉಪ್ಪಳ: ಪೈವಳಿಕೆ ಪಂಚಾಯತು ವ್ಯಾಪ್ತಿಯ ಕಾಯರ್ಕಟ್ಟೆ  ಶ್ರೀ ಅಯ್ಯಪ್ಪ  ಭಜನಾ ಮಂದಿರದ 16ನೇ ವಾಷರ್ಿಕೋತ್ಸವದ ಅಂಗವಾಗಿ ಮಂದಿರದ ಪರಿಸರದಲ್ಲಿ  ಅಳವಡಿಸಲಾಗಿದ್ದ  ಬೃಹತ್ ಗಾತ್ರದ ಬ್ಯಾನರ್ನ್ನು  ಕಿಡಿಗೇಡಿಗಳು ಹರಿದು ನಾಶಗೊಳಿಸಿದ್ದು , ಈ ಘಟನೆಯನ್ನು  ವಿಶ್ವ ಹಿಂದು ಪರಿಷತ್ನ ಪೈವಳಿಕೆ ಖಂಡ (ಪಂಚಾಯತ್) ಸಮಿತಿಯು ಅತ್ಯುಗ್ರವಾಗಿ ಖಂಡಿಸಿದೆ.
   ಕಾಯರ್ಕಟ್ಟೆ , ಪೈವಳಿಕೆ, ಚಿಪ್ಪಾರುಪದವು, ಮುಳಿಗದ್ದೆ  ಮುಂತಾದ ಪ್ರದೇಶಗಳು ಸಾಮರಸ್ಯ ಹೊಂದಿರುವ ಪ್ರದೇಶಗಳಾಗಿವೆ. ಅದರಲ್ಲೂ  ಕಾಯರ್ಕಟ್ಟೆಯಲ್ಲಿ  ಎಲ್ಲಾ  ವಿಭಾಗದ ಜನರೂ ಒಮ್ಮತದಿಂದಿದ್ದು , ಯಾವುದೇ ಅಹಿತಕರ ಘಟನೆಗಳಿಗೆ ಇಲ್ಲಿ  ಆಸ್ಪದ ನೀಡುವುದಿಲ್ಲ. ಅಂತಹ ಸನ್ನಿವೇಶವಿದ್ದರೂ, ಯಾರೋ ದೇಶದ್ರೋಹಿಗಳು ಹಾಗೂ ಹಿಂದು ದೇಗುಲಗಳ ಮತ್ತು  ಹಿಂದು ಸಮಾಜದ ವಿರೋಧಿಗಳು ರಾತ್ರಿ ಹೊತ್ತಲ್ಲಿ  ಬಂದು ಬ್ಯಾನರ್ನ್ನು  ಹರಿದು ಛಿದ್ರಗೊಳಿಸಿ ಸಾಮಾಜಿಕ ಸ್ವಾಥ್ಯ ಕೆಡಿಸಲು ಪ್ರಯತ್ನಿಸಿದ್ದಾರೆ ಎಂದು ವಿಹಿಂಪ ಆಕ್ರೋಶ ವ್ಯಕ್ತಪಡಿಸಿದೆ.
   ಈ ಮೂಲಕ ಮತಾಂಧ ಶಕ್ತಿಗಳು ಕಾಯರ್ಕಟ್ಟೆ  ಆಸುಪಾಸಿನಲ್ಲಿ  ಕುಕೃತ್ಯ ಆರಂಭಿಸಿದ್ದು , ಆದರೆ ಹಿಂದು ತರುಣರು ಇದಕ್ಕೆ ಆಸ್ಪದ ನೀಡಲಾರರು. ಮತೀಯವಾದಿಗಳು ಇನ್ನಾದರೂ ಸಾಮರಸ್ಯ, ಸಹಬಾಳ್ವೆ, ಶಾಂತಿ, ನೆಮ್ಮದಿಯ ಬದುಕಿಗೆ ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ  ಅಥವಾ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ  ಅವರದೇ ಶೈಲಿಯಲ್ಲಿ  ಸೂಕ್ತ  ಉತ್ತರ ನೀಡಲಾಗುವುದು. ಸಮಾಜವನ್ನು  ಹಾಳು ಮಾಡುವ ವ್ಯಕ್ತಿ  ಎಷ್ಟೇ ದೊಡ್ಡವರಾಗಿದ್ದರೂ ತಕ್ಕ ಛಾಟಿಯೇಟು ಕೊಡಲಾಗುವುದು ಎಂದು ವಿಶ್ವ ಹಿಂದು ಪರಿಷತ್ನ ಪೈವಳಿಕೆ ಪಂಚಾಯತ್ ಸಮಿತಿಯ ಅಧ್ಯಕ್ಷ  ಮೋಹನ ಬಲ್ಲಾಳ್ ಚಿಪ್ಪಾರುಪದವು ಪತ್ರಿಕಾ ಪ್ರಕಟಣೆಯಲ್ಲಿ  ಎಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries